Category: ಜಿಲ್ಲಾ

ಫೆ.15ರಂದು ಶ್ರೀ ಹೊಳೆ ಹುಚ್ಚೇಶ್ವರ ಜಾತ್ರೆ ಹಾಗೂ “ನೀರಲಗಿ ಉತ್ಸವ-2026”

ತಾಳಿಕೋಟಿ: ತಾಲೂಕಿನ ನೀರಲಗಿ ಗ್ರಾಮದಲ್ಲಿ ಇದೇ ಫೆಬ್ರವರಿ 15 ರಂದು ಶ್ರೀ ಹೊಳೆ ಹುಚ್ಚೇಶ್ವರ ಮೂರ್ತಿ ಪ್ರತಿಷ್ಠಾಪನೆಯ ಜಾತ್ರಾ ಮಹೋತ್ಸವ ಜರುಗಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು , ಮೊದಲನೇಯದಾಗಿ ಪುರಾಣ ಪ್ರವಚನ ಕಾರ್ಯಕ್ರಮವನ್ನು ಶ್ರೀ ಹುಚ್ಚೇಶ್ವರ ಸಂಸ್ಥಾನ…

ಮಸ್ಕಿಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಮಾಜಿ ಸಿಎಂ ಯಡಿಯೂರಪ್ಪ ಅವರ ಹುಟ್ಟುಹಬ್ಬ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ, ಸಾರ್ವಜನಿಕರಿಗೆ ಸಿಹಿ ಹಂಚಿ ಹುಟ್ಟುಹಬ್ಬ ಆಚರಣೆ ಯಡಿಯೂರಪ್ಪನವರು ದೀನ ದಲಿತರ ಹಿಂದುಳಿದ ವರ್ಗದ ಆಶಾಕಿರಣ – ಮಾಜಿ ಶಾಸಕ ಪ್ರತಾಪಗೌಡ ಪಾಟೀಲ

ಮಸ್ಕಿ : ಪಟ್ಟಣದಲ್ಲಿ ಬಿಜೆಪಿ ಮಂಡಲ ವತಿಯಿಂದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಹುಟ್ಟುಹಬ್ಬವನ್ನು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರು ಇಲ್ಲಿನ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಿ ಹಾಗೂ ಮಸ್ಕಿ ಹಳೆ ಬಸ್ ನಿಲ್ದಾಣದಲ್ಲಿ ವ್ಯಾಪಾರಿಗಳಿಗೆ ಮತ್ತು ಸಾರ್ವಜನಿಕರಿಗೆ…

ಸೋಮಲಾಪುರದಲ್ಲಿ 40 ವರ್ಷಗಳಿಂದ 80 ಬಡ ಕುಟುಂಬಗಳು ವಾಸ ಪ್ರಭಾವಿ ವ್ಯಕ್ತಿಗಳಿಂದ ಜೀವ ಬೆದರಿಕೆ, ಬಡವರನ್ನ ಒಕ್ಕಲೆಬ್ಬಿಸುವ ಕುತಂತ್ರ!

ಸಿಂಧನೂರು ತಾಲೂಕಿನ ಸಾಲಗುಂದ ಹೋಬಳಿಯ ಸೋಮಲಾಪುರ ಗ್ರಾಮದಲ್ಲಿ ಸರ್ವೆ ನಂ-197|1 ಮತ್ತು 198|2 ರಲ್ಲಿ ಈಗಾಗಲೇ ಸುಮಾರು 40 ವರ್ಷಗಳಿಂದ ವಾಸ ಮಾಡುತ್ತಿರುವ ಎಲ್ಲಾ ಸಮುದಾಯದ 80ಕ್ಕೂ ಹೆಚ್ಚು ಬಡ ಕುಟುಂಬಗಳನ್ನು ಒಕ್ಕಲೆಬ್ಬಿಸುವಂತಹ ತಂತ್ರಗಾರಿಕೆ ನಡೆಯುತ್ತಿದೆ ಎಂದು ಸೋಮಲಾಪುರ ನಿವಾಸಿಗರು ಆರೋಪ…

ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎನ್ ಎಸ್ ಎಸ್ ಶಿಭಿರಾರ್ಥಿಗಳು ಪಾತ್ರ ಮಹತ್ತರವಾದದ್ದು— ತಹಸಿಲ್ದಾರ್ ಅರುಣಕುಮಾರ ದೇಸಾಯಿ

ಸಿಂಧನೂರು ತಾಲೂಕಿನ ಅಂಬಾಮಠದಲ್ಲಿ ನಡೆದ ನೊಬಲ್ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಧ್ವಜಾರೋಹಣ ಮಾತನಾಡಿದ ಅವರು ಶ್ರಮವಿಲ್ಲದ ಎಲ್ಲವೂ ಸಿಗಬೇಕು ಎನ್ನುವಂತಹ ಕಾಲದಲ್ಲಿ ನಾವಿದ್ದೀವಿ. ಆದರೆ ಅದಕ್ಕೆ ಸಿಗುವಂತಹ ಫಲ ಕ್ಷಣಿಕವಾದದ್ದು, ಅದರಿಂದ ಈ…

ಕಲಾಕೃತಿಯಲ್ಲಿ ಮಣ್ಣಿನ ಮಡಿಕೆಗಳನ್ನು ಅಲಂಕಾರಗೊಳಿಸಿ ಕಾಳು ಮತ್ತು ನೀರು ಹಾಕಿ ಗಿಡಮರಗಳಿಗೆ ಕಟ್ಟಿ ಪ್ರಾಣಿ ಪಕ್ಷಿಗಳಿಗೆ ಮಾನವೀಯತೆ ತೋರುತ್ತಿರುವ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ…. ರಾಜ್ಯ ಪ್ರಶಸ್ತಿ ಪುರಸ್ಕೃತ ವನಸಿರಿ ಅಮರೇಗೌಡ ಮಲ್ಲಾಪುರ ಸಿಂಧನೂರು ತಾಲೂಕಿನ ಮಲ್ಲಾಪುರ ಗ್ರಾಮದ ಉನ್ನತಿಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ವಿದ್ಯಾರ್ಥಿಗಳೇ ಮಡಿಕೆಗಳಿಗೆ ಕಲಾಕೃತಿಗಳನ್ನು ಬಿಡಿಸುವ ಮೂಲಕ ಅಲಂಕಾರಗೊಳಿಸಿ ಶಾಲೆಯಲ್ಲಿರುವ ಎಲ್ಲಾ ಗಿಡಗಳಿಗೆ ಮಡಿಕೆಗಳನ್ನು ಕಟ್ಟಿ ಕಾಳು ಮತ್ತು ನೀರು ಹಾಕಿ ಪ್ರಾಣಿ ಪಕ್ಷಿಗಳಿಗೆ ಬಿಸಿಲು ಮತ್ತು ನೀರಿನ ದಾಹ ತೀರಿಸಲು ಮುಂದಾಗಿರುವುದು ಎಲ್ಲ ಪರಿಸರ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾದರು. ಇದೇ ಸಂಧರ್ಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಪೌಂಡೇಷನ್ ರಾಜ್ಯಾಧ್ಯಕ್ಷ ಅಮರೇಗೌಡ ಮಲ್ಲಾಪುರ ಬೇಸಿಗೆ ಕಾಲ ಪ್ರಾರಂಭವಾಗಿರುವುದರಿಂದ ಮಲ್ಲಾಪುರ ಶಾಲೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ಗುಟುಕು ನೀರಿನ ಅರವಟ್ಟಿಗೆ ಅಭಿಯಾನ ಕೈಗೊಳ್ಳಲಾಗಿದೆ. ಇಲ್ಲಿನ ಶಾಲೆಯ ಶಿಕ್ಷಕರು,ವಿದ್ಯಾರ್ಥಿಗಳು ಬೇಸಿಗೆ ಕಾಲ ಆರಂಭವಾಗಿರುವುದರಿಂದ ಪ್ರಾಣಿ ಪಕ್ಷಿಗಳ ಸಂತತಿ ಉಳುವಿಗಾಗಿ ಸ್ವತಃ ತಾವೇ ಮಣ್ಣಿನ ಮಡಿಕೆಗಳಿಗೆ ಕಲಾಕೃತಿ ಮೂಲಕ ಅಲಂಕಾರಗೊಳಿಸಿ ಗಿಡಮರಗಳಿಗೆ ಕಟ್ಟಿ ಕಾಳು ಮತ್ತು ನೀರು ಹಾಕಿ ಮಾನವೀಯತೆ ತೋರುತ್ತಿರುವ ಕಾರ್ಯ ಶ್ಲಾಘನೀಯ.ಇದೇ ರೀತಿ ಪ್ರತಿಯೊಬ್ಬರೂ ತಮ್ಮ ಶಾಲೆ,ಮನೆ ಮಹಡಿಗಳ ಮೇಲೆ ಹಾಗೂ ಸುತ್ತಮುತ್ತ ಇರುವ ಗಿಡಗಳ ರಂಬೆ ಕೊಂಬೆಗಳಿಗೆ ಮಣ್ಣಿನ ಮಡಿಕೆಗಳನ್ನು ಕಟ್ಟಿ ಕಾಳು ನೀರು ಹಾಕಿ ಪ್ರಾಣಿ ಪಕ್ಷಿಗಳ ಸಂಕುಲ ಉಳಿಸಲು ಮುಂದಾಗಬೇಕು ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಷಣ್ಮುಖಗೌಡ CRP ಸಮೂಹ ಸಂಪನ್ಮೂಲ ಕೇಂದ್ರ ಪಗಡದಿನ್ನಿ,ಸಂಗಪ್ಪ ಮುಖ್ಯ ಗುರುಗಳು,ಶಿಕ್ಷಕರಾದ ಅಮರೇಶ, ವನಸಿರಿ ಪೌಂಡೇಷನ್ ರಾಜ್ಯ ಸಾಮಾಜಿಕ ಜಾಲತಾಣ ಅಧ್ಯಕ್ಷ ಚನ್ನಪ್ಪ ಕೆ.ಹೊಸಹಳ್ಳಿ,ಶ್ರೀಮತಿ ಅನುಸೂಯ ಶ್ರೀಮತಿ ಅಂಬಮ್ಮ ಶ್ರೀಮತಿ ಸುಗಮ್ಮ ಹಾಗೂ ವಿದ್ಯಾರ್ಥಿಗಳು ಇದ್ದರು .

ಕಲಾಕೃತಿಯಲ್ಲಿ ಮಣ್ಣಿನ ಮಡಿಕೆಗಳನ್ನು ಅಲಂಕಾರಗೊಳಿಸಿ ಕಾಳು ಮತ್ತು ನೀರು ಹಾಕಿ ಗಿಡಮರಗಳಿಗೆ ಕಟ್ಟಿ ಪ್ರಾಣಿ ಪಕ್ಷಿಗಳಿಗೆ ಮಾನವೀಯತೆ ತೋರುತ್ತಿರುವ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ…. ರಾಜ್ಯ ಪ್ರಶಸ್ತಿ ಪುರಸ್ಕೃತ ವನಸಿರಿ ಅಮರೇಗೌಡ ಮಲ್ಲಾಪುರ ಸಿಂಧನೂರು ತಾಲೂಕಿನ ಮಲ್ಲಾಪುರ ಗ್ರಾಮದ ಉನ್ನತಿಕರಿಸಿದ ಸರಕಾರಿ ಹಿರಿಯ…

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

ಸಿಂಧನೂರು : ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸುವಂತೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ’ ಫೆ. 24ರಂದು ಧಾರವಾಡದಲ್ಲಿ ನಡೆಸಿದ ಬೃಹತ್ ಪ್ರತಿಭಟನೆ. ಯುವಜನರ ಉದ್ಯೋಗದ ನಿರೀಕ್ಷೆಗಳಿಗೆ ಸ್ಪಂದಿಸದಿರುವ ರಾಜ್ಯ ಸರ್ಕಾರದ ವೈಫಲ್ಯಕ್ಕೆ…

ಜಾಲಹಳ್ಳಿಯಲ್ಲಿ ರೈತರ ಪರದಾಟ – ಸರ್ವರ್ ಸಮಸ್ಯೆಯಿಂದ FID-EKYC ಸ್ಥಗಿತ, ಬಿಸಿಲಿನಲ್ಲಿ ರೈತರ ಆಕ್ರೋಶ

ಜಾಲಹಳ್ಳಿ : ಫೆ 27ಗ್ರಾಮದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ FID-EKYC ಕಾರ್ಯಕ್ಕೆ ಭಾರಿ ಪ್ರಮಾಣದಲ್ಲಿ ರೈತರು ಜಮಾಯಿಸಿದರು. ಆದರೆ ಸರ್ವರ್ ಸಮಸ್ಯೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ ಹಿನ್ನೆಲೆಯಲ್ಲಿ ರೈತರು ಬಿಸಿಲಿನಲ್ಲಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಕೇಂದ್ರ ಸರ್ಕಾರದ ಯೋಜನೆಗಳಿಗೆ ಅಗತ್ಯವಿರುವ…

ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವ ಉದ್ಘಾಟನೆ

ರಾಯಚೂರು : ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಸರ್ಕಾರಿ ನೌಕರರು ಕೆಲಸ ಮಧ್ಯೆಯೇ ಕ್ರೀಡಾಚಟುಟಿಕೆಗಳಲ್ಲಿ ಭಾಗವಹಿಸಿ, ಮಾನಸಿಕ ಮತ್ತು ದೈಹಿಕ ಸದೃಢತೆ ಸಾಧಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕುಮಾರ್ ಕಾಂದೂ ಹೇಳಿದರು.ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು…

ರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವ

ರಾಯಚೂರು : ರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವ (ಜನ್ಮದಿನ)ದ ಪ್ರಯುಕ್ತ ಮಂಗಳವಾರ ಮಂತ್ರಾಲಯದ ಮಠದಲ್ಲಿ ಹಲವು ಧಾರ್ಮಿಕ ವಿಧಿವಿಧಾನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ಮಹಾ ಅಭಿಷೇಕ ನೆರವೇರಿಸಿಲಾಯಿತು. ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ…

ವಿಜೃಂಭಣೆಯಿಂದ ಜರುಗಿದ ಶ್ರೀ ಬಸವೇಶ್ವರ ಜಾತ್ರೆ

ಹಾಲಾಪೂರ: ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಈ ವರ್ಷವೂ ಸಹ ಶಿವರಾತ್ರಿ ಅಮಾವಾಸ್ಯೆಯ ನವಮಿಯಂದು ಜಾತ್ರಾ ನಿಮಿತ್ಯವಾಗಿ ಬೆಳಗಿನ ಜಾವ ರುದ್ರಭಿಷೇಕ, ಬಿಲ್ವಪತ್ರೆ, ಹೂವಿನ ಅಲಂಕಾರ ಪೂಜಾ ಕಾರ್ಯಕ್ರಮವನ್ನು ಶ್ರೀ ಬಸವರಾಜ ಸ್ವಾಮಿ ಕಾಳಹಸ್ತಿಮಠ, ಶ್ರೀ ಮಂಜುನಾಥಸ್ವಾಮಿ…