ಪಡಿತರ ಅಕ್ರಮ ಸಾಗಾಟ-ಲಾರಿ ವಶಕ್ಕೆ

ಕವಿತಾಳ:- ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟಮಾಡಲಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣವನ್ನು ಕವಿತಾಳ ಪೊಲೀಸರು ಪತ್ತೆ ಹಚ್ಚಿ ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಇಂದು ಬೆಳಗಿನ ಜಾವ ೪ಗಂಟೆಯ ಸುಮಾರಿಗೆ ಹಾಲಾಪೂರ ಗ್ರಾಮದ ಮನೆಯ ಮುಂದೆ…

ಮಸ್ಕಿ ತಾಲೂಕಿನ ವಿವಿಧೆಡೆ ಸಂತ ಸೇವಾಲಾಲ್ ಜಯಂತಿ ಆಚರಣೆ

ಮಸ್ಕಿ: ಪಟ್ಟಣದಲ್ಲಿ ತಾಲೂಕಾಡಳಿತದಿಂದ ಸಂತ ಸೇವಾಲಾಲ್ ೨೮೭ನೇ ಜಯಂತಿಯನ್ನು ಭಾನುವಾರ ಆಚರಿಸಲಾಯಿತು. ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕಾಡಳಿತದಿಂದ ಸಂತ ಸೇವಾಲಾಲ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಜಯಂತಿ ಆಚರಿಸಿದರು. ಬಂಜಾರ ಸಮಾಜದಿಂದ ಮುದಗಲ್ ಕ್ರಾಸ್‌ನಲ್ಲಿರುವ ಸಂತ ಸೇವಾಲಾಲ್ ವೃತ್ತದ ನಾಮಫಲಕಕ್ಕೆ…

ಶ್ರದ್ಧಾಭಕ್ತಿಯಿಂದ ಮಹಾಶಿವರಾತ್ರಿ ಆಚರಣೆ

ಮಸ್ಕಿ : ಪದ್ಮಶಾಲಿ (ನೇಕಾರ) ಸಮಾಜದ ಕುಲದೇವರಾಗಿರುವ ಹಾಗೂ ಶಿವನ ಮಹಾನ್ ಭಕ್ತನಾಗಿದ್ದ ಶ್ರೀ ಭಕ್ತ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಭಕ್ತಿಭಾವದಿಂದ ಮತ್ತು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಭಕ್ತರ ಸಂಚಾರ ಹೆಚ್ಚಾಗಿದ್ದು, ವಿಶೇಷ ಪೂಜೆ, ಅಭಿಷೇಕ, ಪುಷ್ಪಾರ್ಚನೆ,…

ಶಿವನನ್ನೊಲಿಸಿಕೊಂಡ ಬೇಡರ ಕಣ್ಣಪ್ಪ

ಇಂದಿನ ಆಂಧ್ರಪ್ರದೇಶದ ಶ್ರೀ ಕಾಳಹಸ್ತಿಯಲ್ಲಿ. ಅಲ್ಲಿನ ದಟ್ಟಾರಣ್ಯದಲ್ಲಿ ಶಿವಲಿಂಗವೊಂದಿತ್ತು. ಅರ್ಚಕರೊಬ್ಬರು ಪ್ರತಿದಿನ ವಿಧಿವತ್ತಾಗಿ ಪೂಜೆ ಸಲ್ಲಿಸುತ್ತಿದ್ದರು . ಆ ಕಾಡಿನಲ್ಲೇ ಬೇಡರ ಗುಂಪೊಂದು ವಾಸವಾಗಿತ್ತು. ಅದರ ಮುಖ್ಯಸ್ಥನೇ ಕಣ್ಣಪ್ಪ (ತಿನ್ನ) . ಒಂದು ದಿನ ಬೇಟೆಯಾಡಲು ಬಂದ ಕಣ್ಣಪ್ಪ, ಆ ದೇವಸ್ಥಾನವನ್ನು…

ಸಮಾಜದ ಸರ್ವಾಂಗೀಣ ಪ್ರಗತಿಗೆ ಒಗ್ಗಟ್ಟು ಅಗತ್ಯ: ಶಾಸಕ ನಾಡಗೌಡ

ತಾಳಿಕೋಟಿ: ಸಮಾಜದಲ್ಲಿ ಆರ್ಥಿಕ ರಾಜಕೀಯ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಸಣ್ಣ ಸಮಾಜಗಳನ್ನು ಮುಖ್ಯವಾಹಿನಿಗೆ ತರುವ ಕಾರ್ಯವಾಗಬೇಕಾಗಿದೆ ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಅಪ್ಪಾಜಿ ನಾಡಗೌಡ ಹೇಳಿದರು. ರವಿವಾರ ಪಟ್ಟಣದ ವಿದ್ಯಾಭಾರತಿ ಪ್ರೌಢಶಾಲೆ ಆವರಣದಲ್ಲಿ ಶ್ರೀ ನಿಜ ಶರಣ…

ಸರ್ವಜ್ಞ ವಿದ್ಯಾಪೀಠದಲ್ಲಿ ಸೇವಾಲಾಲ್ ಜಯಂತಿ ಆಚರಣೆ

ತಾಳಿಕೋಟಿ: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶ್ರೀ ಸಂತ ಸೇವಾಲಾಲರ 287 ನೇ ಜಯಂತೋತ್ಸವವನ್ನು ರವಿವಾರ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ ಮುಖ್ಯಗುರುಗಳಾದ ಸಂತೋಷ ಪವಾರ, ಸಿಬ್ಬಂದಿ ವರ್ಗದವರಾದ ಸಿದ್ದನಗೌಡ…

ಶಿಕ್ಷಣದ ಜೊತೆ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ: ಡಾ.ಪ್ರಭುಗೌಡ

ತಾಳಿಕೋಟಿ: ಮನುಷ್ಯ ಸಂಪಾದಿಸುವ ಸಕಲ ಸಂಪತ್ತುಗಳಲ್ಲಿ ವಿದ್ಯೆ ಸರ್ವಶ್ರೇಷ್ಠ ಸಂಪತ್ತಾಗಿದೆ ಅದು ನಮ್ಮ ಬದುಕಿಗೆ ಘನತೆ ತಂದು ಕೊಡುತ್ತದೆ. ಸಮುದಾಯಗಳ ಪ್ರಗತಿ ಹಾಗೂ ಅವನತಿ ಶಿಕ್ಷಣವನ್ನೇ ಅವಲಂಬಿಸಿದೆ ಎಂದು ಖ್ಯಾತ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು. ಪಟ್ಟಣದ ರಿಲಾಯನ್ಸ್ ಎಜುಕೇಷನ್…

ರೈತರಿಗೆ ಎಲ್ಲೇ ಅನ್ಯಾಯವಾದರೂ ಹೋರಾಟಕ್ಕೆ ರೈತ ಸೇನೆ ಸದಾ ಸಿದ್ದ : ಮುಜಾಹಿದ್ ಮರ್ಚೆಡ್

ದೇವದುರ್ಗ ಪ್ರವಾಸಿ ಮಂದಿರದಲ್ಲಿ ವರದಿಗಾರರ ಜೊತೆ ಮಾತನಾಡಿದ ಜಿಲ್ಲಾ ಕಾರ್ಯಧ್ಯಕ್ಷರಾದ ಮುಜಾಹಿದ್ ಮರ್ಚೆಡ್ ಅವರು, ರೈತರ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಲು ರೈತ ಸೇನೆ ಸದಾ ಸಿದ್ಧವಾಗಿದೆ ಎಂದು ತಿಳಿಸಿದರು. ದಿನಾಂಕ 15-02-2026ರಂದು ಬೆಳಿಗ್ಗೆ ರಾಯಚೂರು ತಾಲೂಕಿನ ಜೆ. ಮಲ್ಲಾಪೂರು ಗ್ರಾಮದಲ್ಲಿ…

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕು ವ್ಯಾಪ್ತಿಯ ಹೊಸೂರು ಸಿದ್ದಾಪುರ–ಜಾಲಹಳ್ಳಿ

ಜಾಲಹಳ್ಳಿ : ಗ್ರಾಮದಲ್ಲಿ ಇಂದು 15.02.2026, ರವಿವಾರ ಶ್ರೀ ಪರಮಪೂಜ್ಯ ಗವಿಸಿದ್ದೇಶ್ವರ ತಾತನವರ 31ನೇ ರಥೋತ್ಸವ ಜಾತ್ರಾ ಮಹೋತ್ಸವ ಹಾಗೂ ಮೂರನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮ ಭಕ್ತಿಭಾವದಿಂದ ಜರುಗುತ್ತಿದೆ. ಇಂದು ರಾಯಚೂರು ಜಿಲ್ಲೆಯ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಎಚ್.…

ಹಾಲಾಪುರ: ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ದುಗ್ಗಮ್ಮ ದೇವಿ ಭಾವಚಿತ್ರ ಮೆರವಣಿಗೆ

ಹಾಲಾಪೂರ: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತವಾಗಿ ಗ್ರಾಮದ ಕರಿಯಪ್ಪ ಹಿರೇಕುರುಬರ ಅವರು ಕಳೆದ 35 ವರ್ಷಗಳಿಂದ ಶಿವರಾತ್ರಿ ದಿನದಂದು ತಮ್ಮ ಮನೆಯಿಂದ ಶ್ರೀ ದುಗ್ಗಮ್ಮ ದೇವಿಯ ಭಾವಚಿತ್ರ ಮೆರವಣಿಗೆಯು ಗಚ್ಚಿನ ಹೊಲದ ದೇವಸ್ಥಾನದವರೆಗೆ ಕುಂಭ, ಕಳಸ, ಡೊಳ್ಳು ಗಳೊಂದಿಗೆ ಬಹಳಷ್ಟು ಸುಮಂಗಲಯರಿಂದ ಈ…