ಕಡು ಬಡವರು, ಆರ್ಥಿಕ ದುರ್ಬಲ ವರ್ಗದವರು, ದೈನಂದಿನ ದುಡಿಮೆಯಿಂದಲೇ ಜೀವನ ನಿರ್ವಹಣೆ ಮಾಡಬೇಕಾದ ಕುಟುಂಬಗಳು ತುರ್ತು ಶಸ್ತ್ರಚಿಕಿತ್ಸೆಗಾಗಿ ಗುಣಮಟ್ಟದ ಆರೋಗ್ಯ ಚಿಕಿತ್ಸೆಯನ್ನು ಪಡೆಯಲು ಸಹಾಯಕವಾಗುವಂತೆ ಭಾರತ ಸರಕಾರ ಹಾಗೂ ಕರ್ನಾಟಕ ಸರಕಾರ ಜಂಟಿಯಾಗಿ ಹೃದಯ ಸಂಭಂದಿ, ಮೂತ್ರಪಿಂಡ, ಕಿಡ್ನಿ, ಕ್ಯಾನ್ಸ್‌ರ್, ಸುಟ್ಟಗಾಯಗಳು, ಗಂಭಿರ ಅಪಘಾತ, ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಕೆ, ಮೊಣಕಾಲು, ಸೊಂಟದ ಬದಲಿ ಚಿಕಿತ್ಸೆಯು ಸೇರಿದಂತೆ ಗಂಭೀರ ಖಾಯಿಲೆಗಳಿಗೆ ಒಟ್ಟು 1650 ವಿವಿಧ ಚಿಕಿತ್ಸಾ ವಿಧಾನಗಳಿಗೆ ಉಚಿತ ಚಿಕಿತ್ಸೆಯನ್ನು ಆಯುಷ್ಮಾನ್ ಭಾರತ- ಪ್ರಧಾನಮಂತ್ರಿ ಜನಾರೋಗ್ಯ ಯೋಜನಾ- ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ( ಎಬಿ-ಪಿಎಮ್‌ಜೆವೈ-ಸಿಎಮ್-ಆರ್‌ಕೆ ) ಯೋಜನೆಯಡಿ ಜಿಲ್ಲೆಯ ಎಲ್ಲ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಸೇವೆ, ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಇದರ ಜೊತೆಗೆ ಜಿಲ್ಲೆಯಲ್ಲಿ ಯೋಜನೆಯ ಪರಿಣಾಮಕಾರಿ ಅನುಷ್ಟಾನಕ್ಕಾಗಿ ಜನರಿಗೆ ಸೇವೆ ಒದಗಿಸಲು ಸರಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡ ನೋಂದಾಯಿತ ಖಾಸಗಿ ಆಸ್ಪತ್ರೆಗಳ ಮೂಲಕ ಫಲಾನುಭವಿಗಳಿಗೆ ಉಚಿತ ಚಿಕಿತ್ಸೆಯನ್ನು ಒದಗಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಸುರೇಂದ್ರ ಬಾಬು ಜನತೆಗೆ ವಿನಂತಿಸಿದ್ದಾರೆ
ರಾಯಚೂರು ಲೋಕಸಭಾ ಕ್ಷೇತ್ರದ ಸಂಸದರು Sri ಜಿ. ಕುಮಾರ ನಾಯಕ ರವರ ಅಧ್ಯಕ್ಷತೆಯ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದೀಶಾ) ಸಭೆಯಲ್ಲಿ ಸೂಚಿಸಿದಂತೆ ಈಗಾಗಲೆ ಯೋಜನೆಯ ಕುರಿತು ಜನತೆಗೆ ಸಿಬ್ಬಂದಿಯವರ ಮೂಲಕ ಮಾಹಿತಿ ನೀಡಲಾಗುತ್ತಿದ್ದು, ಜಿಲ್ಲೆಯ ಪ್ರತಿ ನಾಗರಿಕರು ಯೋಜನೆಯಡಿ ಸೌಲಭ್ಯ ಪಡೆದು ಆರ್ಥಿಕ ಹೊರೆಯಿಂದ ಮುಕ್ತರಾಗಲು ಸದುಪಯೋಗಕ್ಕಾಗಿ ವಿನಂತಿಸಿದ್ದಾರೆ.
ಯೋಜನೆಯಡಿ ತಜ್ಞತೆಯ ಚಿಕಿತ್ಸಾ ಸೌಲಭ್ಯ:
ತುರ್ತು ಸಂದರ್ಭಗಳಲ್ಲಿ 169 ಚಿಕಿತ್ಸಾ ವಿಧಾನ ಸೌಲಭ್ಯ, ಗಂಭೀರ ಆರೋಗ್ಯ ಸಮಸ್ಯೆಗಳಿಗೆ 900 ಚಿಕಿತ್ಸಾ ವಿಧಾನ ಸೌಲಭ್ಯ, ದ್ವಿತೀಯ ಹಂತದ 254 ಚಿಕಿತ್ಸಾ ವಿಧಾನಗಳು, ಪ್ರಾಥಮಿಕ ಹಂತದ 40 ಚಿಕಿತ್ಸಾ ವಿಧಾನ ಸೇರಿದಂತೆ ಒಟ್ಟು 1650 ವಿವಿಧ ಚಿಕಿತ್ಸಾ ವಿಧಾನಗಳನ್ನು ಉಚಿತವಾಗಿ ಒದಗಿಸಲಾಗುವುದು.
ಯೋಜನೆಯ ಫಲಾನುಭವಿಗಳು:
ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ ಸದಸ್ಯರಿಗೆ ವಾರ್ಷಿಕ ರೂಪಾಯಿ 5 ಲಕ್ಷಗಳ ವರೆಗೆ ಉಚಿತ ಚಿಕಿತ್ಸಾ ವೆಚ್ಚ ಭರಿಸಲಾಗುವುದು. ಎಪಿಎಲ್ ಕಾರ್ಡ್‌ದಾರರಿಗೆ ವಾರ್ಷಿಕ ರೂಪಾಯಿ ಒಂದು ಲಕ್ಷ ಐವತ್ತು ಸಾವಿರಗಳ ವರೆಗೆ ಉಚಿತ ಚಿಕಿತ್ಸಾ ವೆಚ್ಚದ ಸೌಲಭ್ಯವಿದೆ.
ಜಿಲ್ಲೆಯಲ್ಲಿ ತಜ್ಞತೆಯ ಅನುಸಾರ ಚಿಕಿತ್ಸೆ ನೀಡುವ ನೋಂದಾಯಿತ ವಿವಿಧ ಖಾಸಗಿ ಆಸ್ಪತ್ರೆಗಳ ವಿವರ

