ಸಿಂಧನೂರು : ಪದ್ಮಾವತಿ ಪಾಟೀಲ್ ಪ್ರತಾಪಗೌಡ ಪಾಟೀಲ್ ಮಾಜಿ ಶಾಸಕರು ಮಸ್ಕಿ ವಿಧಾನಸಭಾ ಕ್ಷೇತ್ರ ಆದರ್ಶ ದಂಪತಿಗಳ ಮಗನಾದ ಮಸ್ಕಿ ವಿಧಾನಸಭಾ ಕ್ಷೇತ್ರದ ಯುವ ಚೇತನ ಯುವಕರ ಕಣ್ಮಣಿಯಾದ ಪ್ರತಾಪಗೌಡ ಪಾಟೀಲ್ ಫೌಂಡೇಶನ್ ನ ಅಧ್ಯಕ್ಷರಾದ ಪ್ರಸನ್ನ ಪಾಟೀಲ್ ಅವರ 40ನೇ ವರ್ಷದ ಜನ್ಮ ಸಾರ್ಥಕ ದಿನವನ್ನು ಪ್ರತಾಪಗೌಡ ಪಾಟೀಲ್ ಅಭಿಮಾನಿ ಬಳಗ ಸಿಂಧನೂರು ಹಾಗೂ ಮಸ್ಕಿ ಇವರಗಳ ವತಿಯಿಂದ ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ದೇವರಾಜ ಜಾಲವಾಡಗಿ ಹಾಗೂ ಶರಣಬಸವ ಪಾಟೀಲ್ ನಾಗರಬೆಂಚಿ ಇವರುಗಳ ವತಿಯಿಂದ ಮಹಾಪ್ರಸಾದ ಸೇವೆ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ” ನಿಮ್ಮೊಂದಿಗೆ ನಾವಿದ್ದೇವೆ” ಎನ್ನುವ ವಿಶೇಷ ಕಾರ್ಯಕ್ರಮದಡಿಯಲ್ಲಿ ಅರ್ಥಪೂರ್ಣವಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಕಾರುಣ್ಯ ಕುಟುಂಬದಿಂದ ಪ್ರಸನ್ನ ಪಾಟೀಲ್ ಅವರನ್ನು ಹಾಗೂ ಸಿಂಧನೂರು ತಾಲೂಕ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ದುರುಗೇಶ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಪ್ರತಾಪಗೌಡ ಪಾಟೀಲ್ ಫೌಂಡೇಶನ್ ನ ಅಧ್ಯಕ್ಷರಾದ ಪ್ರಸನ್ನ ಪಾಟೀಲ್ ಮಾತನಾಡಿ ಸಿಂಧನೂರು ಹಾಗೂ ಮಸ್ಕಿ ಕ್ಷೇತ್ರದ ಗುರುಹಿರಿಯರು ಹಾಗೂ ಯುವಕರು ನಮ್ಮ ಕುಟುಂಬದ ಮೇಲಿಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾವು ಚಿರಋಣಿಯಾಗಿದ್ದೇವೆ. ಇಂದಿನ ನನ್ನ ಈ ಜನ್ಮ ಸಾರ್ಥಕ ದಿನ ಕಾರುಣ್ಯ ಕುಟುಂಬದಲ್ಲಿ ಆಶ್ರಯ ಪಡೆದಿರುವ ಎಲ್ಲಾ ಶರಣರ ಆಶೀರ್ವಾದ ಸ್ವೀಕರಿಸಿ ಧನ್ಯನಾದೆನು ನಮ್ಮ ಭಾರತೀಯ ಸಂಸ್ಕೃತಿ ಉಳಿಯಬೇಕಾದರೆ ನಾವೆಲ್ಲರೂ ಹಿರಿಯರನ್ನು ಗೌರವಿಸಬೇಕು. ನನ್ನ ಹೆತ್ತವರು ಹಾಗೂ ನಮ್ಮ ಕುಟುಂಬದ ಅಭಿಮಾನಿಗಳು ನನಗೆ ಸಂಸ್ಕೃತಿಯ ಪಾಠವನ್ನು ಮಾಡಿ ಸಮಾಜದಲ್ಲಿ ನಾವು ಮಾಡುವ ಅನೇಕ ಕಾರ್ಯಗಳಿಗೆ ಕಾರಣೀಕರ್ತರಾಗಿದ್ದಾರೆ. ವೃದ್ಧಾಶ್ರಮಗಳು ಹೆಚ್ಚಾದಂತೆಲ್ಲ ಮನುಷ್ಯರಲ್ಲಿ ಮಾನವೀಯತೆ ಗುಣ ಉಳಿದಿಲ್ಲ ಎಂದರ್ಥ ಸುಮಾರು ವರ್ಷಗಳಿಂದ ಈ ಕಾರುಣ್ಯ ಕುಟುಂಬದ ಸೇವೆಯನ್ನು ನಮ್ಮ ಕುಟುಂಬ ಅರಿತುಕೊಂಡಿದೆ. ಇಂತಹ ಪ್ರಾಮಾಣಿಕ ಸೇವೆಗೆ ಸರ್ಕಾರ ಮತ್ತು ಸರ್ವ ನಾಗರಿಕರು ಸಹಾಯ ಸಹಕಾರ ತೋರಿದಾಗ ಮಾತ್ರ ನಾವುಗಳು ಭಾರತಾಂಬೆಯ ಮಡಿಲಿನ ಮಕ್ಕಳಾಗುತ್ತೇವೆ. ಈಗಾಗಲೇ ಆಶ್ರಮದ ಸಂಸ್ಥಾಪಕರಾದ ಚನ್ನಬಸಯ್ಯ ಸ್ವಾಮಿಯವರು ಇದನ್ನು ಕರ್ಮಭೂಮಿ ಎಂದು ಹೇಳಿದರು. ನನ್ನ ಅನಿಸಿಕೆಯ ಪ್ರಕಾರ ನಮ್ಮ ಸಿಂಧನೂರಿನ ಕಾರುಣ್ಯಾಶ್ರಮವು ಕರ್ಮಭೂಮಿಯಲ್ಲ ಇದು ಪುಣ್ಯಭೂಮಿ ಏಕೆಂದರೆ ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಈ ಪುಣ್ಯ ಪ್ರೇಮಿಯಲ್ಲಿ ಆಶ್ರಯ ಪಡೆಯುತ್ತಿರುವ ಆಶ್ರಯದಾತರುಗಳು ದೇವರ ಮಕ್ಕಳಾಗಿದ್ದಾರೆ. ಇವರುಗಳ ಸೇವೆ ನಾವು ನೀವೆಲ್ಲರೂ ಮಾಡಿದಾಗ ಮಾತ್ರ ದೇವರಿಗೆ ನಾವೆಲ್ಲರೂ ಇಷ್ಟವಾಗಿ ನಮ್ಮ ಸಂಕಲ್ಪಗಳನ್ನು ದೇವರು ಈಡೇರಿಸುತ್ತಾನೆ. ಚಿಕ್ಕ ಗ್ರಾಮವಾದ ಹರೆಟನೂರಿನ ಕಡುಬಡತನದ ಜಂಗಮನ ಕುಟುಂಬ ತನ್ನ ಜೋಳಿಗೆ ಮೂಲಕ ಇಂತಹ ಸೇವಾ ಕಾರ್ಯಕ್ಕೆ ಜೀವನ ಮುಡಿಪಾಗಿಟ್ಟಿರುವುದು ಜಂಗಮ ಎನ್ನುವ ಸಂಸ್ಕೃತಿಗೆ ಸಂಪೂರ್ಣ ಅರ್ಥ ಕಲ್ಪಿಸಿಕೊಟ್ಟಿದೆ. ಇಂದಿನ ಈ ಪುಣ್ಯಕ್ಷೇತ್ರದಲ್ಲಿ ಹರಸಿ ಹಾರೈಸಿ ಆಶೀರ್ವದಿಸಿರುವ ಆಶ್ರಯದಾತರುಗಳಿಗೆ ಹಾಗೂ ನನ್ನೆಲ್ಲಾ ಕಾರ್ಯಕರ್ತರಿಗೆ ಸ್ನೇಹಿತರುಗಳಿಗೆ ಹೃದಯಪೂರ್ವಕ ಹೃತ್ಪೂರ್ವಕ ಧನ್ಯವಾದಗಳು ಎಂದು ಭಾವನಾತ್ಮಕವಾಗಿ ಮಾತನಾಡಿ ಕಾರುಣ್ಯಾಶ್ರಮದ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಟ್ಟು ಬರ್ಸಿ ಅಧ್ಯಕ್ಷರು ಯುವ ಮೋರ್ಚಾ ಸಿಂಧನೂರು ನಗರ ಘಟಕ. ಲಕ್ಷ್ಮಣ ವಕೀಲರು ಜಿಲ್ಲಾ ಉಪಾಧ್ಯಕ್ಷರು ಬಿ.ಜೆ.ಪಿ. ಎಸ್. ಟಿ.ಮೋರ್ಚಾ. ದುರುಗೇಶ ವಕೀಲರು ಕಾರ್ಯದರ್ಶಿಗಳು ವಕೀಲರ ಸಂಘ ಸಿಂಧನೂರು. ಶರಣಬಸವ ಉಮಲೂಟಿ ವಕೀಲರು ಬಿಜೆಪಿ ರಾಜ್ಯ ವಕ್ತಾರರು ಬೆಂಗಳೂರು. ದೇವರಾಜ ಜಾಲವಾಡಗಿ ಬಿಜೆಪಿ ಯುವ ಮುಖಂಡರು. ನಿರುಪಾದಿ ಮಾಜಿ ಅಧ್ಯಕ್ಷರು ನಗರ ಓಬಿಸಿ ಮೋರ್ಚಾ ಸಿಂಧನೂರು. ಶರಣಬಸವ ಪಾಟೀಲ್ ನಾಗರಬೆಂಚಿ ಪ್ರತಾಪ್ ಗೌಡ ಪಾಟೀಲ್ ಮಾಜಿ ಶಾಸಕರ ಆಪ್ತ ಸಹಾಯಕರು. ಹೊಸಗೆರಪ್ಪ ಗುಂಜಳ್ಳಿ ಯುವ ಮುಖಂಡರು ಬಿಜೆಪಿ. ಶಿವರಾಜ ತುರುವಿಹಾಳ ಬಿಜೆಪಿ ಯುವ ಮುಖಂಡರು. ನಿರುಪಾದಿ ಉಪ್ಪಲದೊಡ್ಡಿ. ಪ್ರಮೋದ್ ಗುಂಜಳ್ಳಿ, ವಕೀಲರು. ಸೋಮನಾಥ ಕಲ್ಲೂರು ಅಧ್ಯಕ್ಷರು ಒಬಿಸಿ ಗ್ರಾಮೀಣ ಮೋರ್ಚಾ ಸಿಂಧನೂರು. ಗಂಗಾಧರ ಸ್ವಾಮಿ ಕಂಬಾಳಿ ಮಠ ಪ್ರಧಾನ ಕಾರ್ಯದರ್ಶಿಗಳು ಬಿಜೆಪಿ ಯುವ ಮೋರ್ಚಾ ಮಸ್ಕಿ. ರಮೇಶ ಗಾಳಿ ಯುವ ಮೋರ್ಚಾ ಮುಖಂಡರು ಸಿಂಧನೂರು. ಮನೋಜ್ ಪ್ರಧಾನ ಕಾರ್ಯದರ್ಶಿಗಳು ಯುವ ಮೋರ್ಚಾ ಬಿಜೆಪಿ ಸಿಂಧನೂರು. ಹಾಗೂ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ. ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದಗುಡ್ಡ. ಸಿದ್ದಯ್ಯ ಸ್ವಾಮಿ. ಮರಿಯಪ್ಪ. ಜ್ಯೋತಿ. ಮತ್ತು ಸಿಂಧನೂರು ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರದ ಪ್ರತಾಪ್ ಗೌಡ ಪಾಟೀಲ್ ಅಭಿಮಾನಿಗಳ ಸಂಘದ ಹಲವಾರು ಕಾರ್ಯಕರ್ತರುಗಳು ಮತ್ತು ಬಿಜೆಪಿ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.


