ರಾಯಚೂರು ಫೆಬ್ರವರಿ 23 (ಕರ್ನಾಟಕ ವಾರ್ತೆ): ಮೆಟ್ರಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1ರ ಅಲೆಮಾರಿ, ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ 2025-26ನೇ ಸಾಲಿಗೆ ಶುಲ್ಕ ಮರುಪಾವತಿ ಕಾರ್ಯಕ್ರಮದ ಸೌಲಭ್ಯಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿಯ ಅವಧಿಯನ್ನು ಮಾರ್ಚ್ 05ರವರೆಗೆ ವಿಸ್ತರಿಸಲಾಗಿದೆ.
ಪೋಷಕರು, ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಮನವಿಯ ಮೇರೆಗೆ ಅರ್ಜಿಯ ಅವಧಿಯನ್ನು ವಿಸ್ತರಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಈ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳವಂತೆ ಕೋರಲಾಗಿದೆ.
ಬಿ.ಆರ್ಕ್, ಎಂ.ಸಿ.ಎ, ಎಂ.ಸಿ.ಎಚ್ (ವೈದ್ಯಕೀಯ), ಎಂ.ಡಿ, ಎಂ.ಎಸ್ (ಮಾಸ್ಟರ್ ಆಫ್ ಸರ್ಜರಿ), ಎಂ.ಎಸ್, ಎಂ.ಎಸ್ಸಿ (ಅಲೈಡ್ ಸೈನ್ಸಸ್), ಎಂಪಿಟಿ (ಫಿಸಿಯೋಥೆರಪಿ), ಎಂಎಚ್‌ಎ, ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್, ಎಂಪಿಎಚ್ (ಅಲೈಡ್ ಸೈನ್ಸಸ್), ಎಂ.ಎಸ್ಸಿ. ನರ್ಸಿಂಗ್, ಎಂ.ಎಸ್ಸಿ, ಎಂ.ಟೆಕ್, ಎಂಬಿಎ, ಎಂಬಿಎ ಫಿನ್‌ಟೆಕ್, ಎಂಬಿಎ (ಲಾಜಿಸ್ಟಿಕ್ಸ್ ಮ್ಯಾನೇಜ್‌ಮೆಂಟ್), ಎಂಬಿಬಿಎಸ್, ಎಂಎಸ್ ಆಯುರ್ವೇದ, ಎಂಡಿ (ಆಯುರ್ವೇದ), ಎಂಡಿ (ಹೋಮ್), ಎಂಡಿಎಸ್, ಪಿಜಿ ಡಿಪ್ಲೊಮಾ ಇನ್ ಡೆಂಟಲ್, ಫಾರ್ಮ್.ಡಿ (ಪೋಸ್ಟ್ ಬ್ಯಾಕಲೌರಿಯೇಟ್), ಎಂ.ಫಾರ್ಮ್, ಬಿ.ಇ, ಬಿ.ಟೆಕ್, ಬಿ.ಎಸ್ಸಿ (ಆನರ್ಸ್), ಬಿ.ವಿ.ಎಸ್ಸಿ.&ಎ.ಎಚ್, ಬಿಎಎಂಎಸ್ (ಆಯುರ್ವೇದ), ಬಿಎಚ್‌ಎಂಎಸ್ (ಹೋಮಿಯೋಪತಿ), ಬಿಎನ್‌ವೈಎಸ್ (ಯೋಗ ಮತ್ತು ಪ್ರಕೃತಿ ಚಿಕಿತ್ಸೆ), ಬಿಯುಎಂಎಸ್ (ಯುನಾನಿ), ಬಿಎಎಂಎಸ್, ಬಿಡಿಎಸ್, ಎಂ.ಆರ್ಕ್, ಬಿ.ಎಫ್.ಎಸ್ಸಿ, ಬಿ.ಫಾರ್ಮ್, ಫಾರ್ಮ್. ಡಿ, ಬಿ.ಎಸ್ಸಿ (ಅಲೈಡ್ ಸೈನ್ಸಸ್), ಬಿಪಿಟಿ (ಫಿಸಿಯೋಥೆರಪಿ), ಬ್ಯಾಚುಲರ್ ಆಫ್ ಆಕ್ಯುಪೇಷನಲ್ ಥೆರಪಿ, ಬಿ.ಡೆಸ್, ಬಿ.ಎಸ್ಸಿ. (ನರ್ಸಿಂಗ್), ಬಿ.ಎಸ್ಸಿ. (ಪೋಸ್ಟ್ ಬೇಸಿಕ್), ಬಿ.ಎಡ್, ಬಿ.ಪ್ಲಾನ್, ಡಿಎಂ (ವೈದ್ಯಕೀಯ), ಎಂ.ಫಿಲ್, ಬಿ ಟೆಕ್ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ (ಪೂರ್ಣ ಸ್ಟ್ಯಾಕ್ ಡೆವಲಪ್ಮೆಂಟ್), ಬಿ ಟೆಕ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ (ಎಲೆಕ್ಟ್ರಿಕ್ ವೆಹಿಕಲ್ ಟೆಕ್ನಾಲಜಿ), ಪ್ಯಾರಾಮೆಡಿಕಲ್ ಮತ್ತು ಎಲ್ಲಾ ಡಿಪ್ಲೊಮಾ ಕೋರ್ಸ್ಗಳ ವಿದ್ಯಾರ್ಥಿಗಳು ಮಾರ್ಚ್ 05ರೊಳಗಾಗಿ ವೆಬ್‌ಸೈಟ್ ವಿಳಾಸ: https://ssp.postmatric.karnataka.gov.in ನಲ್ಲಿ ಸಲ್ಲಿಸಬಹುದಾಗಿದೆ.
ಕಾರ್ಯಕ್ರಮಗಳ ವಿವರ, ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳು ಹಾಗೂ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶಗಳ ಬಗ್ಗೆ ವೆಬ್‌ಸೈಟ್ ವಿಳಾಸ: https://bcwd.karnataka.gov.in ಮಾಹಿತಿಗಾಗಿ ಭೇಟಿ ನೀಡಬಹುದಾಗಿದೆ. ಇಲಾಖಾ ಸಹಾಯವಾಣಿ ದೂರವಾಣಿ ಸಂಖ್ಯೆ: 8050770004 ಅಥವಾ ಮೇಲ್: bcwdhelpline@gmail.com ರಾಜ್ಯ ವಿದ್ಯಾರ್ಥಿವೇತನ ತಂತ್ರಾAಶದ ಸಹಾಯವಾಣಿ ಇಮೇಲ್: postmatrichelp@karnataka.gov.in ಅಥವಾ ಸಹಾಯಣಿ ಸಂಖ್ಯೆ: 1902ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

