ಸಿಂಧನೂರು : ಪತ್ರಿಕೆಗಳು ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸ ಮಾಡಬೇಕು. ಆದರೆ ಇಂದು ಸುಳ್ಳು ಸುದ್ದಿ, ಅರೆ ಸತ್ಯ, ತಮಗೆ ಬೇಕಾಗಿದ ವಿಷಯ ವಸ್ತುವನ್ನು ಮಾತ್ರ ಸುದ್ದಿಯ ರೂಪದಲ್ಲಿ ನೀಡುವ ಕೆಲಸ ನಡೆಯುತ್ತಿದೆ. ವಾರ್ತಾಭಾರತಿ ಸೇರಿದಂತೆ ನೈಜ, ವಸ್ತುನಿಷ್ಠವಾಗಿ ಸುದ್ದಿ ನೀಡುವ ಮಾಧ್ಯಮಗಳಿಗೆ ನಾವೆಲ್ಲರೂ ಬೆಂಬಲಿಸಬೇಕಿದೆ ಎಂದು ಯದ್ದಲದೊಡ್ಡಿ ವಿರಕ್ತಮಠದ ಶ್ರೀ ಮಹಾಲಿಂಗ ಮಹಾಸ್ವಾಮಿ ಹೇಳಿದ್ದಾರೆ.
ವಾರ್ತಾ ಭಾರತಿಯ ಕಲ್ಯಾಣ ಕರ್ನಾಟಕ ಆವೃತ್ತಿ ಬಿಡುಗಡೆ ಪ್ರಯುಕ್ತ ಸಿಂಧನೂರು ತಾಲೂಕಿನ ಮಿಲಾಪ್ ಶಾದಿ ಮಹಲ್ ನಲ್ಲಿ ಏರ್ಪಡಿಸಿದ್ದ ಓದುಗರು, ವೀಕ್ಷಕರು ಹಾಗೂ ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ವಿರಕ್ತಮಠದ ಶ್ರೀ ಮಹಾಲಿಂಗ ಮಹಾಸ್ವಾಮಿ, ಇಂದಿನ ಪತ್ರಿಕೆಗಳಲ್ಲಿ ಏಕೆ ಮುಖವಾಗಿ ಕೆಲಸ ಮಾಡುತ್ತಿರುವುದು ವಿಷಾದನೀಯ ಸಂಗತಿ. ಅನೇಕ ಪತ್ರಿಕೆ ಆಳುವ ವರ್ಗದ ಪರವಾಗಿವೆ ಎಂದು ಆರೋಪವಿದೆ. ಆದ್ದರಿಂದ ನೈಜ ಸುದ್ದಿಗಳನ್ನು ಬಿತ್ತರಿಸುವ ಪತ್ರಿಕೆಗಳಿಗೆ ನಾವೆಲ್ಲರು ಬೆಂಬಲಿಸಬೇಕು ಎಂದು ಮನವಿ ಮಾಡಿದರು ಪ್ರಗತಿಪರ ಚಿಂತಕ ಚಂದ್ರಶೇಖರ ಗೋರೆಬಾಳ ಮಾತನಾಡಿ, ಆಧುನಿಕ ಯುಗದಲ್ಲಿ ಮಾಧ್ಯಮಗಳು ಕಾರ್ಪೋರೆಟ್ ಸಂಸ್ಥೆಗಳ ಕಪಿಮುಷ್ಠಿಯಲ್ಲಿದ್ದು ಸಾಮಾನ್ಯ ಜನರಿಂದ ದೂರವಾಗುತ್ತಿವೆ. ಜನರ ಧ್ವನಿಯಾಗಬೇಕಿದ್ದ ಮಾಧ್ಯಮಗಳು ಸಂಕ್ರಮಣ ಸ್ಥಿತಿಯಲ್ಲಿವೆ. ಸುದ್ದಿ ಸುದ್ದಿ ಸುದ್ದಿಯಾಗಿ ಉಳಿಯದೇ ಕಾರ್ಪೋರೇಟ್ ಜಾಲದಲ್ಲಿ ಬಂಧನವಾಗಿದೆ. ಇವೆಲ್ಲದರ ನಡುವೆ ನೈಜ ಸುದ್ದಿ ನೀಡುತ್ತಾ ವಾರ್ತಾಭಾರತಿ ಮಾಧ್ಯಮ ಪತ್ರಿಕಾ ಧರ್ಮವನ್ನು ಕಾಪಾಡಿಕೊಂಡಿವೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಡತನ, ನಿರುದ್ಯೋಗ, ಗುಳೆ ಸಮಸ್ಯೆ ಮಕ್ಕಳಲ್ಲಿ ಅಪೌಷ್ಟಿಕತೆ ಹಾಗೂ ಅನೇಕ ಜ್ವಲಂತ ಸಮಸ್ಯೆಗಳಿವೆ. ಹಿಂದುಳಿದ ಕಲ್ಯಾಣ ಕರ್ನಾಟಕ ಸುದ್ದಿ ನೀಡುವಲ್ಲಿಯೂ ಹಿಂದುಳಿದಂತೆ ಭಾಸವಾಗುತ್ತಿದೆ. ಜನಧ್ವನಿಯಾಗಿ ಕೆಲಸ ಮಾಡುವ ವಾರ್ತಾಭಾರತಿ ಪ್ರಾರಂಭವಾಗಿ 23 ವರ್ಷಗಳಾದರೂ ಈ ಭಾಗದಲ್ಲಿ ಶುರುವಾಗದಿದ್ದಕ್ಕೆ ಬೇಸರವಿತ್ತು. ಈಗ ಆರಂಭವಾಗುತ್ತಿದ್ದು ಸಾಕಷ್ಟು ಆಶಾಭಾವನೆ ಇದೆ. ತಡವಾಗಿಯಾದರೂ ಆರಂಭವಾಗಿದ್ದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದರು. ಸಿಪಿಐಎಂಎಲ್ ರಾಜ್ಯ ಮುಖಂಡ ಡಿ.ಹೆಚ್. ಪೂಜಾರ್ ಮಾತನಾಡಿ, ವಾರ್ತಾಭಾರತಿ ನನಗೆ ಹಳೆ ಪರಿಚಿತ ಪತ್ರಿಕೆ. ಹಿಂದೆ ಜನವಾಹಿನಿ, ಇಂದು ವಾರ್ತಾ ಭಾರತಿ ನನಗೆ ಮುಖ್ಯವಾಗಿದೆ. ಸಮಾಜಲ್ಲಿ ಶಾಂತಿ ಬಯಸುವ ಎಲ್ಲರೂ ಸರಿಯಾದ ಮಾಧ್ಯಮವನ್ನು ಬೆಳೆಸಬೇಕಾಗಿದೆ. ಇಂದು 90% ಮಾಧ್ಯಮಗಳು ಅದಾನಿ, ಅಂಬಾನಿಗಳ ಕೈಯಲ್ಲಿವೆ. ನಿಜ ಸಾರುವ ಪತ್ರಿಕೆಗಳು ಸಕಾಲದಲ್ಲಿವೆ. ಇದರಿಂದಾಗಿಇಂತಹ ಪತ್ರಿಕೆಯನ್ನು ನಾವು ಕೊಂಡು ಓದುವ ಮೂಲಕ ಬಲ ತುಂಬಬೇಕು ಎಂದು ಮನವಿ ಮಾಡಿದರು.
ಜಮಾಅತೆ ಇಸ್ಲಾಮಿ ಹಿಂದ್ ಸಿಂಧನೂರು ತಾಲೂಕು ಘಟಕದ ಅಧ್ಯಕ್ಷ ಮುಹಮ್ಮದ್ ಹುಸೇನ್ ಅವರು ಮಾತನಾಡಿ, ಪ್ರಜಾಪ್ರಭುತ್ವದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಪರಸ್ಪರ ತಮ್ಮ ಜವಾಬ್ದಾರಿ ನಿರ್ವಹಿಸಿದರೆ ಸಮಾಜ ನೆಮ್ಮದಿಯಾಗಿರುತ್ತದೆ. ನಾಲ್ಕನೇ ಅಂಗವಾಗಿ ಮಾಧ್ಯಮಕ್ಕೆ ಸ್ಥಾನ ನೀಡಿದ್ದು ಇದು ಉಳ್ಳವರ ಪರವಾಗಿರದೇ ಇಲ್ಲದವರ ಪರವಾಗಿರಬೇಕು. ಮಾಧ್ಯಮಗಳ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಜನಸಾಮಾನ್ಯರ, ಶೋಷಿತರ ಪರ ಧ್ವನಿಯಾಗಿ ಕೆಲಸ ಮಾಡುವ ಮಾಧ್ಯಮಗಳ ಜೊತೆ ನಿಲ್ಲುವುದು ನಮ್ಮ ಜವಾಬ್ದಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವೇಳೆ ವಾರ್ತಾಭಾರತಿ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಮ್ ಪುತ್ತಿಗೆ ಮಾತನಾಡಿ, ಬೇರೆ ಪತ್ರಿಕೆಗೂ ವಾರ್ತಾಭಾರತಿಗೂ ಬಹಳ ವ್ಯತ್ಯಾಸವಿದೆ. ನಮ್ಮ ಬೆಂಬಲಿಗರು ಓದುಗರು ಮತ್ತು ಸಾಮಾಜಿಕ ಕಳಕಳಿ ಇರುವ ಸದಸ್ಯರು. ನಾವು ಯಾವುದೇ ಜಾತಿ ಅಥವಾ ಪಕ್ಷದ ಮುಖವಾಣಿ ಆಗಲೂ ಬಯಸುವುದಿಲ್ಲ. ನಮ್ಮ ಪತ್ರಿಕೆಯಲ್ಲಿ ಮಾಹಿತಿ ಭಾಗ ಮತ್ತು ದಿನ ನಿತ್ಯದ ಸುದ್ದಿ ಭಾಗ ಇರುತ್ತದೆ. 23 ವರ್ಷಗಳಿಂದ ರಾಜಿ ಆಗದೆ ಸುದ್ದಿ ಬಿತ್ತರಿಸುತ್ತಾ ಬಂದಿದ್ದೇವೆ. ಡಿಸೆಂಬರ್ 20 ರಂದು ಕಲಬುರಗಿಯಿಂದ ಕಲ್ಯಾಣ ಕರ್ನಾಟಕ ಆವೃತ್ತಿ ಬಿಡುಗಡೆ ಕಲಬುರಗಿಯಲ್ಲಿ ನಡೆಯಲಿದ್ದು ತಾವೆಲ್ಲರೂ ನಮ್ಮ ಜೊತೆ ಇರಬೇಕು ಎಂದು ಹೇಳಿದರು.
ಈ ವೇಳೆ ಆರ್‌ಡಿ ಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮನಗೌಡ, ಜೀಲಾನಿ ಪಾಷಾ, ನೂರಾನಿ ಮಸ್ಟಿದ್ ಇಮಾಮ್ ಎ ಖತೀಬ್ ಮೌಲಾನಾ ತಾಜುದ್ದೀನ್ ಉಪಸ್ಥಿತರಿದ್ದರು. ಉಪನ್ಯಾಸಕರಾದ ಶಂಕರ್ ವಾಲೇಕರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಡಿಸೆಂಬರ್ 20ರಂದು ಬೆಳಿಗ್ಗೆ 10.30ಕ್ಕೆ ಕಲಬುರಗಿಯ ಎಸ್ ಎಂ ಪಂಡಿತ್ ರಂಗ ಮಂದಿರದಲ್ಲಿ ವಾರ್ತಾಭಾರತಿ ಕಲ್ಯಾಣ ಕರ್ನಾಟಕ ಆವೃತಿ ಬಿಡುಗಡೆಯಾಗಲಿದೆ. ಎಂದು ತಿಳಿಸಿದರು..
ಈ ಕಾರ್ಯಕ್ರಮದಲ್ಲಿ ಶ್ರೀ. ಮಹಾಲಿಂಗ ಸ್ವಾಮಿ ಯದ್ದಲದೊಡ್ಡಿ ವಿರಕ್ತ ಮಠ, ಸಿಂಧನೂರು
ಎಚ್.ಎನ್. ಬಡಿಗೇರ್ ದಲಿತಪರ ಹೋರಾಟಗಾರ ಡಿ.ಎಚ್. ಪೂಜಾರ್ ಸಿಪಿಐಎಂಎಲ್ ರಾಜ್ಯ ಮುಖಂಡ ಪರಶುರಾಮ ಚಿಲ್ಲೇರಿ ಹಿರಿಯ ಮುಖಂಡರು, ಸಿಂಧನೂರು
ಮೌಲಾನಾ ತಾಜಿಮುದ್ದೀನ್ ಸಹಾಬ್ ಇಮಾಮ್ ಓ ಖತೀಬ್ ನೂರಾನಿ ಮಸೀದಿ, ಸಿಂಧನೂರು
ಚಂದ್ರಶೇಖರ ಗೋರೇಬಾಳ ಪ್ರಗತಿಪರರು
ಮುಹಮ್ಮದ್ ಹುಸೈನ್ (RTD. BSNL ಅಧಿಕಾರಿ) ಅಧ್ಯಕ್ಷರು, ಜಮಾಅತೆ ಇಸ್ಲಾಮಿ ಹಿಂದ್, ಸಿಂಧನೂರು,
ಗೌರವ ಅತಿಥಿಗಳು
ಅಬ್ದುಸ್ಸಲಾಮ್ ಪುತ್ತಿಗೆ ಪ್ರಧಾನ ಸಂಪಾದಕರು, ವಾರ್ತಾಭಾರತಿ ಮಾಧ್ಯಮ ಸಂಸ್ಥೆ ಇನ್ನಿತರು ಉಪಸ್ಥಿತರಿದ್ದರು

