ಸಿಂಧನೂರು : ತಾಲ್ಲೂಕಿನ ಗುಂಜಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಮಕ್ಕಳಿಗೆ ಹತ್ತು ಸಾವಿರ ರೂ. ಗಳ ಮೌಲ್ಯದ 100 ಊಟದ ತಟ್ಟೆಗಳು ಹಾಗೂ 50 ಲೋಟಗಳನ್ನು ಸಾಸಲಮರಿ ಸರಕಾರಿ ನೌಕರರ ಬಳಗವು ದೇಣಿಗೆಯಾಗಿ ನೀಡಿದೆ.

ಈ ಸಂದರ್ಭದಲ್ಲಿ ಗುಂಜಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾದ ಪವಿತ್ರ ಮಾತನಾಡುತ್ತಾ ಸಾಸಲಮರಿ ಸರಕಾರಿ ನೌಕರರ ಬಳಗದ ಕಾರ್ಯ ಶ್ಲಾಘನೀಯವಾದುದ್ದು ಹಾಗೂ ಪ್ರತಿಯೊಂದು ಗ್ರಾಮದ ಸರಕಾರಿ ನೌಕರರು ಇಂತಹ ವಿನೂತನ ಕಾರ್ಯಕ್ಕೆ ಮುಂದಾಗುವುದರ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದರು.

ಗುಂಜಹಳ್ಳಿ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಹಾಗೂ ಸಾಸಲಮರಿ ಸರಕಾರಿ ನೌಕರರ ಬಳಗದ ಸದಸ್ಯರಾದ ಬಳಗನೂರು ಬಸವರಾಜ ಸಾಸಲಮರಿ ಮಾತನಾಡಿ ಸರಕಾರಿ ಶಾಲೆ, ಕಾಲೇಜು ಹಾಗೂ ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಸುತ್ತಿರುವ ನಮ್ಮ ನೌಕರರು ಪ್ರತಿ ತಿಂಗಳು ಯಾವುದಾದರೊಂದು ತಮ್ಮದೇ ಶಾಲೆ, ಕಾಲೇಜು ಹಾಗೂ ವಿವಿಧ ಇಲಾಖೆಗಳಿಗೆ 10 ಸಾವಿರ ರೂಗಳ ಮೌಲ್ಯದ ವಸ್ತುಗಳನ್ನು ದೇಣಿಯಾಗಿ ನೀಡುವ ಕಾರ್ಯ ಇದೇ ವರ್ಷ 2026 ರಂದು ಪ್ರಾರಂಭವಾಗಿ ಮೊದಲ ತಿಂಗಳು ಜನವರಿಯಲ್ಲಿ ಸಾಸಲಮರಿಯ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿತ್ತು. ನಂತರ ಎರಡನೇ ತಿಂಗಳು ಫೆಬ್ರವರಿಯಲ್ಲಿ ನಮ್ಮ ಗುಂಜಹಳ್ಳಿಯ ಸರಕಾರಿ ಪ್ರೌಢಶಾಲೆ ಆಯ್ಕೆಯಾಗಿರುವುದು ತುಂಬಾ ಖುಷಿ ತಂದಿದೆ ಎಂದರು.

ಈ ಸಂದರ್ಭದಲ್ಲಿ ಎಸ್,ಡಿ,ಎಮ್,ಸಿ ಅಧ್ಯಕ್ಷರಾದ ಹನುಮಪ್ಪ,ಉಪಾಧ್ಯಕ್ಷರಾದ ಹುಚ್ಚಪ್ಪ.ಮತ್ತು ಸದಸ್ಯರಾದ ಶ್ಯಾಮಣ್ಣ ಹಾಗೂ ಸಾಸಲಮರಿ ಗ್ರಾಮದ ಶಿಕ್ಷಣ ಪ್ರೇಮಿಗಳಾದ ಮುದುಕಪ್ಪ, ಜಿ. ಕಾಳಿಂಗರೆಡ್ಡಿ, ಶೇಠ್ ಜಿ, ಹಾಗೂ ಸರಕಾರಿ ನೌಕರರ ಬಳಗದ ಸದಸ್ಯರಾದ ಎಂ. ವೆಂಕೋಬ, ಸಣ್ಣಯಲ್ಲಪ್ಪ,ರವಿಕುಮಾರ,ಶಿವರಾಜ ಶಾಲೆಯ ಮುಖ್ಯೋಪಾಧ್ಯಾಯರಾದ ನಾಗಪ್ಪ, ಶಾಲೆಯ ಶಿಕ್ಷಕರಾದ ನಜೀರ್ ಅಹ್ಮದ್,ಬಸವರಾಜ ಬಿ ಗದ್ದೆಪ್ಪ ನಾಗರಾಜ,ಅನಿತಾ,ಬಸವರಾಜ ಕೆ ಮಹಾಂತೇಶ, ಮುದ್ದು ಮಕ್ಕಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *