ಸಿಂಧನೂರು :“ಪ್ರೀತಿಯಿಂದ ಬೆಳೆಸೋಣ, ಅರಿವಿನಿಂದ ಮುನ್ನಡೆಸೋಣ” ಎಂಬ ವಿಷಯದ ಮೇಲೆ ಅನಿಕೇತನ ಸಭಾಂಗಣ, ಸಹನಾ ಶಾಲೆಯಲ್ಲಿ 22 ಫೆಬ್ರವರಿ ಭಾನುವಾರ ಬೆಳಗ್ಗೆ 10 ಗಂಟೆಗೆ ಆಯೋಜಿಸಲಾದ ಪೋಷಕರಿಗಾಗಿ ವಿಶೇಷ ಕಾರ್ಯಾಗಾರ ಯಶಸ್ವಿಯಾಗಿ ನೆರವೇರಿತು.“ಪ್ರೀತಿಯಿಂದ ಬೆಳೆಸೋಣ, ಅರಿವಿನಿಂದ ಮುನ್ನಡೆಸೋಣ” ಎಂಬ ವಿಷಯದಡಿ ನಡೆದ ಈ ಕಾರ್ಯಕ್ರಮದಲ್ಲಿ ಡಿಜಿಟಲ್ ಯುಗದ ಸವಾಲುಗಳ ನಡುವೆ ಮಕ್ಕಳ ಮಾನಸಿಕ ಮತ್ತು ಭಾವನಾತ್ಮಕ ಬೆಳವಣಿಗೆಯ ಕುರಿತು ಸವಿಸ್ತಾರ ಚರ್ಚೆ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಡಾ. ವಿರೂಪಾಕ್ಷ ದೇವರಮನೆ, ಮನೋವೈದ್ಯರು ಮತ್ತು ಪಾಲಕತ್ವ ಕೋಚ್, ಪೋಷಕರಿಗೆ ಪರಿಣಾಮಕಾರಿ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಪ್ರಮುಖ ಅಂಶಗಳು:
ಮಕ್ಕಳನ್ನು ನಿಯಂತ್ರಿಸುವ ಬದಲು ಸಂಬಂಧವನ್ನು ಗಟ್ಟಿಗೊಳಿಸುವ ವಿಧಾನಗಳು
Generation Alpha ಮಕ್ಕಳ ಮನೋಭಾವ ಮತ್ತು ಡಿಜಿಟಲ್ ಪ್ರಭಾವದ ಪರಿಣಾಮ
ಶಿಕ್ಷೆಯಿಲ್ಲದೆ ಶಿಸ್ತನ್ನು ರೂಪಿಸುವ ಸಕಾರಾತ್ಮಕ ಪಾಲಕತ್ವ ತಂತ್ರಗಳು
ಮಕ್ಕಳೊಂದಿಗೆ ಭಾವನಾತ್ಮಕ ಸಂಪರ್ಕದ ಮಹತ್ವ
ಡಾ. ದೇವರಮನೆ ಅವರು ತಮ್ಮ ಮಾತಿನಲ್ಲಿ,“ಮಕ್ಕಳಿಗೆ ನಾವು ಕೊಡುವ ಅತ್ಯಂತ ಅಮೂಲ್ಯವಾದ ಉಡುಗೊರೆ ನಮ್ಮ ಸಮಯ ಮತ್ತು ನಮ್ಮ ಮನಸ್ಸು. ಅವರು ಭವಿಷ್ಯದಲ್ಲಿ ನೆನಪಿಡುವುದು ವಸ್ತುಗಳಲ್ಲ, ನಮ್ಮ ಪ್ರೀತಿ ಮತ್ತು ಬೆಂಬಲದ ಭಾವನೆ,” ಎಂದು ಹೇಳಿದರು.ಪೋಷಕರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಪ್ರಶ್ನೋತ್ತರ ಅವಧಿ ಅತ್ಯಂತ ಸ್ಪಂದನೀಯವಾಗಿತ್ತು. ಹಲವರು ಈ ರೀತಿಯ ಕಾರ್ಯಕ್ರಮಗಳು ಮಕ್ಕಳ ಭವಿಷ್ಯ ರೂಪಿಸಲು ಅತ್ಯಗತ್ಯವೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವು ಪೋಷಕರಲ್ಲಿ ಹೊಸ ಚಿಂತನೆಗೆ ದಾರಿ ಮಾಡಿಕೊಟ್ಟಿತು ಹಾಗೂ ಮಕ್ಕಳ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಬಲವಾದ ಬುನಾದಿ ನಿರ್ಮಿಸಲು ಪ್ರೇರಣೆ ನೀಡಿತು

ವರದಿಗಾರರು: ಲಾಜರ್ ಸಿರಿಲ್

Leave a Reply

Your email address will not be published. Required fields are marked *