ಗದಗ : ನ 25:-ಮಂಗಳವಾರ ಗದಗ ನ ಜಿಲ್ಲಾಡಳಿತ ಭವನದ ಮುಂದೆ ಕರ್ನಾಟಕ ಸರಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ಸೇವಾ ಭದ್ರತೆಗಾಗಿ ಆಗ್ರಹಿಸಿ ಸಾವಿರಾರು ಅತಿಥಿ ಉಪನ್ಯಾಸಕರು ಅನಿರ್ದಿಷ್ಠಾವಧಿ ಪ್ರತಿಭಟನೆಗಿಳಿದಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಗದಗಿನ ತೋಂಟದಾರ್ಯ ಮಠದ ಶ್ರೀಗಳಾದ ಡಾಕ್ಟರ್ ಸಿದ್ದಲಿಂಗ ಮಹಾಸ್ವಾಮಿಗಳು ಮತ್ತು ಶಾಸಕ ಸಂಕನೂರು ಆಗಮಿಸಿ ಅತಿಥಿ ಉಪನ್ಯಾಸಕರ ನ್ಯಾಯಸಮ್ಮತ ಬೇಡಿಕೆಗಳನ್ನು ಸರಕಾರ ಶೀಘ್ರ ಈಡೇರಿಸಬೇಕು ಈ ಪ್ರತಿಭಟನೆಗೆ ಮಠಾಧೀಶರೆಲ್ಲರ ಬೆಂಬಲವಿದೆ ಎಂದು ಅಭಯಹಸ್ತ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಡಾಕ್ಟರ್ ಕಲ್ಮನಿ ಉನ್ನತಶಿಕ್ಷಣ ಇಲಾಖೆಯ ದ್ವಂದ್ವ ನೀತಿ ಈ ಗೊಂದಲಕ್ಕೆಲ್ಲ ಕಾರಣವಾಗಿದೆ.
ಯು,ಜಿ,ಸಿ,ನಾನ್,ಯು,ಜಿ,ಸಿ,ಎಂಬ ಭೇದಭಾವ ಮಾಡದೆ ಎಲ್ಲ ಅತಿಥಿ ಉಪನ್ಯಾಸಕರನ್ನೂ ಈ ಮೊದಲಿನಂತೆ ಮುಂದುವರೆಸಿ ಉದ್ಯೋಗ ಭದ್ರತೆ ನೀಡಿ ಸಾವಿರಾರು ಅತಿಥಿ ಉಪನ್ಯಾಸಕರ ಕುಟುಂಬಗಳು ಬೀದಿಗೆ ಬರುವುದನ್ನು ತಡೆಯಬೇಕು.
ಇಲ್ಲವಾದರೆ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲೂ ಉಗ್ರ ಹೋರಾಟ ಮಾಡಬೇಕಾಗುತ್ತದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮನನೊಂದ ಅತಿಥಿ ಉಪನ್ಯಾಸಕ ಪೆಟ್ರೋಲ್ ಸುರಿದು ಕೊಂಡು ಆತ್ಮಹತ್ಯ ಮಾಡಿಕೊಳ್ಳಲು ಯತ್ನಿಸಿದರು, ಆಗ ಅಧ್ಯಕ್ಷರು,ಉಪನ್ಯಾಸಕರು,ಪೊಲೀಸರು ಆಗಮಿಸಿ ಆಗಬಹುದಾಗಿದ್ದ ಅನಾಹುತವನ್ನು ತಡೆದರು.
ಸರಕಾರದ ಈ ನೀತಿ ಮುಂದುವರೆದರೆ ಅತಿಥಿ ಉಪನ್ಯಾಸಕರ ಸರಣಿ ಆತ್ಮಹತ್ಯಯೇ ನಡೆಯುತ್ತದೆ.
ಎರಡು ದಶಕಗಳ ಕಾಲ ದುಡಿಸಿಕೊಂಡು ಈಗ ಏಕಾಏಕಿ ಬೀದಿಗೆ ಬಿಟ್ಟರೆ ಅವರನ್ನೇ ನಂಬಿದ ಕುಟುಂಬದ ಗತಿಯೇನೆಂದು ಉಪನ್ಯಾಸಕರು ಪ್ರಶ್ನಿಸಿದರು.
ಮಹಿಳಾ ಉಪನ್ಯಾಸಕಿಯರೂ ಅಧಿಕ ಸಂಖ್ಯಯಲ್ಲಿ ಭಾಗವಹಿಸಿ ನಿರ್ದಯಿ ಸರಕಾರದ ಅಮಾನವೀಯ ನಿರ್ಧಾರವನ್ನು ಕಟುವಾಗಿ ಟೀಕಿಸಿದರು.
ಸಂದರ್ಶನ ನಿಲ್ಲಿಸಿ ನಮಗೆ ನ್ಯಾಯ ಕೊಡುವ ತನಕ ಪ್ರತಿಭಟನೆ ನಿರಂತರವಾಗಿ ನಡೆಯುತ್ತದೆಂದು ಹೇಳಿದರು.

Leave a Reply

Your email address will not be published. Required fields are marked *