ಅರಕೇರಾ: ತಾಲೂಕಿನ ಬಿ.ಗಣೇಕಲ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸೋಮವಾರ ಸಾಯಂಕಾಲ ನಾಲ್ಕು ಗಂಟೆಕ್ಕೆ ಮಕ್ಕಳ ಗ್ರಾಮ ಸಭೆ ಆಯೋಜನೆ ಮಾಡಲಾಗಿತ್ತು.
ಈಗಾಗಲೇ ಮಕ್ಕಳ ಗ್ರಾಮ ಸಭೆಗಳು ಎಲ್ಲಾ ಗ್ರಾಮಗಳಲ್ಲಿ ಪ್ರಾರಂಭವಾಗಿದ್ದು, ಬಿ.ಗಣೇಕಲ್ ಗ್ರಾಮದಲ್ಲಿ ಮಾರ್ಗ ಸೂಚಿಯನ್ವವಯ ಸಭೆ ನಡೆಯದಿರುವುದು ಹಲವು ಅವಾಂತರಗಳೊಂದಿಗೆ ಕಾಟಾಚಾರಕ್ಕೆ ಸಭೆ ಮಾಡಲಾಗಿದೆ. ಅಲ್ಲದೇ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಎಸ್.ಡಿ.ಎಮ್.ಸಿ.ಅಧ್ಯಕ್ಷರು, ಆರೋಗ್ಯ ಇಲಾಖೆ, ಪೋಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ, ಅರಣ್ಯ ಇಲಾಖೆ ವಿವಿಧ ಇಲಾಖೆಗಳ ಅಧಿಕಾರಿಗಳು ಮಕ್ಕಳ ಗ್ರಾಮ ಸಭೆಗೆ ಗೈರು ಆಗಿರುವು ಬಹಳ ವಿಪರ್ಯಾಸ. ಆ ಮಕ್ಕಳ ಸಮಸ್ಯೆ ಯಾರು ಮುಂದೆ ಹೇಳಿ ಕೋಳ್ಳಬೇಕು?, ಮಕ್ಕಳ ಗ್ರಾಮಸಭೆ ನಾಮಕಾವಸ್ಥೆಯಾಗಿರದೆ, ಮಕ್ಕಳ ಹಕ್ಕಗಳು ಹಾಗೂ ಶಾಲೆಗಳಲ್ಲಿರುವ ಸೌಕರ್ಯಗಳ ಕುರಿತು ಚರ್ಚೆಯ ವೇದಿಕೆಯಾಗಬೇಕಾದ ಸಭೆ. ಕೇವಲ ಛಾಯಾಚಿತ್ರಗಳ ಸಂಗ್ರಹಣೆಗೋಸ್ಕರ ಈ ಸಭೆ ನಡೆಸಲಾಗಿದೆ. ಎಂದು ಎಚ್.ಎಸ್.ನಾಯಕ ಆರೋಪಿಸಿದ್ದಾರೆ.
ಮಕ್ಕಳ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ವೆಂಕೋಬ ನಾಯಕ ಮತ್ತು ಸಂಪನ್ಮೂಲ ವ್ಯಕ್ತಿಗಳಾದ ಸಿದ್ಧಲಿಂಗಪ್ಪ ಕಾಕರಗಲ್ ಇವರಿಬ್ಬರನ್ನು ಬಿಟ್ಟು ಉಳಿದ ಎಲ್ಲಾ ಅಧಿಕಾರಿಗಳು ಗೈರು ಆಗಿದ್ದಾರೆ. ಇದು ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ? ಅಥವಾ ಅಧಿಕಾರಿಗಳಿಗೆ ಮಾಹಿತಿ ನೀಡದೇ ಮಕ್ಕಳ ಗ್ರಾಮ ಸಭೆ ಮಾಡಿ ಪಂಚಾಯಿತಿ ಕೈತೊಳೆದುಕೊಂಡು ಬಿಟ್ಟಿತ್ತಾ?
ಮಕ್ಕಳು ಶಾಲೆಗಳಲ್ಲಿ ಅನುಭವಿಸುವ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಸಕಾಲದಲ್ಲಿ ಸ್ಪಂದಿಸಿದಾಗ ಮಾತ್ರ ಮಕ್ಕಳ ಗ್ರಾಮ ಸಭೆ ಎನಿಸಿಕೊಳ್ಳುತ್ತದೆ. ಆದರೆ ಬಿ.ಗಣೇಕಲ್ ಗ್ರಾಮದಲ್ಲಿ ಎಲ್ಲಾ ಅಧಿಕಾರಿಗಳು ಗೈರು ಆಗಿದ್ದು ಕಾಟಾಚಾರಕ್ಕೆ ಮಕ್ಕಳ ಗ್ರಾಮ ಸಭೆ ನಡೆಸಲಾಗಿದೆ.

