ನೈಜ್ಯ ದೆಸೆ :
ಲಿಂಗಸಗೂರು : ಫೆ , 20 ತಾಲೂಕು ಕಾನೂನು ಸೇವಾ ಸಮಿತಿ, ಲಿಂಗಸಗೂರು ನ್ಯಾಯವಾದಿಗಳ ಸಂಘ, ತಾಲೂಕು ಆಡಳಿತ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಮತ್ತು ಕಸ್ತೂರಬಾ ಗಾಂಧಿ ಬಾಲಕಿಯರ ವಿದ್ಯಾಲಯ ಹಾಗೂ ಸರಕಾರಿ ಪ್ರೌಢ ಶಾಲೆ ಬಯ್ಯಾಪೂರು, ಇವರ ಸಂಯುಕ್ತಾಶ್ರಯ ದಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ, ಪೋಕ್ಸೊ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು
ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006, ನವೆಂಬರ್ 1, 2007 ರಂದು ಜಾರಿಗೆ ಬಂದಿತು, ಬಾಲ್ಯ ವಿವಾಹಗಳನ್ನು ನಿಷೇಧಿಸಲು ಮಾತ್ರವಲ್ಲ, ಅವುಗಳನ್ನು ತಡೆಯಲು ಸಹ. ಭಾರತದಲ್ಲಿ ಬಾಲ್ಯ ವಿವಾಹಗಳ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದು ಮತ್ತು ಸಮಗ್ರ ಕಾರ್ಯ ವಿಧಾನವನ್ನು ಜಾರಿಗೆ ತರುವುದು ಈ ಕಾಯ್ದೆಯ ಉದ್ದೇಶವಾಗಿದೆ. 18 ವರ್ಷ ತುಂಬದ ಹೆಣ್ಣು ಮತ್ತು 21 ವರ್ಷ ತುಂಬದ ಗಂಡು ಬಾಲ್ಯ ವಿವಾಹಗಳನ್ನು ನಡೆಸುವುದನ್ನು ಕಾಯ್ದೆ ನಿಷೇಧಿಸುತ್ತದೆ. ಬಾಲ್ಯ ವಿವಾಹಗಳನ್ನು ತಡೆಗಟ್ಟುವುದು
ಮತ್ತು ಈ ವಿಷಯದ ಬಗ್ಗೆ ಜಾಗೃತಿ ಮೂಡಿಸುವುದು ಕರ್ತವ್ಯವಾಗಿರುವದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೆಂಕಟೇಶ ಪಿ.ಎಸ್.ಐ ಮುದಗಲ್, ಶಿವಶಂಕರ ಹೆಚ್. ಪ್ರಭಾರಿ ಮುಖ್ಯಗುರುಗಳು, ಪಾರ್ವತಿ ಸ.ಶಿ ಆರ್.ಎಮ.ಎಸ್.ಎ, ಹಾಸ್ಟೆಲ್ ಪ್ರಭಾರಿ ನೂಡಲ್ ಅಧಿಕಾರಿ ಬಯ್ಯಾಪೂರು ಮಹಾಂತೇಶ ಬಳ್ಳೋಳ್ಳಿ ಶಿಕ್ಷಣ ಸಂಯೋಜಕರು, (ನಾಗರಾಳ ವಲಯ) ಅಪ್ಪಣ್ಣ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಎ.ಆರ್. ಹವಾಲ್ದಾರ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, (ಜಿಲ್ಲಾ ಸಂಪನ್ಮೂಲ ವ್ಯಕ್ತಿ ಪೋಕ್ಸೊ ಕಾಯ್ದೆ) ವಿಜಯ ಮೇಟಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು, ಬಯ್ಯಾಪೂರು ವಲಯ ಜಿ. ಸೌಂಧರಿ ಕೆ.ಜಿ.ಬಿ.ವಿ, ಮುಖ್ಯಗುರುಗಳು ಬಯ್ಯಾಪೂರು ,
ಸೈಯದ್ ವದುದ್ ವಕೀಲರು, ವೀರೇಶ ಹಡಪದ ವಕೀಲರು, ಜರ್ತಾನ ಅಫ್ರೀನ್ ವಕೀಲರು, ಮೈಬೂಬಸಾಬ ಬಾಗವಾನ ಸೇರಿದಂತೆ
ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗಿಯಾಗಿದ್ದರು.

