ರಾಯಚೂರು ಫೆಬ್ರವರಿ 09 (ಕರ್ನಾಟಕ ವಾರ್ತೆ): ರಾಯಚೂರು ಶಸ್ತ್ರ ಚಿಕಿತ್ಸಕರ ಸಂಘ, ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಶಸ್ತç ಚಿಕಿತ್ಸಾ ವಿಭಾಗ ಇವರುಗಳ ಸಂಯುಕ್ತಾಶ್ರಯದಲ್ಲಿ-2026ರ ರಾಜ್ಯ ಮಟ್ಟದ ಶಸ್ತç ಚಿಕಿತ್ಸಾ ಸಮಾವೇಶವನ್ನು ನಗರದ ರಿಮ್ಸ್ ಅಡಿಟೋರಿಯಂ ನಲ್ಲಿ ಫೆ.13, 14 ಹಾಗೂ 15ರಂದು ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.
ಸಮಾವೇಶವನ್ನು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಉದ್ಘಾಟನೆ ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ಶಸ್ತ್ರ ಚಿಕಿತ್ಸಾ ಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಮರುಥು ಪಾಂಡ್ಯನ್, ಶಸ್ತ್ರ ಚಿಕಿತ್ಸಾ ಸಂಘದ ರಾಜಾಧ್ಯಕ್ಷರಾದ ಡಾ.ರಾಜಗೋಪಾಲ ಶಣೈ, ಡಾ.ನಾಗರಾಜ ಭಾಲ್ಕಿ ಅವರು ಭಾಗವಹಿಸಲಿದ್ದಾರೆ.
ಈ ಸಮಾವೇಶಕ್ಕೆ ರಾಷ್ಟç, ರಾಜ್ಯ ಮಟ್ಟದ ಒಂದೂ ಸಾವಿರಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸಾ ತಜ್ಞರುಗಳು ಭಾಗವಹಿಸಲಿದ್ದಾರೆ ಎಂದು ರಿಮ್ಸ್ ಬೋಧಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಎಸ್.ಡಿ. ಮಂಡೋಲ್ಕರ್, ಸಂಘಟನಾ ಕಾರ್ಯದರ್ಶಿಗಳು ಆಗಿರುವ ರಾಜೀವಗಾಂಧಿ ಸೂಪರ್ ಸ್ಪೇಷಾಲಿಟಿ (ಓಪೆಕ್) ಅಸ್ಪತ್ರೆಯ ವಿಶೇಷಾಧಿಕಾರಿಗಳಾದ ಡಾ.ರಮೇಶ ಸಿ.ಸಾಗರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
