ಆರೆಸ್ಸೆಸ್‌ ಸಂಘದ ಶತಾಬ್ದಿ ವರ್ಷಾಚರಣೆ ಹಾಗೂ ಹಿಂದೂ ಸಮಾಜೋತ್ಸವದ ಅಂಗವಾಗಿ ಮುಸ್ಲಿಮರಿಗೆ ಆಹ್ವಾನ ನೀಡುವ ಉದ್ದೇಶದಿಂದ ಮಹದೇವ ಸ್ವಾಮೀಜಿ ಮಸೀದಿಗೆ ಭೇಟಿ ನೀಡಿದರು.ಈ ವೇಳೆ ಮಾತನಾಡಿದ ಅವರು, ಧರ್ಮಭೇದಗಳನ್ನು ಮೀರಿದ ಮನುಷ್ಯತ್ವ ಮತ್ತು ಸಹಬಾಳ್ವೆಯ ಪರಂಪರೆ ಈ ನಾಡಿನ ಶಕ್ತಿಯಾಗಿದೆ ಎಂದು ಹೇಳಿದರು.
ಮುಸ್ಲಿಂ ಅಂಜುಮನ್ ಕಮೀಟಿ ಅಧ್ಯಕ್ಷ ರಷೀದ್ ಅಹ್ಮದ್ ಹಣಜಗಿರಿ ಮಾತನಾಡಿ, ಧರ್ಮಕ್ಕಿಂತ ಮನುಷ್ಯತ್ವವೇ ದೊಡ್ಡದು. ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ಉಳಿಯಬೇಕೆಂದರೆ ಪರಸ್ಪರ ಗೌರವ ಮತ್ತು ವಿಶ್ವಾಸ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಬಸನಗೌಡ ತೊಂಡಿಹಾಳ ಅವರು, ಕುಕನೂರಿನ ಸೌಹಾರ್ದ ಪರಂಪರೆ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಅಂದಪ್ಪ ಜವಳಿ ಅವರು ಸಮಾಜೋತ್ಸವವನ್ನು ಎಲ್ಲ ಸಮುದಾಯಗಳ ಸಹಕಾರದೊಂದಿಗೆ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

Leave a Reply

Your email address will not be published. Required fields are marked *