ಮಸ್ಕಿ: ಪರಿಶಿಷ್ಟ ಪಂಗಡ ಹೆಸರಿನಲ್ಲಿ ನಕಲಿ ಜಾತಿಯ ಪ್ರಮಾಣ ಪತ್ರ ವಿತರಣೆ ತಡೆಗಟ್ಟುವಲ್ಲಿ ಶಾಸಕರ ವಿಫಲತೆಯನ್ನು ವಿರೋಧಿಸಿ ಹಾಗೂ ಪರಿಶಿಷ್ಟ ಪಂಗಡದ ಸಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರದಲ್ಲಿ ಗೆದ್ದಿರುವ 15 ಶಾಸಕರುಗಳ ಮನೆ ಮುಂದೆ ಪ್ರತಿಭಟನೆ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಮಾರಪ್ಪ ನಾಯಕ ಅಧ್ಯಕ್ಷರು ಉತ್ತರ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜ ಇವರು ಮಾತನಾಡುತ್ತಾ ಮಸ್ಕಿ ಕ್ಷೇತ್ರದ ಶಾಸಕರ ಕಚೇರಿಯ ಮುಂದೆ ಈ ಪ್ರತಿಭಟನೆ ಹಮ್ಮಿಕೊಂಡಿದ್ದು, ನಮ್ಮ ಹಕ್ಕೂತ್ತಾಯಗಳಾದ ಹಿಂದುಳಿದ ವರ್ಗ ಒಂದರಲ್ಲಿ ಬರುವ ಕೂಲಿ ಜನಾಂಗದ ತಳವಾರರು ಪರಿಶಿಷ್ಟ ಪಂಗಡದ ನಾಯಕ, ತಳವಾರ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ಸಿಂಧುತ್ವ ತೆಗೆದುಕೊಳ್ಳುವುದನ್ನು ತಡೆಗಟ್ಟಬೇಕು, ಸುಳ್ಳು ಜಾತಿ ಪ್ರಮಾಣ ಪತ್ರ ನೀಡುವ ಅಧಿಕಾರಗಳ ಮೇಲೆ ಎಫ್ ಐ ಆರ್ ಆಲಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತೇವೆ ಹಾಗೆ ಇನ್ನು ಹಲವಾರು ಸಮಸ್ಯೆಗಳ ಕುರಿತು ಮಾರೆಪ್ಪ ನಾಯಕ ಮಾತನಾಡಿದರು. ನಂತರ ಮನವಿ ಪತ್ರವನ್ನು ಶಾಸಕರ ಪ್ರತಿನಿಧಿಯಾಗಿ ಆಗಮಿಸಿದ ಭೀಮೇಶ ನಾಯಕ್ ಅವರಿಗೆ ನೀಡಿದರು. ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಭೀಮೇಶ್ ನಾಯಕ ಶಾಸಕರಿಗೆ ಸಮಸ್ಯೆ ಕುರಿತು ಹೇಳಲಾಗುವುದೆಂದು ಎಂದು ಹೇಳಿದರು. ಈ ಸಂದರ್ಭದಲ್ಲಿ ಶ್ರವಣ ಕುಮಾರ್ ಡಿ ನಾಯಕ ರಾಜ್ಯಾಧ್ಯಕ್ಷರು ಎಸ್ಸಿ ಎಸ್ಟಿ ನಕಲಿ ಜಾತಿ ಪ್ರಮಾಣಪತ್ರ ಕಡೆ ಸಮಿತಿ, ಸಿದ್ದಲಿಂಗಪ್ಪ ನಾಯಕ, ಶರಣಪ್ಪ ಜಾಕನಹಳ್ಳಿ, ದೊಡ್ಡಯ್ಯ ನಾಯಕ, ಅಂಬಣ್ಣ ನಾಯಕ ಡೋಣಮರಡಿ, ಗಂಗಾಧರ್ ನಾಯಕ್ ಸುರಪುರ, ವೆಂಕಟೇಶ್ ನಾಯಕ ಕೋಳಬಾಳ, ರಮೇಶ್ ನಾಯಕ ತೀರ್ಥಭಾವಿ, ಬಸಪ್ಪ ನಾಯಕ ತುಗ್ಗಲದಿನ್ನಿ, ವೆಂಕಟೇಶ್ ನಾಯಕ್ ಮಸ್ಕಿ, ದೊಡ್ಡ ಜಕ್ಕಪ್ಪ ನಾಯಕ ಹಾಗೂ ಇನ್ನಿತರರು ಇದ್ದರು.

