ರಾಯಚೂರು ಫೆಬ್ರವರಿ 04 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಫೆ.05 ರಿಂದ 07ರವರೆಗೆ ನಡೆಯಲಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ ಕಾರ್ಯಕ್ರಮದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಹಾಗೂ ತಾಲೂಕುಗಳಿಂದ ಕಲಾವಿದರು ಹಾಗೂ ಸಾರ್ವಜನಿಕ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಿಭಾಗದ ವ್ಯಾಪ್ತಿಯ ಎಲ್ಲಾ ಘಟಕಗಳಿಂದ ಹೆಚ್ಚುವರಿ ವಾಹನಗಳು ಕಾರ್ಯಾಚರಿಸಲು ಉದ್ದೇಶಿಸಲಾಗಿದ್ದು ಸಾರ್ವಜನಿಕರು ಸದುಪಯೋಗಪಡೆದುಕೊಳ್ಳುವಂತೆ ಕೋರಲಾಗಿದೆ.
ರಾಯಚೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಘಟಕಗಳಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಿಲ್ಲೆಯಿಂದ ತಾಲೂಕಿಗೆ ಹಾಗೂ ತಾಲೂಕಿನಿಂದ ಜಿಲ್ಲೆಗೆ ಸ್ತ್ರೀಯರಿಂದ ಶಕ್ತಿ ಯೋಜನೆ ಅಡಿಯಲ್ಲಿ ಟಿಕೇಟ್ ವಿಧಿಸಲಾಗುವುದು ಹಾಗೂ ಪುರಷರಿಗೆ ಪ್ರಯಾಣದ ದರ ಮೇಲೆ ಹೆಚ್ಚಿನ ಬಸ್ಸುಗಳು ಕಾರ್ಯಾಚರಣೆ ಮಾಡಲಾಗುವುದು. ಅಲ್ಲದೇ ನಗರದಲ್ಲಿ ಸಹ ನಗರ ಸಾರಿಗೆ ವಾಹನಗಳು ಸ್ತ್ರೀಯರಿಂದ ಶಕ್ತಿ ಯೋಜನೆ ಅಡಿಯಲ್ಲಿ ಟಿಕೆಟ್ ವಿಧಿಸಲಾಗುವುದು ಹಾಗೂ ಪುರಷರಿಗೆ ಪ್ರಯಾಣ ದರದ ಮೇಲೆ ಹೆಚ್ಚಿನ ಬಸ್ಸುಗಳು ಕಾರ್ಯಾಚರಣೆ ಮಾಡಲಾಗುವುದು.
ರಾಯಚೂರು ಗ್ರಾಮೀಣ ಪ್ರದೇಶಕ್ಕೆ ಹಾಗೂ ಬೇರೆ ತಾಲೂಕುಗಳಿಗೆ ತೆರಳುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಬೆಳಿಗ್ಗೆ ಯಿಂದ ಸಂಜೆವರೆಗೆ ಗೇಟ್-2 ರಲ್ಲಿ ನಿರಂತರವಾಗಿ ವಾಹನಗಳು ಕಾರ್ಯಾಚರಿಸಲಾಗುವುದು. ಅಲ್ಲದೆ ರಾತ್ರಿ ಸಮಯದಲ್ಲಿ ನಿಗದಿತ ಪಾರ್ಕಿಗ್ ಸ್ಥಳದಿಂದ ಸಾರಿಗೆ ವಾಹನಗಳು ಕಾರ್ಯಾಚರಣೆಗೊಳಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಘಟಕ ವ್ಯವಸ್ಥಾಪಕರ ದೂರವಾಣಿ ಸಂಖ್ಯೆ: 1ನೇ ಘಟಕ ರಾಯಚೂರು: 7760992363, 2ನೇ ಘಟಕ ರಾಯಚೂರು: 7760992364, 3ನೇ ಘಟಕ ರಾಯಚೂರು: 7619351087 ಹಾಗೂ ಕೇಂದ್ರ ಬಸ್ ನಿಲ್ದಾಣಾಧಿಕಾರಿ ರಾಯಚೂರು: 6366976325, 7760992370ಗೆ ಸಂಪರ್ಕ ಮಾಡಬಹುದಾಗಿದೆ.
ರಾಯಚೂರು ನಗರದಲ್ಲಿ ನಗರ ಸಾರಿಗೆ ಮತ್ತು ಕಲಾವಿದರು, ಮಾಧ್ಯಮ ಮುಂತದವರಿಗೆ ಬಸ್ಸಿನ ವ್ಯವಸ್ಥೆ ನೋಡಿಕೊಳ್ಳಲು ನೋಡಲ್ ಅಧಿಕಾರಿಗಳಾದ ಜಿಲ್ಲಾ ಉದ್ಯೋಗಾಧಿಕಾರಿ ನವೀನ ಕುಮಾರ: 8073610442, ಮೋಟಾರ್ ವಾಹನ ನಿರೀಕ್ಷಕರು ಶರಣ ಬಸಪ್ಪ ಮೊಬೈಲ್ ಸಂಖ್ಯೆ: 9113501545, ಸಹಾಯಕ ಉಗ್ರಣಾಧಿಕಾರಿ ಮಹಾಂತೇಶ ಮೊಬೈಲ್ ಸಂಖ್ಯೆ: 7760992359ಗೆ ಸಂಪರ್ಕ ಮಾಡಬಹುದಾಗಿದೆ.
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಕಲಾವಿದರಿಗೆ ಹಾಗೂ ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕ.ಕ.ರ.ಸಾ ನಿಗಮ ರಾಯಚೂರು ವಿಭಾಗದಿಂದ ಈ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಾರ್ವಜನಿಕರು ಈ ಹೆಚ್ಚುವರಿ ಸಾರಿಗೆಗಳ ಸದುಪಯೋಗ ಪಡೆಯಬಹುದಾಗಿದೆಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *