ಮಸ್ಕಿ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮಸ್ಕಿ ಮಂಡಲ ವತಿಯಿಂದ ಜನಜಾಗೃತಿ ಕಾರ್ಯಗಾರ ಸಭೆ ಹಾಗೂ ಮತದಾರರ ಪಟ್ಟಿ ಮ್ಯಾಪಿಂಗ್ ಹಾಗೂ ಸಂಘಟನಾತ್ಮಕ ಕುರಿತು ಮಾಜಿ ಶಾಸಕ ಪ್ರತಾಪ್ಗೌಡ ಪಾಟೀಲ್ ಮಾತನಾಡಿದರು. ವಿಕಸಿತ ಭಾರತ್ ಜಿ ರಾಮ್ ಜಿ ಹೊಸ ಕಾಯ್ದೆಯಾಗಿದ್ದು, ಇದು 2025ರಲ್ಲಿ ಪರಿಚಯಿಸಲ್ಪಟ್ಟಿದೆ. ಇದು ಗ್ರಾಮೀಣ ಉದ್ಯೋಗವನ್ನು 125 ದಿನಗಳಿಗೆ ಹೆಚ್ಚಿಸಿ, ವಿಕಸಿತ ಭಾರತ 2047 ಗುರಿಗೆ ಸಂಯೋಜಿಸುತ್ತದೆ. ಈ ಮಸೂದೆಯ ಮೂಲಕ ರಾಜ್ಯಗಳ ಹಣಕಾಸು ಜವಾಬ್ದಾರಿ ಹೆಚ್ಚಾಗುತ್ತದೆ ಮತ್ತು ತಂತ್ರಜ್ಞಾನ ಆಧಾರಿತ ಪಾರದರ್ಶಕತೆಯನ್ನು ಬಲಪಡಿಸುತ್ತದೆ. ಮುಖ್ಯ ಬದಲಾವಣೆಗಳು ಉದ್ಯೋಗ ಖಾತರಿ 100 ದಿನಗಳಿಂದ 125 ದಿನಗಳಿಗೆ ಏರಿಕೆಯಾಗಿದ್ದು, ವಾರ್ಷಿಕವಾಗಿ ಗ್ರಾಮೀಣ ಕುಟುಂಬಗಳಿಗೆ ಅನ್ವಯಿಸುತ್ತದೆ ಎಂದು ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೇಳಿದರು. ಈ ವೇಳೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಶರಣಬಸವ ಸೊಪ್ಪಿಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ ರಾಜಗುರು, ಕಾರ್ಯದರ್ಶಿಗಳಾದ ಶಾರದ ರಾಥೋಡ್ , ಮುಖಂಡರಾದ ಮಲ್ಲಪ್ಪ ಚಿತ್ತಾಪುರ, ಬಸವಂತರಾಯ ಕುರಿ , ಪುರಸಭೆ ಅಧ್ಯಕ್ಷ ಸುರೇಶ ಅರಸುರು, ಶರಣಬಸವ ವಕೀಲ ಉಮಲೂಟಿ, ಯಲ್ಲೋಜಿರಾವ್ ಕೋರೆಕರ್, ಡಾ ಬಿಹೆಚ್ ದಿವಟಿರ, ಬಸವರಾಜ್ ಸ್ವಾಮಿ ಹಸ್ಮಕಲ್, ಪ್ರಸನ್ನ ಪಾಟೀಲ್ , ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ್ ಗುಡಿಹಾಳ್, ರಮೇಶ್ ಉದ್ಬಾಳ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ದುರ್ಗಪ್ಪ ಗುಡಗುಲ್ದಿನ್ನಿ, ಮಲ್ಲಿಕಾರ್ಜುನ ಯಾದವ್, ಮೌನೇಶ್ ನಾಯಕ್ ವಿವಿಧ ಮೋರ್ಚಗಳ ಅಧ್ಯಕ್ಷರಾದ ಅಮರೇಶ್ ಗುರಿಕಾರ್ ಗೌಡನಬಾವಿ, ವೆಂಕಣ್ಣ ಸಾಹುಕಾರ್ ಗುಂಡ ,ರಮೇಶ್ ನಾಯಕ್ ತೀರ್ಥಭಾವಿ ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *