ಮಾನ್ವಿ 12ನೇ ಶತಮಾನದಲ್ಲಿ ಶರಣರು ನುಡಿದ ಪ್ರಕಾರ ಎಲ್ಲರೂ ಒಂದೇ ಎಲ್ಲರೂ ಸಮಾನರು ಆದರೆ ಇಂದು 21ನೇ ಶತಮಾನ ನಾವು ಶರಣರ ವಿರುದ್ಧ ನಡೆಯುತ್ತಿದ್ದೇವೆ ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಶರಣರು ಅವರ ಕಂಡ ಕನಸುಗಳು ನುಚ್ಚುನೂರಾಗಿವೆ ಕಾರಣ ಎಲ್ಲರೂ ಎಚ್ಚೆತ್ತುಕೊಂಡು ಎಲ್ಲರಲ್ಲಿಯೂ ಸಮಾನತೆ ಕಾಣಬೇಕೆಂದು ಪ್ರಭಾರಿ ಮುಖ್ಯ ಗುರುಗಳು ಸತೀಶ್ ಸಿಎಂ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಹೇಳಿದರು
ಇದಕ್ಕೂ ಮೊದಲು ಪಿಎಮ್ ಶ್ರೀ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಅತಿಥಿ ಶಿಕ್ಷಕರು ಗ್ರಾಮದ ಮುಖಂಡರು ಎಸ್ ಡಿ ಎಂ ಸಿ ಪದಾಧಿಕಾರಿಗಳು ಮಡಿವಾಳ ಸಮಾಜದ ಯುವಕರು ಹಾಗೂ ಗ್ರಾಮ ಪಂಚಾಯತಿಯ ಸದಸ್ಯರು ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಮಾಲಾರ್ಪಣೆ ಪೂಜೆ ನೆರವೇರಿಸಿ ಮಾಚಿದೇವರ ಬಗ್ಗೆ ವಿದ್ಯಾರ್ಥಿ ವೆಂಕೋಬ ನಾಯಕ ಬೇವನೂರು ಮಾತನಾಡಿ ಕ್ರಿಸ್ತಶಕ 1120ರಲ್ಲಿ ಪರ್ವತಯ್ಯ ಮತ್ತು ಸುಜ್ಞಾನಮ್ಮ ದಂಪತಿಗಳ ಮಗನಾಗಿ ಜನಿಸಿ ವೃತ್ತಿ ಯಲ್ಲಿ ಮಡಿವಾಳನ ಕೆಲಸ ಅವರ ದೀಕ್ಷಾ ಗುರು ಮಲ್ಲಿಕಾರ್ಜುನ ಇಷ್ಟ ದೈವ ಕಲ್ಲಿನಾಥ ಕಲಿದೇವರದೇವ ಎಂಬ ಅಂಕಿತದಲ್ಲಿ 354 ವಚನಗಳನ್ನು ಬರೆದಿದ್ದಾರೆ
ಅರಸುತನ ಮೇಲಲ್ಲ ಅಗಸತನ ಕೀಳಲ್ಲ ಎಂಬುದನ್ನು ಈ ಸಮಾಜಕ್ಕೆ ಸಾರಿದರು ಅಗಸ ಮುನಿಯುವುದು ಮಲಿನಕ್ಕೆ ವಸ್ತ್ರಕ್ಕಲ್ಲ ಶರಣ ಮುನಿಯುವುದು ಅವಗುಣಕ್ಕೆ ಶಿವ ಭಕ್ತಗಲ್ಲ ನಾನೆಂಬುದು ಮರೆತುಬಿಡಿ. ಆಗ ಪುಟವಿಟ್ಟ ಚಿನ್ನದಂತೆ ನಿಮ್ಮ ಭಕ್ತಿ ಇನ್ನಷ್ಟು ಥಳಥಳಿಸುತ್ತದೆ
ಈ ಸಂದರ್ಭದಲ್ಲಿ ಮಡಿವಾಳ ಸಮಾಜದ ಯುವಕರು ಶಾಲೆ ಮಕ್ಕಳಿಗೆ ಮಾಚಿದೇವರ ಜಯಂತಿ ಅಂಗವಾಗಿ ಆಟಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ನೋಟ್ ಬುಕ್ ವಿತರಿಸಿದರು ಲಕ್ಷ್ಮಿ ಟೀಚರ್ ನಿರೋಪಿಸಿದರೆ ರತ್ನಮ್ಮ ವಂದಿಸಿದರು

