ಸಿಂಧನೂರು : ಲಿಂಗಸೂಗೂರು ಸಾರಿಗೆ ಇಲಾಖೆಯಲ್ಲಿ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಎರಡು ಅತ್ಯುತ್ತಮ ಪ್ರಶಸ್ತಿಯನ್ನು ಸ್ವೀಕರಿಸಿದ್ದ ಅನಾರೋಗ್ಯ ಪೀಡಿತ ಈರಪ್ಪ ವಯಸ್ಸು -54 ಇವರ ಧರ್ಮಪತ್ನಿ ಮರಣ ಹೊಂದಿದ್ದು ಇವರ ಮಗಳಾದ ಭಾಗ್ಯಶ್ರೀ ತುಮಕೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಅಂಶವನ್ನು ಗಮನಿಸಿ ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರೀ) ಹರೇಟನೂರು ಕಾರುಣ್ಯನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದ ಸಂಸ್ಥಾಪಕರಾದ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಕರಡಕಲ್ ಅವರು ತಮ್ಮ ಆಶ್ರಮಕ್ಕೆ ಕರೆತಂದು ಮಾನವೀಯತೆ ದೃಷ್ಟಿಯಿಂದ ಮತ್ತು ಭಾಗ್ಯಶ್ರೀ ಅವರ ಶೀಕ್ಷಣಕ್ಕೆ ತೊಂದರೆ ಆಗಬಾರದು ಎನ್ನುವ ಹಿತದೃಷ್ಟಿಯನ್ನು ಇಟ್ಟುಕೊಂಡು ಆಶ್ರಯ ಕೊಟ್ಟು ಆಸರೆಯಾದರು. ಈ ಸಂದರ್ಭದಲ್ಲಿ ಆಶ್ರಮದ ಸೇವಾಕರ್ತರಾದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ ಮಾತನಾಡಿ ಇಂದು ನಮ್ಮ ಅಶ್ರಮದ ಒಡೆಯರಾದ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಅವರು ಈರಪ್ಪ ಅವರ ಮಗಳ ವ್ಯಾಸಂಗಕ್ಕೆ ತೊಂದರೆ ಆಗಬಾರದು ಎನ್ನುವ ದೃಷ್ಟಿಯನ್ನು ಇಟ್ಟುಕೊಂಡು ಈ ರೀತಿಯ ಸೇವೆಗೆ ನಮಗೆ ಅವಕಾಶ ಕಲ್ಪಿಸಿ ಕೊಟ್ಟಿರುವುದು ನಮಗೆ ಆತ್ಮ ತೃಪ್ತಿ ತಂದಿದೆ. ತಾಯಿ ಇಲ್ಲದೆ ತಂದೆಯ ಈ ಅನಾರೋಗ್ಯ ಸ್ಥಿತಿಯಲ್ಲಿ ಈ ಕ್ಷಣವನ್ನೆ ತೊರೆಯುವಂತಹ ಸಹೋದರಿಗೆ ನಾವು ನೆರವಾಗುವುದು ನಮ್ಮ ಆದ್ಯ ಕರ್ತವ್ಯ ಈರಪ್ಪ ಅವರ ಇನ್ನೂ ಆರು ವರ್ಷಗಳ ಸೇವೆ ಇದ್ದರೂ ಸಹ ಅನಾರೋಗ್ಯ ಸ್ಥಿತಿಯಿಂದಾಗಿ ಅವರು ಬಳಲುತ್ತಿರುವುದು ಮತ್ತು ಅವರಿಗೆ ಇರುವ ಇಬ್ಬರು ಚಿಕ್ಕ ಮಕ್ಕಳಿಗೆ ಮುಂದಿನ ದಿನಮಾನಗಳಲ್ಲಿ ಶಿಕ್ಷಣಕ್ಕೆ ನಾವು ಸಹಾಯ ಸಹಕಾರ ನೀಡುತ್ತೇವೆ ಎಂದು ನಮ್ಮ ಸಂಸ್ಥಾಪಕರು ಭರವಸೆ ಕೊಟ್ಟಿರುವುದು ಸಮಾಜಕ್ಕೆ ಮಾದರಿಯದಂತಹ ವಿಚಾರ ಬರೀ ನೆಲೆ ಇಲ್ಲದ ಜೀವಿಗಳನ್ನಷ್ಟೇ ಕಾಪಾಡುವುದಷ್ಟೇ ನಮ್ಮ ಉದ್ದೇಶ ಅಲ್ಲ ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಈ ಮಕ್ಕಳಿಗೆ ಆಸರೆಯಾಗಬೇಕು ಎನ್ನುವ ಉದ್ದೇಶ ನಮ್ಮೆಲ್ಲರದ್ದು ಎನ್ನುವ ವಿಚಾರವನ್ನು ಇಟ್ಟುಕೊಂಡ ಮಲ್ಲಿಕಾರ್ಜುನ ಸ್ವಾಮಿಯವರಿಗೆ ನಾನು ವೈಯಕ್ತಿಕವಾಗಿ ಧನ್ಯವಾದಗಳು ಅರ್ಪಿಸುತ್ತಿದ್ದೇನೆ ಎಂದು ಮಾತನಾಡಿದರು. ಈ ಸಮಯದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಕರಡಕಲ್ ಸಂಸ್ಥಾಪಕರು ಹಾಗೂ ಸದಸ್ಯರು ಕಾರುಣ್ಯ ಆಶ್ರಮ ಸಿಂಧನೂರು. ಭಾಗ್ಯಶ್ರೀ ತೊಂಡಿಹಾಳ ಸಾ. ಲಿಂಗಸೂಗೂರು. ಬಸವರಾಜ ಯರವಾಳ. ಹಾಗೂ ಬೀರಣ್ಣಯಲಗಲದಿನ್ನಿ. ಶರಣಪ್ಪ ನಾಯಕ ಕಸಬಾ ಲಿಂಗಸೂಗೂರು. ಮಹೇಶ ಲಿಂಗಸೂಗೂರು. ಹಾಗೂ ಶ್ರೀಮಠ ಸೇವಾ ಟ್ರಸ್ಟ್ ನಸದಸ್ಯರಾದ ಸುಜಾತ ಹಿರೇಮಠ. ಸಿಬ್ಬಂದಿಗಳಾದ ಸುಜಾತ ಮಲದಗುಡ್ಡ .ಸಿದ್ದಯ್ಯ ಸ್ವಾಮಿ. ಮರಿಯಪ್ಪ .ಜ್ಯೋತಿ .ಅನೇಕರು ಉಪಸಿತರಿದ್ದರು

