ಮಸ್ಕಿ: ಕಲಿಕಾ ಹಬ್ಬವು ಮಕ್ಕಳನ್ನು ಕಲಿಕೆಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸುವ ಮೂಲಕ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಗುಡದೂರು ವಲಯ ಸಮೂಹ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಕಟ್ಟಿಮನಿ ಹೇಳಿದರು.
ತಾಲೂಕಿನ ಹಸಮಕಲ್ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಗುಡದೂರು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಥಳೀಯ ಕಲೆಗಳು, ಜನಪದ ಹಾಡುಗಳು ಮತ್ತು ಕಥೆಗಳಿಗೆ ಈ ಹಬ್ಬದಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂದರು. ಇದು ಮಕ್ಕಳಿಗೆ ತಮ್ಮ ಸಂಸ್ಕೃತಿಯ ಪರಿಚಯ, ಚಿತ್ರಕಲೆ, ಮಣ್ಣಿನ ಮಾದರಿ ತಯಾರಿಕೆ, ಕಾಗದದ ಕೆಲಸ, ನಾಟಕಗಳ ಮೂಲಕ ಮಕ್ಕಳ ಸೃಜನಶೀಲ ಶಕ್ತಿಯನ್ನು ಉತ್ತೇಜಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಬಸವಪ್ರಸಾದ ಶರಣರು ಉದ್ಘಾಟಿಸಿ ನಂತರ ಮಾತನಾಡಿದ ಅವರು ಕಲಿಕಾ ಹಬ್ಬ ಮಕ್ಕಳ ಮತ್ತು ಪಾಲಕರಿಗಾಗಿ ಆಯೋಜನೆ ಮಾಡಿದಂತಹ ಕಾರ್ಯಕ್ರಮ. ಈ ವೇದಿಕೆ ಮೂಲಕ ಮಕ್ಕಳು ತಾವು ಕಲಿತದ್ದು, ಹೋರ ಹಾಕುವಂತಹ ವೇದಿಕೆಯಾಗಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಅಮರೇಶ ಗುಡದೂರು ಮಾತನಾಡಿ, ಕಲಿಕಾ ಹಬ್ಬವು ಮಕ್ಕಳಲ್ಲಿ ಕಲಿಯುವ ಆಸಕ್ತಿ ಹೆಚ್ಚಿಸಲು ಮತ್ತು ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಆಯೋಜಿಸಲಾಗುವ ಒಂದು ವಿಶೇಷ ಕಾರ್ಯಕ್ರಮ ಎಂದು ತಿಳಿಸಿದರು.
ಸಿದ್ದನಗೌಡ ತುರವಿಹಾಳ, ನಿವೃತ್ತಶಿಕ್ಷಕ ಚನ್ನಬಸಯ್ಯ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಮಾರೆಮ್ಮ, ಎಸ್‌ಡಿಎಂಸಿ ಅಧ್ಯಕ್ಷ ದುರುಗಪ್ಪ, ಮೈಬುಸಾಬ ಮುದ್ದಾಪೂರು, ಬಸವರಾಜಸ್ವಾಮಿ ಹಸಮಕಲ್, ಅಮರೇಶಪ್ಪ ದುಗನೂರ, ಗೋವಿಂದಪ್ಪ ರಂಗಾಪೂರ, ಶಿವಕುಮಾರ ಬಿ.ಆರ್.ಪಿ. ಹುಲಗಪ್ಪ ಇ.ಸಿ.ಒ. ಪಿಡಿಒ ಕೃಷ್ಣ, ನಾಗನಗೌಡ, ಪಂಪಯ್ಯಸ್ವಾಮಿ ಹಿರೇಮಠ, ಹುಲಗಪ್ಪ, ಮಾನಪ್ಪ ವಡ್ಕಿ, ನಾಗರತ್ನ, ಈಶ್ವರಪ್ಪ ಹಸಮಕಲ್, ನೇತ್ರಾವತಿ, ಯಮನಪ್ಪ ಮಹಾಂತೇಶ, ಲಕ್ಷ್ಮಣ ರಂಗಾಪೂರ, ಯಂಕಣ್ಣ ದಿನ್ನಿ, ನಾಗರಾಜ ಬೋವಿ, ಪಕೀರಸ್ವಾಮಿ, ನಿರುಪಾದಿ, ನಾಗಲಿಂಗ, ಮಹಾದೇವ, ದೇವಯ್ಯ, ದುರುಗೇಶ, ಶಿಕ್ಷಕಿಯರಾದ ಯಲ್ಲಮ್ಮ, ಶರಣಮ್ಮ ಇದ್ದರು.

Leave a Reply

Your email address will not be published. Required fields are marked *