ಕವಿತಾಳ : ಮುದುಗಲ್ ಪಟ್ಟಣದ ಜಲ್ಲಿ ಕುಟುಂಬದ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಭದ್ರತೆ ಕುರಿತು ಅರಿವು ಮೂಡಿಸುವ ಮತ್ತು ಕಾನೂನಿನ ಪಾಲನೆಗೆ ಮುಂದಾಗಿರುವ ಪೊಲೀಸ್ ಪೇದೆ ಸುರೇಶ್ ಜಲ್ಲಿ ಅವರ ಕಾರ್ಯ ಶ್ಲಾಘನೀಯ.
ಫೆಬ್ರುವರಿ 8ರಂದು ಪೊಲೀಸ್ ಪೇದೆ ಸುರೇಶ್ ಜಲ್ಲಿ ಮತ್ತು ಅವರ ಸಹೋದರ ಸಂಗಮೇಶ್ ಜೆಲ್ಲಿ ಅವರ ವಿವಾಹವು ಮುದಗಲ್ ಪಟ್ಟಣದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಇದ್ದು ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ರಾಯಚೂರು ಜಿಲ್ಲಾ ಪೊಲೀಸ್ “ನಿಮ್ಮ ಸುರಕ್ಷತೆ ನಮ್ಮ ಸುಭದ್ರತೆ” ಎನ್ನುವ ಶೀರ್ಷಿಕೆಯಡಿ ಕಾನೂನು ಅರಿವು ಮೂಡಿಸಲು ಮುಂದಾಗಿದ್ದು.
ಅಪರಿಚಿತ ರಿಂದ ಬರುವ ಸಂಶಯಾಸ್ಪದ ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ, ನಿಮ್ಮ ಬ್ಯಾಂಕ್ ಒಟಿಪಿ ಅಥವಾ ಪಿನ್ ಸಂಖ್ಯೆಯನ್ನು ಯಾರಿಗೂ ನೀಡಬೇಡಿ, ಆನ್ಲೈನ್ ವಂಚನೆಗೆ ಒಳಗಾದರೆ ತಕ್ಷಣ1930 ಸಂಖೆಗೆ ಕರೆ ಮಾಡಿ, ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸಬೇಕು, ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ, ವೇಗದ ಮಿತಿ ಮೇರಬೇಡಿ, ದ್ವಿಚಕ್ರ ವಾಹನದಲ್ಲಿ ಮೂರು ಜನ ಪ್ರಯಾಣ ಮಾಡಬೇಡಿ ಹಾಗೂ ತುರ್ತು ಸಂದರ್ಭದಲ್ಲಿ ಸಹಾಯಕ್ಕಾಗಿ 112 ಸಹಾಯವಾಣಿಗೆ ಕರೆ ಮಾಡಿ ಎನ್ನುವ ಪೊಲೀಸ್ ಇಲಾಖೆಯ ನಿಯಮ ಮತ್ತು ನಿಬಂಧನೆಗಳನ್ನು ಹಾಕುವ ಮೂಲಕ ತಮ್ಮ ವಿವಾಹ ಆಮಂತ್ರಣ ಪತ್ರದಲ್ಲಿಯೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ಮೆಚ್ಚುವಂತದ್ದು ಎಂದು ವಿವಾಹ ಆಮಂತ್ರಣ ಪಡೆದಿರುವ ಸ್ನೇಹಿತರನ್ನು ಅಂಬೋಣವಾಗಿದೆ.

