ಇಂದು ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಮುಕುಲ್ ಸರನ್ ಮಾಥುರ್ (IRTS) ಅವರನ್ನು ಭೇಟಿ ಮಾಡಿದ ರಾಯಚೂರು ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಶ್ರೀ ಜಿ ಕುಮಾರ ನಾಯಕರವರು ಗಿಣಿಗೇರಾ–ರಾಯಚೂರು ರೈಲು ಮಾರ್ಗವನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವ ಕುರಿತು ವಿವರವಾಗಿ ಚರ್ಚೆ ನಡೆಸಿದರು.
ಮಾನ್ವಿ ತಾಲೂಕಿನ ಕುರ್ಡಿಯನ್ನು ಕ್ರಾಸಿಂಗ್ ಸ್ಟೇಷನ್ ಆಗಿ ಅಭಿವೃದ್ಧಿಪಡಿಸುವ ಕುರಿತು ಹಾಗೂ ರಾಯಚೂರು ತಾಲೂಕಿನ ಮಮದಾಪುರವನ್ನು ಗ್ರೇಟರ್ ರಾಯಚೂರು ಸ್ಟೇಷನ್ ಆಗಿ ರೂಪಿಸಿ ಗೂಡ್ಸ್ ಸೈಡಿಂಗ್ ಮತ್ತು Y-ಜಂಕ್ಷನ್ ಮೂಲಕ ರಾಯಚೂರು ರೈಲ್ವೇ ಬೈಪಾಸ್ ನಿರ್ಮಿಸುವ ಬಗ್ಗೆ ವಿಸ್ತಾರವಾಗಿ ಚರ್ಚಿಸಿದರು
ಈ ವೇಳೆಯಲ್ಲಿ ಶ್ರೀ ಮುಕುಲ್ ಸರನ್ ಮಾಥುರ್ ಅವರು ಉತ್ತಮ ಪ್ರತಿಕ್ರಿಯೆ ನೀಡಿ, ಗಿಣಿಗೇರಾ–ರಾಯಚೂರು ರೈಲು ಮಾರ್ಗದ ಕಾರ್ಯಗತಗೊಳಿಸುವಿಕೆಗೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಜೊತೆಗೆ ಕುರ್ಡಿ ಮತ್ತು ಮಮದಾಪುರ ಕುರಿತ ಪ್ರಸ್ತಾವನೆಗಳನ್ನು ತಮ್ಮ ತಂಡದೊಂದಿಗೆ ಪರಿಶೀಲಿಸಿ, ಶೀಘ್ರದಲ್ಲೇ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಸತ್ಯ ಪ್ರಕಾಶ್ ಶಾಸ್ತ್ರಿ ರವರು (ಪ್ರಿನ್ಸಿಪಲ್ ಚೀಫ್ ಕಮರ್ಶಿಯಲ್ ಮ್ಯಾನೇಜರ್), ಶ್ರೀ ಬಿ. ಪ್ರಶಾಂತ್ ಕುಮಾರ್ ರವರು (ಪ್ರಿನ್ಸಿಪಲ್ ಚೀಫ್ ಆಪರೇಟಿಂಗ್ ಮ್ಯಾನೇಜರ್) ಹಾಗೂ ಶ್ರೀ ವೆಂಕಟೇಶ್ವರ ರಾವ್ ರವರು (ಚೀಫ್ ಎಂಜಿನಿಯರ್ – ಕನ್‌ಸ್ಟ್ರಕ್ಷನ್) ಕೂಡ ಉಪಸ್ಥಿತರಿದ್ದರು.

