ತಾಳಿಕೋಟಿ: ಮಹಾರಾಣಾ ಪ್ರತಾಪ್ ಸಿಂಹ ಅವರು ಮಾತೃಭೂಮಿಯ ರಕ್ಷಣೆಗಾಗಿ ತನ್ನ ಸರ್ವವನ್ನೂ ತ್ಯಾಗ ಮಾಡಿದ ಮಹಾನ್ ನಾಯಕ,ಅವರ ದೇಶಪ್ರೇಮ ಹಾಗೂ ತ್ಯಾಗದ ಜೀವನ ನಮಗೆಲ್ಲರಿಗೂ ಮಾದರಿಯಾಗಿದೆ ಎಂದು ಯುವ ಮುಖಂಡ ವಿಜಯಸಿಂಗ್ ಹಜೇರಿ ಹೇಳಿದರು. ಸೋಮವಾರ ಪಟ್ಟಣದ ಮಹಾರಾಣಾ ಪ್ರತಾಪ್ ಸಿಂಹ ವೃತ್ತದಲ್ಲಿ ರಾಣಾ ಪ್ರತಾಪರ ಹುತಾತ್ಮ ಸ್ಮರಣಾರ್ಥ ರಜಪೂತ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಜ್ಯೋತಿ ಬೆಳಗಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತದ ಇತಿಹಾಸದಲ್ಲಿ ಮಹಾರಾಣಾ ಪ್ರತಾಪ ರಂಥಹ ಶೌರ್ಯ ಹಾಗೂ ಪರಾಕ್ರಮದ ಬೇರೋಬ್ಬ ಅರಸ ನಮಗೆ ಸಿಗುವುದಿಲ್ಲ. ಅವರ ಸ್ವಾಭಿಮಾನದ ಬದುಕು ಭಾರತೀಯರ ಪಾಲಿಗೆ ಸ್ಪೂರ್ತಿಯಾಗಿದೆ ಎಂದರು.ರಾಜು ರಜಪೂತ ಮಹಾರಾಣಾ ಪ್ರತಾಪ ಸಿಂಹ ಅವರ ಜೀವನ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು.ಈ ಸಮಯದಲ್ಲಿ ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ,ಉಪಾಧ್ಯಕ ರತನಸಿಂಗ್ ಕೊಕಟನೂರ, ನಿವೃತ್ತ ಯೋಧ ಶ್ರೀಪಾಲ್ ಸಂಗಮಿ, ಮಾನಸಿಂಗ್ ಕೊಕಟನೂರ, ಜಿ.ಜಿ.ಮದರಕಲ್ಲ,ಎಂ.ಕೆ. ಪಟ್ಟಣಶೆಟ್ಟಿ, ಭರತಸಿಂಗ್ ವಿಜಾಪುರ, ಮುದುಕಪ್ಪ ಬಡಿಗೇರ, ರಾಘು ಚೌಹಾಣ, ಗೋವಿಂದಸಿಂಗ್ ಗೌಡಗೇರಿ, ಸುರೇಶ್ ಹಜೇರಿ, ಬಾಲಾಜಿಸಿಂಗ್ ವಿಜಾಪುರ, ಗೋವಿಂದಸಿಂಗ್ ಮೂಲಿಮನಿ, ದಿಲೀಪ ಹಜೇರಿ,ವಿಠ್ಠಲ್ ಹಜೇರಿ, ಪ್ರಹ್ಲಾದ್ ಹಜೇರಿ, ಕೇಸರಸಿಂಗ್ ದೇವಿ, ಪಿಂಟು ಹಜೇರಿ, ಸೂರಜ ಹಜೇರಿ, ಆನಂದ ಹಜೇರಿ, ಬಾಲಾಜಿ ಬಾಯ್ಸ್ ಇದ್ದರು.

Leave a Reply

Your email address will not be published. Required fields are marked *