ತಾಳಿಕೋಟಿ: ಪಟ್ಟಣದ ಪ್ರತಿಷ್ಠಿತ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶ್ರೇಷ್ಠ ವಚನಕಾರ, ದಾರ್ಶನಿಕರಾಗಿರುವ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಜಯಂತೋತ್ಸವವನ್ನು ಬುಧವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಿದ್ದನಗೌಡ ಮಂಗಳೂರ ಅವರು ಚೌಡಯ್ಯನವರ ಭಾವಚಿತ್ರಕ್ಕೆ ಪೂಜಿಸಲ್ಲಿಸಿ, ಪುಷ್ಪ ನಮನ ಅರ್ಪಿಸಿದರು. ನಂತರ ಮಾತನಾಡಿದ ಅವರು ಅಂಬಿಗರ ಚೌಡಯ್ಯನವರು 12ನೇ ಶತಮಾನದಲ್ಲಿ ಜೀವಿಸಿದ್ದ ಶಿವಶರಣ ಹಾಗೂ ಶ್ರೇಷ್ಠ ವಚನಕಾರರಾಗಿದ್ದಾರೆ. ವೃತ್ತಿಯಲ್ಲಿ ಅಂಬಿಗನಾಗಿದ್ದರೂ, ಪ್ರವೃತ್ತಿಯಲ್ಲಿ ಅನುಭವಿಗಳಾಗಿದ್ದರು. ಬಸವಣ್ಣನವರ ಅನುಭವ ಮಂಟಪದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದ್ದರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಗುರುಗಳಾದ ಸಂತೋಷ ಪವಾರ, ಜವಳಗೇರಿ,ದೈಹಿಕ ಶಿಕ್ಷಕರಾದ ಬಸವರಾಜ ಚಳಗಿ,ಶಾಂತಗೌಡ ಬಿರಾದಾರ, ಸಂಜು ಕುಮಾರ ರಾಠೋಡ, ಬಸವರಾಜ ಸವದತ್ತಿ, ರವಿಕುಮಾರ , ರವಿಕುಮಾರ ಮಲಾಬಾದಿ, ರಸೂಲಸಾ ತುರ್ಕಣಗೇರಿ, ಸಿದ್ದನಗೌಡ ಮುದ್ನೂರ, ಭೀಮನಗೌಡ ಸಾಸನೂರ, ಚೇತನ ನಾವದಗಿ, ಸವಿತಾ ಅಸ್ಕಿ,ಶಿವಲೀಲಾ ಚುಂಚೂರು, ರೂಪಾ ಪಾಟೀಲ, ಸಂಗಮೇಶ ಬಿರಾದಾರ, ಸಂಗೀತಾ ಬಿರಾದಾರ, ಮೇಘಾ ಪಾಟೀಲ, ಬೋರಮ್ಮ ಉಕ್ಕಲಿ, ಅನಿತಾ ಚೌದ್ರಿ, ಜ್ಯೋತಿ ಪೋಲಿಸ್ ಪಾಟೀಲ, ಶೃತಿ ಚೌದ್ರಿ,ರಾಜಬಿ ಬಿದರಿ, ನಾಗರತ್ನ ಮೈಲೇಶ್ವರ,ಶಿವಕುಮಾರ ಕುಂಬಾರ, ಹೀನಾ ಸನದಿ, ದೇವೇಂದ್ರ ಗುಳೆದ, ಮುಬಾರಕ ಬನ್ನಟ್ಟಿ,ದೇವರಾಜ ದೇಸಾಯಿ, ಸುಮಾ ಹಿರೇಮಠ, ಪ್ರತಿಭಾ ಗುಬ್ಬೇವಾಡ, ಗುರುದೇವಿ ಮಡಿವಾಳರ, ಜೈಯಶ್ರೀ ಹದಿಮೂರ, ಜೈರಾಬಿ ಮುಲ್ಲಾ ಸರ್ವ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *