ತಾಳಿಕೋಟಿ: ತಾಲೂಕಾ ಡಳಿತದ ವತಿಯಿಂದ ಬುಧವಾರ ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಅರ್ಥಪೂರ್ಣ, ಅತ್ಯಂತ ಸರಳವಾಗಿ ಆಚರಿಸಲಾಯಿತು. ಶಿರಸ್ತೆದಾರ ಅನೀಲ ಚೌಹಾಣ್ ಶಿವಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆನೆರವೇರಿಸಿ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಚಂದ್ರಕಾಂತ ಯರಗಲ್ ಹಾಗೂ ಶಶಿಕಾಂತ ಮೂಕಿಹಾಳ ಮಾತನಾಡಿ ನಿಜಶರಣ ಅಂಬಿಗರ ಚೌಡಯ್ಯನವರು 12ನೇ ಶತಮಾನದಲ್ಲಿ ಬಸವಣ್ಣನವರ ಸಾಮಾಜಿಕ ಸಮಾನತೆಯ ಕ್ರಾಂತಿಯಲ್ಲಿ ಸಾಕಷ್ಟು ಶ್ರಮಿಸಿದವರಾಗಿದ್ದಾರೆ. ಅವರೊಬ್ಬ ಶ್ರೇಷ್ಠ ವಚನಕಾರರಾಗಿದ್ದು ಅನುಭವ ಮಂಟಪದಲ್ಲಿ ಉನ್ನತ ಸ್ಥಾನವನ್ನು ಹೊಂದಿದವರಾಗಿದ್ದರು. ಅವರ ಜಯಂತಿಯನ್ನು ಆಚರಿಸುವುದರ ಜೊತೆಗೆ ಅವರ ಬದುಕಿನ ಆದರ್ಶಗಳ ಅನುಸರಣೆಯನ್ನೂ ಮಾಡಬೇಕಾಗಿದೆ. ಸಮಾಜದಲ್ಲಿ ಒಗ್ಗಟ್ಟನ್ನು ಕಾಯ್ದುಕೊಂಡು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಮತ್ತು ಉತ್ತಮ ಸಂಸ್ಕಾರಗಳನ್ನು ಕೊಡಲು ಎಲ್ಲರೂ ಪ್ರಯತ್ನಿಸಬೇಕಾಗಿದೆ ಎಂದರು. ಸಿ.ಆರ್.ಸಿ. ರಾಜು ವಿಜಾಪುರ ಕಾರ್ಯಕ್ರಮ ನಿರ್ವಹಿಸಿದರು. ಈ ಸಮಯದಲ್ಲಿ ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ,ಪಿಎಸ್ಐ ಜ್ಯೋತಿ ಖೋತ್, ಸಿ ಆರ್ ಸಿ ಇಬ್ರಾಹಿಂ ಆಲಮೇಲ, ಸಮಾಜದ ಅಧ್ಯಕ್ಷ ರಮೇಶ ಮೂಕಿಹಾಳ, ಪುರಸಭೆ ಮಾಜಿ ಸದಸ್ಯ ಪರಶುರಾಮ ತಂಗಡಗಿ, ನ್ಯಾಯವಾದಿ ಎಂ.ಎಸ್.ಜೋಲಿ, ಕಾಶಿನಾಥ ಮದರಿ, ಮಲ್ಲಿಕಾರ್ಜುನ ನಾಯ್ಕೋಡಿ ತೋಟಪ್ಪ ಏವೂರ, ಬಸವರಾಜ ತಳವಾರ, ಸಂಗನಬಸಪ್ಪ ಚಳ್ಳಗಿ, ಸಂಗಮೇಶ ಚಳ್ಳಗಿ, ಮಾನಪ್ಪ ನಾಯ್ಕೋಡಿ, ಮಲ್ಲಿಕಾರ್ಜುನ ನಾಟಿಕರ್, ದತ್ತು ಕೋಲಕಾರ, ಮಲ್ಲಿಕಾರ್ಜುನ ಅಸ್ಕಿ, ಭೀಮಣ್ಣ ತಳವಾರ, ಮಲ್ಲಿಕಾರ್ಜುನ್ ನೆಲ್ಲಗಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಇದ್ದರು.

