ತಾಳಿಕೋಟಿ: ತಾಲೂಕಿನ ಅಸ್ಕಿ ಗ್ರಾಮದಲ್ಲಿ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಸ್ಥಾಪಿಸಲಾದ ತೊಗರಿ ಖರೀದಿ ಕೇಂದ್ರಕ್ಕೆ ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ (ಕು.ಸಾಲವಾಡಗಿ) ಸೋಮವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಒಕ್ಕಲುತನ ಹುಟ್ಟುವಳಿಗಳಿಗೆ ಮಾರುಕಟ್ಟೆಯಲ್ಲಿ ಬೆಲೆಕುಸಿದಾಗ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಯಾದರೂ ದೊರಕಿಸಿ ಕೊಡಬೇಕೆಂಬ ಉದ್ದೇಶದಿಂದ ಸರ್ಕಾರ ಜಾರಿ ಮಾಡಿದ ಸದರಿ ಯೋಜನೆಯ ಪ್ರಯೋಜನವನ್ನು ನಮ್ಮ ರೈತರು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಅಸ್ಕಿ ಪಿಕೆಪಿಎಸ್ ಅಧ್ಯಕ್ಷ ಮಡಿವಾಳಪ್ಪ ಕೆ.ಚೌದ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶಾಸಕ ರಾಜುಗೌಡ ಪಾಟೀಲಗೆ ಸಂಘದ ವತಿಯಿಂದ ಸನ್ಮಾನಿಸಿ ಗೌರಿಸಲಾಯಿತು. ಈ ಸಮಯದಲ್ಲಿ ಪಿಕೆಪಿಎಸ್ ಉಪಾಧ್ಯಕ್ಷ ಶಂಕ್ರಪ್ಪ ಕೆಳಗಿನಮನಿ, ಮುಖಂಡ ಎಸ್.ಎಸ್.ಪಾಟೀಲ, ಅಸ್ಕಿ ಮಾಜಿ ಗ್ರಾಪಂ ಅಧ್ಯಕ್ಷ ರಾಯಪ್ಪಗೌಡ ಪಾಟೀಲ, ಪಿಕೆಪಿಎಸ್ ಸದಸ್ಯರಾದ ಹಣಮಗೌಡ ಬಿರಾದಾರ,ಮಲ್ಲನಗೌಡ ಕರಿಗೌಡರ, ವಿಶ್ವನಾಥರೆಡ್ಡಿ ಬಿರಾದಾರ, ಶಿವರುದ್ರಪ್ಪ ಮಗದಾಳ, ಬಸವರಾಜ ಬ್ಯಾಕೋಡ, ರುದ್ರಗೌಡ ಸಿ.ಬಿರಾದಾರ, ಎಂ.ಬಿ. ಕೊಣ್ಣೂರ, ಹೇಮಾ ಬಿ.ಯಾಳಗಿ ನಾಗಮ್ಮ ಎನ್.ಬಿರಾದಾರ, ಸಿದ್ದರಾಮಪ್ಪ ವಡಗೇರಿ,ಈರಘಂಟೆಪ್ಪ ದೊಡ್ಡಮನಿ,ಸಿಇಓ ಎಂ.ಎಂ.ತಳವಾರ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *