ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಹಾಲಾಪುರ ಗ್ರಾಮದ ಬೆಸ್ಟ್‌ ಪಬ್ಲಿಕ್‌ ಶಾಲೆಯಲ್ಲಿ ಸುಗ್ಗಿ ಉತ್ಸವ ಆಚರಿಸಲಾಯಿತು.
ಜಂಗಮರಹಳ್ಳಿಯ ದಂಡಗುಂಡಪ್ಪ ತಾತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,’ನಾಡಿನ ಸಂಸ್ಕೃತಿ, ಸಂಪ್ರದಾಯ ಬಿಂಬಿಸುವ ಆಚರಣೆಗಳು ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮಹತ್ವ ಪಡೆದಿವೆ.ಆಧುನಿಕ ಕಾಲದಲ್ಲಿ ಗ್ರಾಮೀಣ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸುವುದು ಅಗತ್ಯ’ ಎಂದರು.ಹೊರಳು, ಒನಕೆ, ಬಿದಿರಿನ ಪುಟ್ಟಿ, ಬೀಸುವ ಕಲ್ಲು, ಶ್ಯಾವಿಗೆ ಮಣಿ, ಮತ್ತಿತರ ಮನೆ ಬಳಕೆ ವಸ್ತುಗಳಿಗೆ ಕಬ್ಬು, ತೋರಣಗಳಿಂದ ಅಲಂಕರಿಸಿ ಬತ್ತದ ರಾಶಿ ಮಾಡುವ ಮೂಲಕ ರೈತರ ಬದುಕಿನ ಅನಾವರಣ ಮಾಡಲಾಯಿತು.ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಮುಖ್ಯಶಿಕ್ಷಕ ರವಿಕುಮಾರ ತೋರಣದಿನ್ನಿ, ಸಂಸ್ಥೆಯ ಉಪಾಧ್ಯಕ್ಷ ಕೆ.ಶೇಖರಪ್ಪ, ಕಾರ್ಯದರ್ಶಿ ಸಿದ್ದು, ಮುಖಂಡರಾದ ಕೃಷ್ಣಕುಮಾರ, ಕುಪ್ಪಣ್ಣ, ದೇವೇಂದ್ರ ಕುಮಾರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಸುಗ್ಗಿ ಉತ್ಸವದಲ್ಲಿ ಮಕ್ಕಳು ನೃತ್ಯ ಮಾಡಿದರು

 

Leave a Reply

Your email address will not be published. Required fields are marked *