ಮಸ್ಕಿ ಕಸದಿಂದ ರಸ ಹೇಗೆ ತೆಗೆಯಬೇಕು ಎಂಬುದನ್ನು ಚೆನ್ನಾಗಿ ಕರಗತ ಮಾಡಿಕೊಂಡಿರುವ ಮಸ್ಕಿ ಪಟ್ಟಣದ ಅಂಗನವಾಡಿ ಸಹಾಯಕಿಯರು, ಸ್ಥಳೀಯವಾಗಿ ಅಂಗನವಾಡಿ ಕೇಂದ್ರದಲ್ಲಿ ಲಭ್ಯವಿರುವ ಉಪಯೋಗಕ್ಕೆ ಬಾರದ ಪ್ಲಾಸ್ಟಿಕ್ ಚೀಲದಿಂದ ಆಕರ್ಷಕ ಪರಿಸರಸ್ನೇಹಿ ದಿನಬಳಕೆಯ ವಸ್ತುಗಳನ್ನು ತಯಾರಿಸಿ ಎಲ್ಲರು ಗಮನ
ಸೆಳೆದಿದ್ದಾರೆ.ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟು, ಅಂಗನವಾಡಿ ಕೇಂದ್ರದಲ್ಲಿ ಪ್ಲಾಸ್ಟಿಕ್ ಚೀಲಗಳು ಸಂಗ್ರಹಿಸಿ ಹೊಸ ರೂಪ ನೀಡಿ ಮತ್ತೆ ದಿನಬಳಕೆಯ ವಸ್ತುವನ್ನಾಗಿ ಪರಿವರ್ತಿಸುತ್ತಿದ್ದಾರೆ.
ಪರಿಸರಸ್ನೇಹಿ ಚೀಲ ಪ್ಲಾಸ್ಟಿಕ್ ತಯಾರಿಸಿದ ಈ ಕೈ ಚೀಲಗಳು ಗುಣಮಟ್ಟದಲ್ಲೂ ಉತ್ತಮವಾಗಿದ್ದು, ಮರುಬಳಕೆಗೆ ಯೋಗ್ಯವಾಗಿವೆ.
ಮಹಿಳೆಯರು ತಯಾರಿಸಿದ ಪ್ಲಾಸ್ಟಿಕ್ ಚೀಲಗಳನ್ನು ಶನಿವಾರ ಸಾರ್ವಜನಿಕ ಮಹಿಳೆಯರಿಗೆ ಪ್ಲಾಸ್ಟಿಕ್ ಚೀಲದಿಂದ ವಿವಿಧ ಬಗೆಯ ಹೆಚ್ಚಿನ ಖರ್ಚು ಇಲ್ಲದೆ ಚೀಲ ಮಾಡಬಹುದು.
ಮಸ್ಕಿ ಅಂಗನವಾಡಿ ಮೇಲ್ವಿಚಾರಕ್ಕಿ ಶಿವಲೀಲಾ ಹಿರೇಮಠ ಅವರ ನೇತೃತ್ವದಲ್ಲಿ ತರಬೇತಿ ಪಡೆದ ಮಹಿಳೆಯರು ಕಸದಿಂದ ರಸ ತೆಗೆಯುವ ಕೆಲಸ ಮಾಡಿದ್ದಾರೆ.
ಪ್ಲಾಸ್ಟಿಕ್ ಚೀಲಗಳನ್ನು ಬಳಸಲು ನಾನಾ ರೀತಿಯ ಸೃಜನಶೀಲ ವಿಧಾನಗಳಿವೆ,
ಸ್ವಲ್ಪ ಕ್ರಿಯೆಟಿವಿಟಿ ಮತ್ತು ತಾಳ್ಮೆಯಿದ್ದರೆ ಇವುಗಳಲ್ಲಿ ಬಹುತೇಕ ತ್ಯಾಜ್ಯ ವಸ್ತುಗಳಿಗೆ ಹೊಸ ರೂಪ ನೀಡಲು ಸಾಧ್ಯವಿದೆ. ಇವುಗಳನ್ನು ಉಪಯುಕ್ತ ವಸ್ತುಗಳನ್ನಾಗಿ ಮಾರ್ಪಡಿಸಿ ಮನೆಯಲ್ಲಿ ಉಪಯೋಗಿಸಿ ಖರ್ಚು ಕಡಿಮೆ ಮಾಡಬಹುದು ಎಂದು ಶಿವಲೀಲಾ ಅಂಗನವಾಡಿ ಮೇಲ್ವಿಚಾರಕ್ಕಿ ಮಸ್ಕಿ ಇವರು ತಿಳಿಸಿದರು.

