ರಾಯಚೂರು ಜನವರಿ 17 (ಕರ್ನಾಟಕ ವಾರ್ತೆ): ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು 2026ರ ಜನವರಿ 18 ರಂದು ರಾಯಚೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅಂದು ಬೆಳಿಗ್ಗೆ 10.30ಕ್ಕೆ ದಾವಣೆಗೆರೆ ಜಿಲ್ಲೆಯ ಗೊಪ್ಪೇನಹಳ್ಳಿ ರುದ್ರೇಶ್ವರ ಹೈಸ್ಕೂಲ್ ಗ್ರೌಂಡ್ ಹೆಲಿಪ್ಯಾಡನಿಂದ ನಿರ್ಗಮಿಸಿ ಬೆಳಗ್ಗೆ 11.30ಕ್ಕೆ ರಾಯಚೂರು ಜಿಲ್ಲೆಯ ಮಾನ್ವಿ ಹೆಲಿಪ್ಯಾಡಗೆ ಆಗಮಿಸಿ, ಮಾನವಿಯ ಕೆ.ಜಿ.ರೋಡ್‌ನಲ್ಲಿರುವ ಅಕ್ಬರ್ ಮಸ್ಜಿದ್ ಆವರಣದಲ್ಲಿ ರಾಯಚೂರು ಜಿಲ್ಲಾ ಮಾನ್ವಿ ತಾಲೂಕಿನ ದಾರುಸ್ಸಲಾಮ್ ಫೌಂಡೇಶನ್ ಟ್ರಸ್ಟ್ ಅವರು ಆಯೋಜಿಸಿರುವ 121ನೇ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ಮಧ್ಯಾಹ್ನ 3 ಗಂಟೆಗೆ ಮಾನ್ವಿಯಿಂದ ನಿರ್ಗಮಿಸಿ ಯಾದಗಿರಿ ಜಿಲ್ಲೆಯತ್ತ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಎನ್.ರಾಜಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
