ರಾಜ್ಯ ಸರ್ಕಾರ ಚುನಾವಣೆ ಪೂರ್ವದಲ್ಲಿ ಜನರಿಗೆ ನೀಡಿದ ಭರವಸೆಯಂತೆ ಅನ್ನಭಾಗ್ಯ, ಗೃಹಜೋತಿ, ಗೃಹಲಕ್ಷ್ಮಿ, ಯುವನಿಧಿ, ಶಕ್ತಿ ಯೋಜನೆ ಸೇರಿದಂತೆ ಕಾಂಗ್ರೆಸ್ ಸರ್ಕಾರದ ಪ್ರತಿಯೊಂದು ಯೋಜನೆಗಳು ಸಾಕಾರಗೊಂಡು ರಾಜ್ಯದಲ್ಲಿ ಸಫಲತೆ ಕಾಣಬೇಕು. ಎಂಬ ದೃಷ್ಟಿಕೋನದಿಂದ ಯೋಜನೆಗಳನ್ನು ಜಾರಿಗೆ ತಂದಿದೆ. ಇದನ್ನು ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿ ಮೇಲ್ವಿಚಾರಣೆ ಮಾಡಬೇಕು ಎಂದು ಪಂಚ ಗ್ಯಾರಂಟಿ ಯೋಜನೆ ಸಮಿತಿ ತಾಲೂಕು ಅಧ್ಯಕ್ಷರಾದ ವೈ.ಅನೀಲಕುಮಾರ ತಿಳಿಸಿದರು.
ಶನಿವಾರದಂದು ತಾಲೂಕು ಪಂಚಾಯತಿಯ ಸಭಾಂಗಣದಲ್ಲಿ ಪಂಚ ಗ್ಯಾರಂಟಿಗಳ ಸಮರ್ಪಕ ಅನುಷ್ಠಾನಕ್ಕಾಗಿ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ಕೊಟ್ಟಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಎಲ್ಲಾ ವರ್ಗದ ಜನ ಸಾಮಾನ್ಯರಿಗೆ ನೀಡುತ್ತಿದ್ದು ಸಂಬಂಧಪಟ್ಟಂತ ತಾಲೂಕು ಮಟ್ಟದ ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ತನ್ನಿ ಎಂದು ಅಧಿಕಾರಿಗಳಿಗೆ ಹೇಳಿದರು.
ನಂತರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯಾದ ಚಂದ್ರಶೇಖರ ಅವರು ಮಾತನಾಡಿ,
ಗೃಹಲಕ್ಷ್ಮಿ:- ಯೋಜನೆ ಸಿಂಧನೂರು ವಿಭಾಗದಲ್ಲಿ 72,395 ನೋಂದಣಿಯಾಗಿದ್ದು, 72,041 ಫಲಾನುಭವಿಗಳ ಖಾತೆಗೆ ಹಣ ಜಮವಾಗಿದೆ. ಇಲ್ಲಿ ತನಕ ಫಲಾನುಭವಿಗಳಿಗೆ 345,79,68,000 ವೆಚ್ಚವಾಗಿದೆ ಎಂದು ಸಭೆಗೆ ತಿಳಿಸಿದರು.
ಅನ್ನ ಭಾಗ್ಯ:- ಸಿಂಧನೂರು ತಾಲೂಕಿನ 158 ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯ ಪಡೆದ ಸದಸ್ಯರ ಸಂಖ್ಯೆ 2,75,238 ಶೇ.90 ರಷ್ಟು ಗುರಿ ಕಂಡಿದೆ ಎಂದರು.
ಶಕ್ತಿ ಯೋಜನೆ:- ಮಹಿಳೆಯರು ಪ್ರತಿತಿಂಗಳು 3.10 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ.
ಗೃಹ ಜ್ಯೋತಿ:- ಗ್ರಾಮೀಣ ಭಾಗದಲ್ಲಿ 29,520 ಮೀಟರ್ ಗಳು ಹಾಗೂ ನಗರದ ಪ್ರದೇಶದಲ್ಲಿ 19,526 ಮೀಟರ್ ಇವೆ ಮತ್ತು ಯುವನಿಧಿ ಕುರಿತಾಗಿ ಮಾಹಿತಿಯನ್ನು ಸಭೆಗೆ ನೀಡಿದರು. ಸಭೆಯಲ್ಲಿ ಅಧಿಕಾರಿಗಳು, ಸಮಿತಿ ಸದಸ್ಯರು ಭಾಗವಹಿಸಿದ್ದರು.

