ಅರಕೇರಾ : ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅರಕೇರಾ ತಾಲೂಕಿನ ಕಾಂಗ್ರೆಸ್ ಪಕ್ಷದ ನೂತನ ವಕ್ತಾರರನ್ನಾಗಿ ಪಟ್ಟಣದ ನಿವಾಸಿ ರಾಜಕುಮಾರ ತಂದೆ ಕರಿಯಣ್ಣ ಇವರನ್ನು ನೇಮಕ ಮಾಡಿದ್ದಾರೆ.

ಪಕ್ಷದ ಸಂಘಟನೆ ತತ್ವ, ಸಿದ್ಧಾಂತ ,ನೀತಿ ಮತ್ತು ನಿಯಮಗಳನ್ನು ಅನುಸರಿಸಿಕೊಂಡು ಹಲವು ವರ್ಷಗಳಿಂದ ಪಕ್ಷದ ಸಂಘಟನೆಯಲ್ಲಿ. ಸಕ್ರಿಯವಾಗಿ ತೊಡಗಿಸಿಕೊಂಡು ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ, ಈ ಜವಬ್ದಾರಿಯನ್ನು ವಹಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಮುಂಬರುವ ಚುನಾವಣೆಗಳಲ್ಲಿ ಇನ್ನಷ್ಟು ಬಲವರ್ಧನೆಗೆ ಶ್ರಮಿಸುವಂತೆ ಸೂಚಿಸುವ ಮೂಲಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಬಸವರಾಜ ಪಾಟೀಲ್ ಇಟಗಿಯವರು ಆದೇಶ ಹೊರಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಬಸವರಾಜ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರೇಶ್ ನಾಯಕ ಶಾಖೆ, ಶಂಕ್ರಪ್ಪ ಪವಾರ್ ಬಂಡೇಗುಡ್ಡ, ರಂಗಪ್ಪ ತುಮನಮರಡಿ, ಸೂಗೂರೇಶ ಹೂಗಾರ,ರಾಘವೇಂದ್ರ ಪೂಜಾರಿ, ರಂಗಪ್ಪ ಜಾಲಹಳ್ಳಿ ಇವರುಗಳು ಅಭಿನಂದಿಸಿದರು.

Leave a Reply

Your email address will not be published. Required fields are marked *