ಮಸ್ಕಿ ತಾಲೂಕಿನ ಹಾಲಾಪೂರದ ದಿ ಬೆಸ್ಟ್ ಪಬ್ಲಿಕ್ ಶಾಲೆಯಲ್ಲಿ ವಿನೂತನ, ವಿಶಿಷ್ಟಪೂರ್ಣ ಸುಗ್ಗಿ ಉತ್ಸವ ಕಾರ್ಯಕ್ರಮ ತೊರಳು ತೋರಣಗಳಿಂದ,ಹೂ ಅಲಂಕಾರಗಳಿಂದ ಶಾಲೆ ಕಂಗೊಳಿಸುತ್ತಿತ್ತು. ಕಾರ್ಯಕ್ರಮದ ಪೂಜೆಯನ್ನು ಬಸವರಾಜ ಸ್ವಾಮಿ ನೆರವೇರಿಸಿದರು . ಉದ್ಘಾಟನೆಯನ್ನು ಶ್ರೀ ದಂಡಗುಂಡಪ್ಪ ತಾತ ಜಂಗಮರಹಳ್ಳಿ ಅವರಿಂದ ನಡೆಯಿತು.ನಂತರ ಮುಖ್ಯಗುರು ರವಿಕುಮಾರ ತೋರಣದಿನ್ನಿ ಮಾತಾಡುತ್ತಾ ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಇಡಿ ವಿಶ್ವವೇ ಮೆಚ್ಚುವಂತದ್ದು, ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ, ಅನೇಕ ಆಚಾರ, ವಿಚಾರ ಕಾಣುತ್ತೇವೆ, ಇಂದು ಆಧುನಿಕ ಜೀವನಶೈಲಿ ಭರಾಟೆಯಲ್ಲಿ ಗ್ರಾಮೀಣ ಬದುಕಿನ ಸೊಗಡು ಮಾಯವಾಗುತ್ತಿದ್ದು, ಮೊಬೈಲ್, ಟಿವಿ ಇವುಗಳೇ ನಮ್ಮ ಪರಂಪರೆಗೆ ಮಾರಕವಾಗುತ್ತಿದ್ದು, ಅದಕ್ಕೆ ಇಂದಿನ ಯುವ ಪೀಳಿಗೆಗೆ ನಮ್ಮ ಗತವೈಭವ ಸಾರುವ ಪರಂಪರೆಯನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ಕಳೆದ ವರ್ಷದಿಂದ ಸುಗ್ಗಿ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಮುಖ್ಯಗುರು ರವಿಕುಮಾರ ತೋರಣದಿನ್ನಿ ಹೇಳಿದರು. ಈ ಸಂದರ್ಭದಲ್ಲಿ ಶಾಲೆಯ ಉಪಾಧ್ಯಕ್ಷರಾದ ಕೆ ಶೇಖರಪ್ಪ, ಕಾರ್ಯದರ್ಶಿ ಸಿದ್ದು, ಗ್ರಾಮದ ಮುಖಂಡರು, ಪಾಲಕ ಪೋಷಕರು, ಶಿಕ್ಷಕರಾದ ಕೃಷ್ಣಕುಮಾರ, ಕುಪ್ಪಣ್ಣ, ದೇವೇಂದ್ರಕುಮಾರ, ಶಿಕ್ಷಕಿಯರು ಇದ್ದರು. ಕಾರ್ಯಕ್ರಮ ನಂತರ ಮಕ್ಕಳಿಂದ ವಿವಿಧ ವೇಷ ಭೂಷಣಗಳೊಂದಿಗೆ ನೃತ್ಯ, ಡೊಳ್ಳು, ಗಾಯನ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯುತ್ತಮವಾಗಿ ಮೂಡಿ ಬಂದವು.

