ಲಿಂಗಸಗೂರು : ಜ 17
ಪೈದೊಡ್ಡಿ ಗ್ರಾಮದ ನೀರಿನ ಸಮಸ್ಯೆಯನ್ನು ಪರಿಹರಿಸುವಂತೆ ಆಗ್ರಹಿಸಿ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳ ಕಾರ್ಯಾಲಯದ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ಮಾಡಿದರು.
ಪೈದೊಡ್ಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಚಳಿಗಾಲದಲ್ಲಿಯೇ ಈ ಪರಿಯ ನೀರಿನ ಸಮಸ್ಯೆ ಯಾದರೆ, ಇನ್ನು ಮುಂಬರುವ ಬೇಸಿಗೆ ದಿನಗಳಲ್ಲಿ ಗ್ರಾಮದ ಜನತೆಯ ಪರಿಸ್ಥಿತಿ ನೆನದರೆ ಮೈ ಜುಮ್ಮ ಎನ್ನುತ್ತದೆ. ಅಂತಹ ಬೀಕರ ಪರಿಸ್ಥಿತಿ ಪೈದೊಡ್ಡಿ ಗ್ರಾಮದಲ್ಲಿದೆ. ಈ ಬಗ್ಗೆ 9 ಜನವರಿ 2026 ರಂದು ತಾಲೂಕು ಪಂಚಾಯತಿ ಸಾಮಾನ್ಯ ಸಭೆಯಲ್ಲಿ ನಮ್ಮ ಸಂಘಟನೆ ಮೌಖಿಕವಾಗಿ ತಮ್ಮ ಬಳಿ ಪೈದೊಡ್ಡಿ ಗ್ರಾಮದ ನೀರಿನ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಲಾಗಿತ್ತು. ಇನ್ನು 2 ದಿನಗಳಲ್ಲಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುತ್ತೇವೆಂದು
ಮೌಖಿಕವಾಗಿ ಭರವಸೆ ನೀಡಿದ್ದೀರಿ. ಆದರೆ ವಾರ ಕಳೆದರು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ,
ಕಳೆದ 1 ತಿಂಗಳಿಂದ ಗ್ರಾಮದ ಜನತೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೇ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಬಗ್ಗೆ
ತಲೆ ಕೆಡಿಸಿಕೊಳ್ಳದೇ ಮೌನಕ್ಕೆ ಶರಣಾಗಿದ್ದಾರೆ. ನೀರಿನ ಸಮಸ್ಯೆ ಬಗ್ಗೆ ಹಲವಾರು ಬಾರಿ ಮನವಿ ಮಾಡಿದರು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ, ಕಾರಣ ಗ್ರಾಮದ ಜನತೆ, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ನಮ್ಮ ಸಂಘಟನೆಯ ಪದಾಧಿಕಾರಿಗಳು ನೀರಿನ ಸಮಸ್ಯೆ ಪರಿಹರಿಸುವವರೆಗೂ ನಮ್ಮ ಪ್ರತಿಭಟನೆಯನ್ನು ಹಿಂದೆ ತೆಗೆದುಕೊಳ್ಳುವುದಿಲ್ಲವೆಂದು ಪಟ್ಟು ಹಿಡಿದ್ದಿದ್ದರು .
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಜಿಲಾನಿಪಾಷಾ, ರವಿಕುಮಾರ ಬರಗುಡಿ, ಆಜಿಜ್ ಪಾಷಾ, ಮೋಸಿನ್ ಖಾನ್, ಅಲ್ಲಾವುದ್ದೀನ್. ತಿಮ್ಮನಗೌಡ, ಮಲ್ವ, ಮರೆಪ್ಪ, ಬಾಬು, ವಿರೇಶ ಹಿರೇಮಠ, ಪ್ರಭುಗೌಡ, ಪರಮಣ್ಣ ಸೇರಿ ಗ್ರಾಮಸ್ಥರು ಇದ್ದರು

