ರಾಯಚೂರು ಜನವರಿ 14 (ಕರ್ನಾಟಕ ವಾರ್ತೆ): ಜಿಲ್ಲಾಡಳಿತದಿಂದ ಜನವರಿ 21ರಂದು ಅಂಬಿಗರ ಚೌಡಯ್ಯ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳ ಕಚೇರಿಯ ತಹಶಿಲ್ದಾರ್ ಜಗದೀಶ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅವರು ಇತ್ತೀಚೆಗೆ ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂಬಿಗರ ಚೌಡಯ್ಯ ಜಯಂತಿ ಆಚರಣೆಯ ಪೂರ್ವಭಾವಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಜ.21ರಂದು ಜಿಲ್ಲೆಯ ಎಲ್ಲ ತಾಲೂಕುಗಳು, ಶಾಲಾ-ಕಾಲೇಜುಗಳಲ್ಲಿ ಆಚರಿಸಲಾಗುವುದು. ವಿವಿಧ ಇಲಾಖೆಗಳು ಜಯಂತಿ ಆಚರಣೆಗೆ ಸಹಕಾರ ನೀಡುವ ಜತೆಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಬೇಕು. ಅಂದು ಬೆಳಗ್ಗೆ 09 ಗಂಟೆಗೆ ನಗರದ ಬಿ.ಆರ್.ಬಿ ಸರ್ಕಲ್ ನಿಂದ ಅಂಬಿಗರ ಚೌಡಯ್ಯ ಅವರ ಭಾವಚಿತ್ರದ ಮೆರವಣಿಗೆ ನಡೆಯಲಿದೆ. 11 ಗಂಟೆಗೆ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಇರಲಿದೆ ಎಂದರು.
ವೇದಿಕೆಯನ್ನು ಅಚ್ಚುಕಟ್ಟಾಗಿ ಅಂಲಕಾರ ಮಾಡಬೇಕು. ಗಣ್ಯರಿಗೆ ಆಮಂತ್ರಣ, ಪ್ರತಿಭಾನಿತ್ವರಿಗೆ ಸನ್ಮಾನ, ಉಪನ್ಯಾಸ ಸೇರಿದಂತೆ ಎಲ್ಲವೂ ಅಚ್ಚುಕಟ್ಟಾಗಿರಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉತ್ತರಾದೇವಿ, ಸಮುದಾಯದ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ, ಸಮಾಜದ ಮುಖಂಡರಾದ ಹೊನ್ನಪ್ಪ, ಶ್ರೀನಿವಾಸ್, ಪಿ.ಪರಮೇಶ್, ಕೆ.ತಿಮ್ಮಪ್ಪ, ಪಿ.ಈರೇಶ, ಈರೇಶ ಜಾಲಗೇರಿ, ಕೆ.ನರಸಿಂಹ, ಇ.ಶಿವರಾಮ್, ಹನುಮಂತು ಕಡಗೋಳ ಸೇರಿದಂತೆ ಇತರರು ಇದ್ದರು.

