ಮಸ್ಕಿ: ರಾಯಚೂರು- ಬೆಳಗಾವಿ ರಾಷ್ಟ್ರೀಯ ಹೆದ್ದಾರಿ 748ಎ ಭಾರತ ಮಾಲಾ ಕಾಮಗಾರಿಗೆ ಭೂಮಿ ಕಳೆದುಕೊಂಡ ರೈತರಿಗೆ ಕೂಡಲೇ ಹೆದ್ದಾರಿ ಪ್ರಾಧಿಕಾರದಿಂದ ಬೆಳೆ ಪರಿಹಾರ ಮತ್ತು ಭೂ-ಪರಿಹಾರ ನೀಡಬೇಕೆಂದು ಪ್ರಾಧಿಕಾರ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸಂಸದ ರಾಜಶೇಖರ ಹಿಟ್ನಾಳ ಹಾಗೂ ಮಸ್ಕಿ ಶಾಸಕ ಆರ್ ಬಸನಗೌಡ ತುರುವಿಹಾಳ ಖಡಕ್ ಸೂಚನೆ ನೀಡಿದ್ದಾರೆ.
ಮಸ್ಕಿ ತಾಲೂಕಿನ ಪಾಮನಕಲ್ಲೂರು, ಸಂತೆಕೆಲ್ಲೂರು ಹೊರವಲಯದಲ್ಲಿ ನಡೆದಿರುವ ೭೪೮ಎ ಭಾರತ ಮಾಲಾ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಸಂಸದ ಮತ್ತು ಶಾಸಕ ಆರ್.ಬಸನಗೌಡ ತುರವಿಹಾಳ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು. ನಂತರ ಹೆದ್ದಾರಿಗಾಗಿ ಭೂಮಿ ಮತ್ತು ಬೆಳೆ ಕಳೆದಕೊಂಡ ಗೋನವಾರ ರೈತರು ಪರಿಹಾರ ನೀಡಿಲ್ಲವೆಂದು ಸಂಸದರಿಗೆ ದೂರು ನೀಡಿದ ಮೇಲೆ ರೈತರಿಗೆ ಪರಿಹಾರ ನೀಡದೆ ಹೇಗೆ ಕೆಲಸ ಆರಂಭ ಮಾಡಿದ್ದೀರಿ ಮೊದಲು ರೈತರಿಗೆ ಪರಿಹಾರ ಕೊಡಿ, ಪರಿಹಾರ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆಂಬ ದೂರುಗಳು ಕೇಳಿ ಬರುತ್ತಿವೆ. ಹೆದ್ದಾರಿ ಕಾಮಗಾರಿ ಸಲುವಾಗಿ ಭೂಮಿ ಮತ್ತು ಬೆಳೆ ಕಳೆದುಕೊಂಡ ರೈತರ ಜಮೀನುಗಳನ್ನು ಕೂಡಲೇ ಜಂಟಿಯಾಗಿ ಸರ್ವೇ ನಡೆಸಿ ಪರಿಹಾರ ವಂಚಿತ ರೈತರಿಗೆ ಪರಿಹಾರ ನೀಡಬೇಕೆಂದರು.
ನಂತರ ಶಾಸಕ ಆರ್. ಬಸನಗೌಡ ಮಾತನಾಡಿ ಭೂಮಿ ಕಳೆದಕೊಂಡ ರೈತರಿಗೆ ಭೂ ಪರಿಹಾರ ನೀಡದೇ ಕಾಮಗಾರಿಯನ್ನು ಆರಂಭಿಸಿದ್ದರಿಂದ ಇಂತಹ ಸಮಸ್ಯೆ ಎದುರಿಸಬೇಕಾಗಿದೆ. ಜಂಟಿಯಾಗಿ ಸರ್ವೇ ಕಾರ್ಯ ನಡೆಸದೇ ಭೂಮಿ ಹೇಗೆ ವಶಕ್ಕೆ ತೆಗೆದುಕೊಂಡು ಕೆಲಸ ಆರಂಭಿಸಿದ್ದಿರಿ ಎಂದು ದೂರಿದರು. ಅಧಿಕಾರಿಗಳು ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಕೊಟ್ಟರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪರಿಹಾರ ನೀಡುವಲ್ಲಿ ತಾರತಮ್ಯ ಮಾಡದೆ ನೀರಾವರಿ ಇಲಾಖೆಯ ನೋಟಿಪಿಕೇಶ ಪ್ರಕಾರ ರೈತರಿಗೆ ಪರಿಹಾರ ನೀಡಿ. ಪರಿಹಾರಕ್ಕಾಗಿ ರೈತರನ್ನು ಕೋರ್ಟ್ವರೆಗೂ ಅಲೆದಾಡಿಸುವ ಕೆಲಸ ಮಾಡಬೇಡಿ ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಲಿಂಗಸ್ಗೂರು ಸಹಾಯಕ ಆಯುಕ್ತ ಬಸವಣ್ಣಪ್ಪ ಕಲಶೆಟ್ಟಿ, ತಹಸೀಲ್ದಾರ್ ಮಂಜುನಾಥ ಬೋಗಾವತಿ, ಭೂ-ಸ್ವಾಧೀನ ಅಧಿಕಾರಿ ಗುರುಸಿದ್ದಯ್ಯ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಸಿದ್ರಾಮಪ್ಪ ಸಾಹುಕಾರ, ಹೆಚ್.ಬಿ.ಮುರಾರಿ, ಸಿಪಿಐ ರಾಮಪ್ಪ ಜಳಗೇರಿ ಸೇರಿದಂತೆ ಇನ್ನಿತರರಿದ್ದರು.

 ಮಸ್ಕಿ ಶಾಸಕ ಆರ್. ಬಸನಗೌಡ ಅವರು ಕೆಡಿಪಿ ಸಭೆಯಲ್ಲಿ ಧ್ವನಿ ಎತ್ತಿದ್ದರಿಂದ ರೈತರು ಬಚಾವ್

ರಾಯಚೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ಬಸನಗೌಡ ತುರುವಿಹಾಳ ಅವರು ಇತ್ತೀಚಿಗೆ ಹೆದ್ದಾರಿ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಧ್ವನಿ ಎತ್ತಿದ್ದರಿಂದ ಇಲ್ಲಿನ ರೈತರು ಬಚಾವಾಗಿದ್ದೇವೆ ಇಲ್ಲದಿದ್ದರೆ ಇಲ್ಲಿಯವರೆಗೆ ನಮಗೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿಸುತ್ತಿದ್ದರು ಎಂದು ಹೇಳಿದರು ಶಾಸಕರು ನಮ್ಮ ಪರವಾಗಿ ಧ್ವನಿ ಎತ್ತಿದ್ದಕ್ಕೆ ರೈತರ ಪರವಾಗಿ ಧನ್ಯವಾದ ಸಲ್ಲಿಸುವದಾಗಿ ಹೇಳಿದರು.
 ಹೈಲೇಟ್ಸ್ 
* ಅಮಾಯಕ ರೈತರಿಗೆ ಪೊಲೀಸರಿಂದ ಕಿರುಕುಳ ನೀಡಿದ ಆರೋಪ.
* ಹೆದ್ದಾರಿ ಪ್ರಾಧಿಕಾರದ ದೌರ್ಜನ್ಯಕ್ಕೆ ಭೂಮಿ ಕಳೆದುಕೊಂಡ ಕಂಗಾಲಾದ ಗೋನವಾರ ರೈತರು
* ಭೂ ಮತ್ತು ಬೆಳೆ ಪರಿಹಾರ ನೀಡುವಲ್ಲಿ ತಾರತಮ್ಯ ಆರೋಪ
* ಪರಿಹಾರ ಕೇಳಲೋದ ರೈತರಿಗೆ ಬಂಧನದ ಭೀತಿ ರೈತರಲ್ಲಿ ಆತಂಕ.
* ಗುತ್ತಿಗೆದಾರರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಜಿಲ್ಲಾಡಳಿತ ರೈತರ ಆರೋಪ.

ಕೋಟ್ :-

ಹೆದ್ದಾರಿ ರಸ್ತೆ ನಿರ್ಮಾಣಕ್ಕಾಗಿ ಯಾವ ರೈತರು ಭೂಮಿಯನ್ನು ಕಳೆದುಕೊಂಡಿದ್ದಾರೋ ಇನ್ನು ಉಳಿದ ಭೂಮಿ ಉಳಿಮೆ ಮಾಡಲು ಓಡಾಡಲು ತೊಂದರೆ ಆಗುತ್ತಿದ್ದರೆ ಅವಶ್ಯವಿರುವ ಸ್ಥಳವನ್ನು ಗುರುತಿಸಿ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ ಹಾಗೂ ಸಮರ್ಪಕ ಪರಿಹಾರ ನೀಡಬೇಕು – ಸಂಸದ ರಾಜಶೇಖರ ಹಿಟ್ನಾಳ್

Leave a Reply

Your email address will not be published. Required fields are marked *