ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಕಾಯಕಯೋಗಿ ಶ್ರೀಸಿದ್ದರಾಮೇಶ್ವರರ 854 ನೇ ಜಯಂತಿ ಕಾರ್ಯಕ್ರಮವನ್ನು ಶ್ರೀಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಿ ತಹಸೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಮಾತನಾಡಿ 12ನೇ ಶಾತಮಾನದಲ್ಲಿ ಬಸವಾದಿ ಶರಣರ ಪ್ರಭವದಿಂದ ಶ್ರೀಸಿದ್ದರಾಮೇಶ್ವರರು ತಮ್ಮ ಜೀವನದಲ್ಲಿ ಕಾಯಕ ದಾಸೋಹ, ತತ್ವಗಳನ್ನು ಅಳವಡಿಸಿಕೊಂಡು ಕೆರೆ ಕಟ್ಟೆಗಳನ್ನು, ಸಾಮೂಹಿಕ ವಿವಾಹಗಳು ಸೇರಿದಂತೆ ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಂಡಿರುವದನ್ನು ಕಾಣಬಹುದು ಶ್ರೀ ಸಿದ್ದರಾಮೇಶ್ವರರ ವಚನಗಳಲ್ಲಿನ ತತ್ವ ಅದರ್ಶಗಳನ್ನು ಪ್ರತಿಯೋಬ್ಬರು ಕೂಡ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ಯಲ್ಲಪ್ಪ ನಿಲೋಗಲ್ ಶಿವಯೋಗಿ ಶ್ರೀಸಿದ್ದರಾಮೇಶ್ವರರ ಕುರಿತು ವಿಶೇಷ ಉಪನ್ಯಾಸ ನೀಡಿ ಶಿವಯೋಗಿ ಸಿದ್ದರಾಮೇಶ್ವರರು 68 ಸಾವಿರ ವಚನಗಳನ್ನು ರಚಿಸಿದ್ದು ಅವುಗಳಲ್ಲಿ 1,679 ವಚನಗಳು ಮಾತ್ರ ಲಭ್ಯವಿವೆ. ಇಂತಹ ಮಹಾಪುರುಷರನ ಆರಾಧಕರಾದ ಭೋವಿ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಪ್ರಗತಿ ಸಾಧಿಸಬೇಕಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ತೋರಿದ ಹನುಮಂತಪ್ಪ ಕೊಟ್ನೆಕಲ್, ಬಸವರಾಜ ,ಮಲ್ಲಿಕಾರ್ಜುನ ಪೂಜಾರಿ, ಬಸವರಾಜ ಭಜಂತ್ರಿ, ಬಸ್ಸಪ್ಪ ಮದ್ಲಾಪುರ್‌ರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗ್ರೇಡ್-2 ತಹಸೀಲ್ದಾರ ಅಬ್ದುಲ್ ವಾಹಿದ್ ಭೋವಿ ಸಮಾಜ ಒಕ್ಕೂಟ ಸಮಿತಿ ಅಧ್ಯಕ್ಷ ಆನಂದ ಭೋವಿ ಮಾನ್ವಿ, ಪರಶುರಾಮ ಭಜಂತ್ರಿ ನಕ್ಕುಂದಿ, ಸಂತೋಷಕುಮಾರ, ಕರಿಯಪ್ಪ ಕೋಳಿಕ್ಯಾಂಪ್, ಆನಿಲಕುಮಾರ ಮುದ್ದಂಗುಡ್ಡಿ, ರೇಣುಗೋಪಾಲ ಭೋವಿ, ಹುಲಿಗೆಪ್ಪ ಮಾನ್ವಿ, ಅಮರೇಶ ಕೋಳಿಕ್ಯಾಂಪ್, ಈರಪ್ಪ ಭೋವಿ, ಶಿವಪ್ಪ ಭೋವಿ, ರಮೇಶ್ ಭೋವಿ ಸೇರಿದಂತೆ ಇನ್ನಿತರರು ಇದ್ದರು.
ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಕಾಯಕಯೋಗಿ ಶ್ರೀಸಿದ್ದರಾಮೇಶ್ವರರ 854 ನೇ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.

