ಮಸ್ಕಿ ತಾಲೂಕಿನ ಹಾಲಾಪೂರ ಗ್ರಾಮ ಪಂಚಾಯತಿಯಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಮಾಡಲಾಯಿತು. 12ನೇ ಶತಮಾನದ ಅನೇಕ ವಚನಕಾರರು , ಶರಣರಲ್ಲಿ ಒಬ್ಬರಾದ ಶ್ರೀ ಶಿವಯೋಗಿ ಕರ್ಮಯೋಗಿ ಸಿದ್ದರಾಮೇಶ್ವರರು ಕೆಲಸವೇ ದೇವರು ಎಂಬ ತತ್ವವನ್ನು ನಂಬಿದ ಅಪ್ರಥಮ ಪುರುಷರು ಇವರು ಸಮಾಜ ಸೇವೆಯಲ್ಲಿ ಸದಾ ತಮ್ಮನ್ನು ತಾವು ತೂಡಗಿಸಿಕೊಂಡಿದ್ದರು. ಸಮಾಜದ ಜನತೆಗೆ ಅನೇಕ ಕೆರೆಕಟ್ಟೆಗಳನ್ನು ನಿರ್ಮಿಸಿ ಕುಡಿಯುವ ನೀರು ಸರಬರಾಜು ವ್ಯವಸ್ಥೆಗಳನ್ನು ರೂಪಿಸಿದ ಕೀರ್ತಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರು ಇಂಥಹ ಪುರುಷರ ಜಯಂತಿ ಸಮಾಜಕ್ಕೆ ಆದರ್ಶ. ಈ ಸಂದರ್ಭದಲ್ಲಿ ಕಾರ್ಯದರ್ಶಿ ಪರಣ್ಣ ಪಾಮನಕಲ್ಲೂರು, ಕಂಪ್ಯೂಟರ್ ಆಪರೇಟರ ರಂಗಪ್ಪ ಹಾಗೂ ಗ್ರಾಮಸ್ಥರು, ಸಿಬ್ಬಂದಿ ವರ್ಗದವರು ಇದ್ದರು.

