ಮಸ್ಕಿ : ಬುದುವಾರ ಮದ್ಯಾಹ್ನ ಮಸ್ಕಿಯ ತಾಲೂಕಾ ಪಂಚಾಯ್ತಿಯ ಸಭಾಂಗಣದಲ್ಲಿ ಎಡೆದೊರೆ ನಾಡು ರಾಯಚೂರು ಉತ್ಸವ 2026 ರ ಪೂರ್ವಬಾವಿ ಸಭೆಯನ್ನು ನಡೆಸಲಾಯಿತು.
ಅದರ ಅಧ್ಯಕ್ಷತೆಯನ್ನು ವಹಿಸಿದ್ದ ಮಸ್ಕಿ ಶಾಸಕ ಆರ್,ಬಸನಗೌಡ ತುರುವಿಹಾಳ ಮಾತನಾಡಿ ರಾಯಚೂರು ಉತ್ಸವ ಇದು ನಮ್ಮ ಉತ್ಸವ ಕಾರಣ ಎಲ್ಲರೂ ಉತ್ಸಾಹದಿಂದ ಭಾಗವಹಿಸಿ ಯಶಸ್ವಿಗೊಳಿಸುವ ಜವಬ್ದಾರಿ ನಮ್ಮ ಮೇಲಿದೆ ,ಗ್ರಾಮ,ಪಟ್ಟಣ,ಪುರಸಭೆಯ ಪದಾಧಿಕಾರಿ ಸದಸ್ಯರು ಆಯಾ ಊರಿನ ಕಲಾವಿದರಿಗೆ ಸಾರ್ವಜನಿಕರಿಗೆ ಪ್ರಚುರಪಡಿಸಿ ಎಂದು ಹೇಳಿದರು.
ಇದಕ್ಕೂ ಮೊದಲು ಪ್ರಸ್ತಾವಿಕವಾಗಿ ಮಾತನಾಡಿದ ತಹಸಿಲ್ದಾರ್ ಮಂಜುನಾಥ ಬೋಗಾವತಿ ಈ ಉತ್ಸವ ನಮ್ಮೆಲ್ಲರ ಹೆಮ್ಮೆ ಇದರಲ್ಲಿ ಎಲ್ಲರಿಗೂ ಅವಕಾಶವಿದೆ ಇದು 4/1/2026 ರಿಂದ ಆರಂಭವಾಗಿ 31/1/2026 ರತನಕ ನಡೆಯಲಿದೆ ಗ್ರಾಮೀಣಕ್ರೀಡೆಗಳು,ಜಾನಪದ,ಕುಸ್ತಿ, ಮ್ಯಾರಥಾನ್,ಸೈಕ್ಲಿಂಗ್, ಮ್ಯುಜಿಕಲ್ ನೈಟ್,ಉದ್ಯೋಗ ಮೇಳ, ಕವಿಗೋಷ್ಟಿಗಳಂತಹ ಹಲವಾರು ಕಾರ್ಯಕ್ರಮಗಳಿವೆ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಪುರಸಭೆಯ ಅಧ್ಯಕ್ಷ ಸುರೇಶ ಹರಸೂರು ಇದು ಖುಷಿಯ ವಿಷಯ ಇದರ ಜೊತೆಗೆ ಮುಂದಿನ ವರ್ಷದಿಂದ ಮಸ್ಕಿ ಉತ್ಸವ ಮಾಡಿದರೆ ಇನ್ನೂ ಉತ್ತಮವಾಗುತ್ತದೆ ಎಂದು ಸಲಹೆ ನೀಡಿದರು.
ಸರಕಾರಿ ನೌಕರಸಂಘದ ಅಧ್ಯಕ್ಷ ಪಂಪಾಪತಿ ಹೂಗಾರ್ ಮಾತನಾಡಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶಗಳನ್ನು ನೀಡಿ ಅವರಿಗೂ ಪ್ರೋತ್ಸಾಹ ನೀಡಬೇಕು ಜೊತೆಗೆ ಉತ್ತಮ ನೌಕರರನ್ನು ಆಯ್ಕೆಮಾಡಿ ಗೌರವಸನ್ಮಾನ ಮಾಡಿದರೆ ಸೇವೆಮಾಡಲು ಉತ್ಸಾಹ ಬರುತ್ತದೆ ಎಂದರು.
ಈ ಸಭೆಯಲ್ಲಿ ಭಾಗವಹಿಸಿದ್ದ ಕನ್ನಡಪರ,ದಲಿತಪರ,ರೈತಪರ ಸಂಘಟನೆಯ ಮುಖಂಡರು ಸಲಹೆಗಳನ್ನು ನೀಡಿದರು.
ವೇಧಿಕೆಯ ಮೇಲೆ,ಮಸ್ಕಿ,ಸಿ,ಪಿ,ಐ,ಗ್ಯಾರೆಂಟಿ ಸಮಿತಿಯ ಅಧ್ಯಕ್ಷರು ತಾಲೂಕಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ವಿವಿದ ಇಲಾಖೆಗಳ ಅಧಿಕಾರಿಗಳು,ಗ್ರಾಮ,ಪಟ್ಟಣ,ಪುರಸಭೆಯ,ಸದಸ್ಯರು,ಅಧ್ಯಕ್ಷರು,ಸಂಘಟನೆಗಳ ಪದಾಧಿಕಾರಿಗಳು ಇದ್ದರು.
ವರದಿ,,ಹುಚ್ಚೇಶ ನಾಗಲೀಕರ್

Leave a Reply

Your email address will not be published. Required fields are marked *