ಅರಕೇರಾ : ರಾಜ್ಯ ಸರ್ಕಾರ ಈಡಿಗ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸಲು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರಣಾವನಂದ ಸ್ವಾಮೀಜಿ ಅವರು ಹೇಳಿದರು.
ಅವರು ಅರಕೇರಾ ಪಟ್ಟಣದ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ಆರ್ಯ ಈಡಿಗ ಸಮಾಜ ಹಮ್ಮಿಕೊಂಡಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿ, ಈಗಾಗಲೇ ರಾಜ್ಯ ಸರಕಾರಕ್ಕೆ ಸಮಾಜದ 18 ಬೇಡಿಕೆಗಳನ್ನು ಈಡೇರಿಸುವಂತೆ ಚಿತ್ತಾಪುರ ದಿಂದ ಬೆಂಗಳೂರಿನವರಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಜ್ಯ ಸರಕಾರ ಬೇಡಿಕೆಗಳನ್ನು ಈಡೇರಿಸುವರೆಗೂ ಪಾದಯಾತ್ರೆ ಮುಂದುವರಿಯುತ್ತದೆ ಎಂದು ಹೇಳಿದರು.
ಈ ಸಭೆಯಲ್ಲಿ ಬೆಜೆಪಿ ಮುಖಂಡರಾದ ಅನಂತರಾಜ್ ನಾಯಕ ಮಾತನಾಡಿ, ಈಡಿಗ ಸಮಾಜದ ಬೇಡಿಕೆಗಳು ನ್ಯಾಯಯುತವಾಗಿದ್ದು ಸರಕಾರ ಕೂಡಲೇ ಸ್ಪಂದನೆ ಮಾಡಬೇಕು. ಸಣ್ಣ ಸಮುದಾಯಗಳು ಹೋರಾಟದ ಮೂಲಕ ತಮ್ಮ ಹಕ್ಕಗಳು ಪಡೆಯಲು ಸಾಧ್ಯ ಎಂದು ಹೇಳಿದರು.
ಆರ್.ಡಿ.ಸಿ.ಸಿ. ಬ್ಯಾಂಕ್ ನಿದೇರ್ಶಕರು ಹಾಗೂ ಕಾಂಗ್ರೆಸ್ ಮುಖಂಡ ಶ್ರೀ ರಾಜಶೇಖರ ನಾಯಕ ಮಾತನಾಡಿ, ಪೂಜ್ಯರು ಸಮಾಜದ ಬೇಡಿಕೆಗಳನ್ನು ಈಡೇರಿಸುವಂತೆ ಮಾಡುತ್ತಿರುವ ಪಾದಯಾತ್ರೆಯು ಯಶಸ್ವಿಯಾಗಲಿ, ನಮ್ಮ ಸರಕಾರ ನಿಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತದೆ. ಈಡಿಗ ಸಮಾಜವು ಎಲ್ಲ ಸಮುದಾಯಗಳೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದು. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿದರು.
ಶಾಸಕಿ ಕರೆಮ್ಮ ಜಿ.ನಾಯಕ ಅವರ ಪುತ್ರಿ ಕುಮಾರಿ ಗೌರಿ ಸಹ ಪಾದಯಾತ್ರೆಯಲ್ಲಿ ಭಾಗವಹಿಸಿ ನಿಮ್ಮ ಸಮುದಾಯದ ಜೊತೆ ನಾವು ಇದ್ದೇವೆ ಸರಕಾರ ನಿಮ್ಮ ಬೇಡಿಕೆಗಳಿಗೆ ಕೂಡಲೇ ಸ್ಪಂದನೆ ಮಾಡಬೇಕು ಎಂದು ಪಾದಯಾತ್ರೆ ಉದ್ದಕ್ಕೂ ಹೆಜ್ಜೆ ಹಾಕಿದರು.
ಬಸವರಾಜ ಪೂಜಾರಿ ಮಾತನಾಡಿ ನಿಮ್ಮ ಸಮಾಜದ ಬೇಡಿಕೆಗಳಿಗೆ ನಮ್ಮ ಬೆಂಬಲ ಸಹ ಇರುತ್ತದೆ ಎಂದು ಹೇಳಿದರು.
ನಾರಾಯಣಗುರು ಪ್ರತಿಮೆ ಹೊತ್ತ ಸಾರೋಟದೊಂದಿಗೆ ಪ್ರಣವಾನಂದ ಸ್ವಾಮೀಜಿ ಹಾಗೂ ಈಡಿಗ ಸಮಾಜದ ಬಂಧುಗಳೊಂದಿಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷದ ಮುಖಂಡರು ಪಾದಯಾತ್ರೆ ಉದ್ದಕ್ಕೂ ಹೆಜ್ಜೆಹಾಕಿ ಬೆಂಬಲ ನೀಡಿದರು.
ಈ ಸಂದರ್ಭದಲ್ಲಿ ಈಡಿಗ ಸಮಾಜದ ಪೂಜ್ಯರಾದ ಮುನೇಶಪ್ಪ ತಾತಾ ನಾಗೋಲಿ, ರವಿ ಚನ್ನಬಸವ ತಾತಾ ನಾಗೋಲಿ, ಬಿಜೆಪಿ ಹಿರಿಯ ಮುಖಂಡ ಕೆ.ಅನಂತರಾಜ್ ನಾಯಕ, ಆರ.ಡಿ.ಸಿ.ಸಿ ಬ್ಯಾಂಕ್ ನಿದೇರ್ಶಕ ಕಾಂಗ್ರೆಸ್ ಮುಖಂಡ ಎ.ರಾಜಶೇಖರ ನಾಯಕ, ಶಾಸಕರ ಸುಪುತ್ರಿ ಗೌರಿ ಜಿ. ನಾಯಕ, ಕಾಂಗ್ರೆಸ್ ಮುಖಂಡ ಬಸವರಾಜ ಪೂಜಾರಿ, ವೆಂಕಟೇಶ ನಾಯಕ ದೊರೆ, ಸಚಿನ್ ನಾಯಕ್ ಪೋಲೀಸ್ ಪಾಟೀಲ್, ಜಿಲ್ಲಾಧ್ಯಕ್ಷ ನರಸಣ್ಣಗೌಡ ರಾಯಚೂರು, ರಾಚಣ್ಣ ಅಬಕಾರಿ ಗಣೇಕಲ್, ಶಾಂತಪ್ಪ ಸಾಹುಕಾರ, ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಶರಣಗೌಡ ಸುಂಕೇಶ್ವರಹಾಳ, ರಂಗನಾಥ ಅಬಕಾರಿ, ಮಹಾತೇಶ ಪೂಜಾರಿ, ನಾಗಾರಜ ಕರ್ನಾಳ, ಡಾ.ಬಸನಗೌಡ ನಾಡಗೌಡ, ವಿರುಪ್ಪಣ್ಣ ದೊರೆ ಶಿಕ್ಷಕರು, ಜಿ.ಹನುಂತ್ರಾಯ ಕೊತ್ತದೊಡ್ಡಿ, ಅಶೋಕ ಚಾಗಭಾವಿ, ರಾಮನಗೌಡ ಸಿರಿವಾರ, ರಾಮನಂದ ಪಾಟೀಲ್, ಗದೆಪ್ಪ ಗುತ್ತೇದಾರ, ಮಹಾದೇವಪ್ಪ ನಾಗೋಲಿ, ಅಮರೇಶ ಇಟಗಿ, ಹನುಮಯ್ಯ ಕೊತ್ತದೊಡ್ಡಿ, ನಾಗರಾಜ ಜಾಡಲದಿನ್ನಿ, ಬಸವರಾಜ ಜಾಗಟಗಲ್, ಹುಸೇನಯ್ಯ ಜುಟ್ಟಮರಡಿ, ರಾಮು ಗುತ್ತೇದಾರ, ನರಸಪ್ಪ ಗುತ್ತೇದಾರ, ನಾಗೇಂದ್ರ ಗುತ್ತೇದಾರ, ರೆಡ್ಡಪ್ಪ ಗುತ್ತೇದಾರ, ವೆಂಕಟೇಶ ನಾಗೋಲಿ, ಚನ್ನಬಸವ ನಾಗೋಲಿ, ರಂಗಪ್ಪ ಭೂಮನಗುಂಡ ಸೇರಿದಂತೆ ವಿವಿಧ ಗ್ರಾಮಗಳ ಸಮಾಜದ ಮುಖಂಡರು ಹಾಗೂ ಈಡಿಗ ಸಮಾಜದ ಭಾಂಧವರು ಉಪಸ್ಥಿತರಿದ್ದರು.

