ಸಿಂಧನೂರು — ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯ ರಹೇ ಮತ್ ಫೌಂಡೇಶನ್ ನ ಪದಾಧಿಕಾರಿಗಳು ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ಭೇಟಿ ನೀಡಿ ಹಾಸಿಗೆ ಹೊದಿಕೆಗಳನ್ನು ವಿತರಿಸಿ ಹಣ್ಣು ಹಂಪಲುಗಳನ್ನು ವಿತರಿಸಿ ಆಶ್ರಯದಾತರುಗಳನ್ನು ಪರಿಚಯಿಸಿಕೊಂಡು ಆತ್ಮಸ್ಥೈರ್ಯ ತುಂಬಿದರು. ಈ ಸಮಯದಲ್ಲಿ ರಹೇಮತ್ ಫೌಂಡೇಶನ್ ನ ಸದಸ್ಯರಾದ ರಾಜ್ ಮಹಮ್ಮದ್ ಮಾತನಾಡಿ ನಮ್ಮ ನಾಡಿನ ಕರುಣೆಯ ಕುಟುಂಬವಾಗಿ ಯುವಕರಿಗೆ ಸ್ಪೂರ್ತಿಯಾಗಿ ನಿಸ್ವಾರ್ಥದ ಸೇವೆಯನ್ನು ಅನಾಥರಿಗೆ ಸಮಾಜಕ್ಕೆ ಒದಗಿಸುತ್ತಿರುವ ಈ ಕಾರುಣ್ಯ ಆಶ್ರಮ ಅಲ್ಲಾಹನ ಪ್ರೀತಿಯ ಸ್ವರ್ಗದ ತಾಣವಾಗಿದೆ. ನಾವು ಸುಮಾರು ವರ್ಷಗಳಿಂದ ಕಾರುಣ್ಯ ಆಶ್ರಮದ ಮುಖ್ಯಸ್ಥರಾದ ಚನ್ನಬಸವಯ್ಯ ಸ್ವಾಮಿಯವರ ಸೇವೆಯನ್ನು ಕೇಳಿದ್ದೆವು ಅಷ್ಟೇ ಆದರೆ ಇಂದಿನ ವಾಸ್ತವ ಸೇವೆಯ ಸ್ಥಿತಿಯನ್ನು ಹರಿದುಕೊಂಡ ನಾವು ನಿರಂತರ ಕಾರುಣ್ಯ ಕುಟುಂಬದ ಸದಸ್ಯರಾಗಿ ಸದಾವಕಾಲವಿರುತ್ತೇವೆ. ಕಾರುಣ್ಯ ಆಶ್ರಮ ಅದೆಷ್ಟೋ ಸಮಾಜ ಸೇವಕರುಗಳಿಗೆ ಸ್ಪೂರ್ತಿಯಾಗಿ ನಮ್ಮ ಕಲ್ಯಾಣ ಕರ್ನಾಟಕದ ಕೀರ್ತಿಯನ್ನು ನಾಡಿಗಲ್ಲದೆ ದೇಶಕ್ಕೆ ತೋರಿಸಿಕೊಟ್ಟಿದೆ. ಮತ್ತು ಕಾರುಣ್ಯಾಶ್ರಮವು ಜನರಲ್ಲಿ ಹಿರಿಯರಿಗೆ ಗೌರವ ಕೊಡುವುದು ಹಿರಿಯರನ್ನು ಪ್ರೀತಿಸಿ ಪೂಜಿಸಿ ವೃದ್ಧಾಶ್ರಮಕ್ಕೆ ತಳ್ಳದಂತೆ ನೋಡಿಕೊಳ್ಳುತ್ತಿರುವ ಹಲವಾರು ಅಭಿಯಾನಗಳು ಹಟ್ಟಿ ಚಿನ್ನದ ಗಣಿಯ ಪ್ರತಿಯೊಬ್ಬರಿಗೂ ಕೂಡ ತುಂಬಾ ಇಷ್ಟವಾಗಿವೆ. ಇವತ್ತಿನ ಕಾಲದಲ್ಲಿ ಸ್ವಂತ ತಂದೆ ತಾಯಿಯನ್ನು ನೋಡಿಕೊಳ್ಳಲಾರದಂತಹ ಉದಾಹರಣೆಗಳನ್ನು ನಾವು ಕಣ್ಣೆದುರಿಗೆ ಕಾಣುತ್ತಿರುವಂತಹ ಅದೆಷ್ಟೋ ಸನ್ನಿವೇಶಗಳನ್ನು ಕೂಡ ನೋಡುತ್ತಿದ್ದೇವೆ. ಆದರೆ ಸಮಾಜದಿಂದ ತಿರಸ್ಕೃತಗೊಂಡವರನ್ನು ನೆಲೆ ನೆಲೆ ಇಲ್ಲದವರನ್ನು ತಮಗರಿವಿಲ್ಲದೆ ಬದುಕುತ್ತಿರುವ ವಯಸ್ಕರ ಬುದ್ಧಿಮಾಂದ್ಯವನ್ನು ಸ್ವಂತ ಕುಟುಂಬದ ಸದಸ್ಯರಂತೆ ಕಂಡು ಆಶ್ರಮ ಎನ್ನುವ ಪದವನ್ನು ಅಳಿಸಿ ಹಾಕಿ ಕುಟುಂಬವಾಗಿರುವ ಈ ಕಾರುಣ್ಯ ಸಂಸ್ಥೆಯೂ ಪ್ರತಿಯೊಬ್ಬರ ಮನೆ ಮನಸ್ಸಿನಲ್ಲಿರುವುದು ಹೆಮ್ಮೆಯ ವಿಷಯವಾಗಿದೆ. ಮತ್ತು ವಿಶೇಷವಾಗಿ ನಮ್ಮ ಲಿಂಗಸೂಗೂರಿನ ಪ್ರತಿಯೊಬ್ಬರ ಪ್ರೀತಿಗೆ ಪಾತ್ರವಾಗಿರುವ ಕರಡಕಲ್ ನ ಡಾ. ಮಲ್ಲಿಕಾರ್ಜುನ ಸ್ವಾಮಿಯವರು ಕಾರುಣ್ಯ ಕುಟುಂಬದ ಒಡೆಯರಾಗಿ ಕರುಣೆಯ ಮೂರ್ತಿಗಳಾಗಿ ನಮ್ಮ ಲಿಂಗಸೂಗೂರು ತಾಲೂಕಿಗೆ ಗೌರವ ತಂದು ಕೊಟ್ಟಿರುವುದು ನಮ್ಮೆಲ್ಲರಿಗೆ ಸಂತೋಷವಾಗಿದೆ ಕಾರುಣ್ಯಾಶ್ರಮವು ಕಲ್ಯಾಣ ಕರ್ನಾಟಕದ ಸ್ವರ್ಗದ ತಾಣವಾಗಿದೆ..ಇನ್ನು ಮುಂದೆ ಯಾವುದೇ ಕಾರುಣ್ಯ ಆಶ್ರಮದ ಸೇವೆಯಲ್ಲಿ ನಮ್ಮ ಫೌಂಡೇಶನ್ ಭಾಗವಹಿಸುತ್ತದೆ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಅಪ್ಸರ್ ಪಾಷಾ ಅಧ್ಯಕ್ಷರು ರಹಮೆತ್ ಫೌಂಡೇಶನ್ ಹಟ್ಟಿ ಚಿನ್ನದ ಗಣಿ. ರಸೂಲ್ ಕಾರ್ಯದರ್ಶಿಗಳು.ಶಬ್ಬೀರ್ ಸದಸ್ಯರು. ಹಾಗೂ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ. ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದ ಗುಡ್ಡ.ಸಿದ್ದಯ್ಯ ಸ್ವಾಮಿ. ಮರಿಯಪ್ಪ. ಜ್ಯೋತಿ. ಮತ್ತು ಹಟ್ಟಿ ಚಿನ್ನದ ಗಣಿಯ ರಹಮತ್ ಫೌಂಡೇಶನ್ ಹಲವಾರು ಪದಾಧಿಕಾರಿಗಳು ಉಪಸ್ಥಿತರಿದ್ದರು


