ಹಾಲಾಪೂರ ಸಮೀಪದ ಉಟಕನೂರಿನ ಶ್ರೀ ಬಸವಲಿಂಗೇಶ್ವರ ದೇಶಿ ಕೇಂದ್ರ ಶಿವಯೋಗಿಗಳ
161ನೇ ಹಾಗೂ ಶ್ರೀ ಮರಿಬಸವಲಿಂಗೇಶ್ವರ ಮಹಾಸ್ವಾಮೀಜಿ 35 ನೇ ಪುಣ್ಯ ಸ್ಮರಣೆ ಅಂಗವಾಗಿ ನಡೆಯುವ ಜಾತ್ರೆಗೆ ಭಕ್ತರ ಸಾಗರವೇ ಹರಿದು ಉಟಕನೂರಿಗೆ ಆಗಮಿಸುವರು, ಅದಕ್ಕಾಗಿ ಮಹಾದಾಸೋಹ ಮೊದಲಿನಿಂದಲೂ ಪ್ರಸಿದ್ದಿ ಪಡೆದಿದೆ. ಈ ವರ್ಷ ಬೆಂಚಮರಡಿ ಸರ್ವಧರ್ಮ ಭಕ್ತಾದಿಗಳಿಂದ ಹತ್ತು ಸಾವಿರ ಶೇಂಗಾ ಹೋಳಿಗೆ ಮಾಡುವ ಮೂಲಕ ಭಕ್ತಿ ಮೆರೆದು, ಬೆಂಚಮರಡಿ ಗ್ರಾಮವನ್ನು ಪುನೀತಗೊಳಿಸಿದ್ದಾರೆ ಹೀಗಾಗಿ ಈ ವರ್ಷ ಶ್ರೀ ಮಠದಲ್ಲಿ ನಡೆಯುವ ಜಾತ್ರೆಗೆ ಮನಪೂರ್ವಕವಾಗಿ ಅನೇಕ ಗ್ರಾಮಗಳಿಂದ ಭಕ್ತಾದಿಗಳು ತರ ತರಹದ ಪ್ರಸಾದ್ ವ್ಯವಸ್ಥೆ ಮಾಡಿಕೊಂಡು ಶ್ರೀ ಅಡಿವಿಸಿದ್ದೇಶ್ವರ ಸುಕ್ಷೇತ್ರದಲ್ಲಿ ನಡೆಯುವ ಜಾತ್ರೆಗೆ ಬರುವ ಭಕ್ತರಿಗೆ ಸಿಹಿ ಪದಾರ್ಥ ಅನ್ನು ಸವಿಯುವ ಗಳಿಗೆಗೆ ಸಾಕ್ಷಿಯಾಗಿದ್ದು ವಿಶೇಷವಾಗಿದೆ ಎಂದೂ ಬೆಂಚಮರಡಿ ಗ್ರಾಮದ ಭಕ್ತಾರಾದ ಶ್ರೀ ಮಲ್ಲಯ್ಯ ಸ್ವಾಮಿ ಅವರು ಪಾಟೀಲ್ ನ್ಯೂಸ್ ಅಲರ್ಟ್ ಸುದ್ದಿಯೊಂದಿಗೆ ಮಾತನಾಡಿದರು. ನಂತರ ಶ್ರೀ ಮಠದ ಪೂಜ್ಯರಾದ ಶ್ರೀ ಮರಿಬಸವರಾಜ ದೇಶಿಕೇಂದ್ರ ಶಿವಯೋಗಿಗಳು ಮಾತನಾಡಿ ಶ್ರೀಮಠದಲ್ಲಿ ನಡೆಯುವ ಜಾತ್ರೆಗೆ ಬೆಂಚಮರಡಿ ಹಾಗೂ ಅನೇಕ ಗ್ರಾಮಗಳಿಂದ ಸರ್ವಧರ್ಮ ಭಕ್ತಾದಿಗಳು ಶೇಂಗಾ ಹೋಳಿಗೆ ಮತ್ತಿತರ ಸಿಹಿ ಪದಾರ್ಥಗಳನ್ನು ಸೊ ಇಚ್ಛೆಯಿಂದ ಮಹಾಪ್ರಸಾದ ವ್ಯವಸ್ಥೆ ಮಾಡಿದ್ದು ಸಂತೋಷದ ವಿಚಾರ, ಎಲ್ಲಾ ಭಕ್ತಾದಿಗಳಿಗೆ ಮತ್ತಷ್ಟು ಭಗವಂತ ಉತ್ತಮ ಆರೋಗ್ಯ, ಮಳೆ ಬೆಳೆ ಕೊಟ್ಟು ಕಾಪಾಡಲಿ ಎಂದು ಆಶೀರ್ವದಿಸಿದರು.

