ಲಿಂಗಸಗೂರು : ಜ 11 .ಕಳಾಪುರ ಗ್ರಾಮದ ಅಮರೇಶ್ ತಂದೆ ವೀರಭದ್ರಪ್ಪ ಹೊಸಗೌಡ ಇವರ ಮಗಳಾದ ಮೇಘಶ್ರೀ ಎಂದಿನಂತೆ ಬೆಳಗ್ಗೆ ತಾನು ಓದುತ್ತಿರುವ ಜಿಟಿಟಿಸಿ ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಕಾಲೇಜಿನ ಸಮವಸ್ತ್ರವನ್ನು ಧರಿಸಿ ವಿದ್ಯಾರ್ಥಿನಿ ಬಸ್ ನ್ನು ಹತ್ತಿ ತಾನು ಓದುವ ಕಾಲೇಜಿಗೆ ಹೋಗಿದ್ದಾಳೆ ಆದರೆ ಸಂಜೆ ವೇಳೆಗೆ ಮನೆಗೆ ಬಾರದನ್ನು ಕಂಡು ಪೋಷಕರು ಹುಡುಕಾಡಿದರು ಸಿಗದೇ ಇದ್ದುದ್ದರಿಂದ ಲಿಂಗಸಗೂರು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ . ಕಾಣೆಯಾದ ವಿದ್ಯಾರ್ಥಿನಿಯ ಚಹಾರೆ ತೆಳ್ಳನೆಯ ಮೈಕಟ್ಟು
ಗೋದಿ ಮೈಬಣ್ಣ , 5 ಪೀಟ್ ಎತ್ತರ ,
ಹಳದಿ ಕಾಲರ್ ಅರ್ದ ತೋಳಿನ ಶರ್ಟ, ಚಾಕಲೇಟ್ ಕಲರ್ ಪ್ಯಾಂಟ್ ಧರಿಸಿದ್ದಾರೆಂದು
ಪೋಷಕರ ದೂರಿನ ಮೇರೆಗೆ ಪೊಲೀಸ್ ಠಾಣೆ ಗುನ್ನೇ ನಂಬರ್ 07/2026 ಕಾಲಂ ವಿದ್ಯಾರ್ಥಿನಿಯ ಕಾಣೆಯಾದ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ . ಈ ವಿದ್ಯಾರ್ಥಿನಿಯ ಸುಳಿವು ಯಾರಿಗಾದರೂ ಕಂಡು ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ತಿಳಿಸಿದ್ದಾರೆ .

