ನಗರದ ಟೌನ್‌ಹಾಲ್‌ನಲ್ಲಿ ಜ.11ಭಾನುವಾರದಂದು ಮತದಾರರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವಿರೋಧಿ ಹೋರಾಟ ಸಮಿತಿಯಿಂದ ಬೆಳಿಗ್ಗೆ 10.30 ಗಂಟೆಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಹುಸೇನ್‌ಸಾಬ್, ಚಂದ್ರಶೇಖರ ಗೊರೇಬಾಳ, ಎಂ.ಗಂಗಾಧರ, ಬಸವಂತರಾಯಗೌಡ ಕಲ್ಲೂರು, ಬಸವರಾಜ ಬಾದರ್ಲಿ, ಜಿಲಾನಿಪಾಷಾ ಅವರು ತಿಳಿಸಿದ್ದಾರೆ.
ಈ ಕುರಿತು ಶನಿವಾರ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂವಾದದಲ್ಲಿ ಖ್ಯಾತ ಸಾಮಾಜಿಕ ಕಾರ್ಯಕರ್ತರು ಹಾಗೂ ರಾಜಕೀಯ ಚಿಂತಕರಾದ ಶಿವಸುಂದರ್ ಅವರು ಭಾಗವಹಿಸಲಿದ್ದು, ವಿವಿಧ
ಎಡಪಕ್ಷಗಳ, ಪ್ರಗತಿಪರ, ಜನಪರ ಸಂಘಟನೆಗಳ ಮುಖಂಡರು ಉಪಸ್ಥಿತರಿರವರು. ಈ ಸಂವಾದ ಕಾರ್ಯಕ್ರಮಕ್ಕೆ ರೈತರು, ಕಾರ್ಮಿಕರು, ವಿದ್ಯಾರ್ಥಿ, ಯುವಜನರು, ಮಹಿಳೆಯರು, ಆಗಮಿಸುವಂತೆ ಅವರು ಮನವಿ ಮಾಡಿದ್ದಾರೆ.
ಈ ವೇಳೆ: ಹಿರಿಯ ಮುಖಂರಾದ ಡಿ.ಎಚ್.ಕಂಬಳಿ, ಲಿಂಗಪ್ಪ, ಶಂಕರ್ ಗುರಿಕಾರ, ಮೌನೇಶ ಜಾಲವಾಡಗಿ, ದವಲಸಾಬ್ ದೊಡ್ಮನಿ, ಸೇರಿದಂತೆ ಅನೇಕರಿದ್ದರು.

