ಮಾನ್ವಿ: ತಾಲೂಕಿನ ಪೋತ್ನಾಳ್ ಗ್ರಾಮದ ವಾಲ್ಮೀಕಿ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ನ ಮಾನ್ವಿ ಯೋಜನಾ ಕಚೇರಿ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ದಡಿಯಲ್ಲಿ ನಡೆದ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ತಾ. ಯೋಜನಾಧಿಕಾರಿಗಳಾದ ಸುನಿತಾ ಪ್ರಭು ಚಾಲನೆ ನೀಡಿ ಮಾತನಾಡಿ ಸಂಘದ ಮಹಿಳ ಸದಸ್ಯರು ಉಳಿತಾಯದ ಜೋತೆಗೆ ಸ್ವ ಉದ್ಯೋಗವನ್ನು ಕೈಗೊಳುವ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನವನ್ನು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ನೀಡಲಾಗುವುದು ಗ್ರಾಮದ ಮಹಿಳೆಯರಿಗಾಗಿ ಹೊಲಿಗೆ ತರಬೇತಿಯನ್ನು ನೀಡಲಾಗುತ್ತಿದು ತರಬೇತಿಯನ್ನು ಪಡೆದ ಸದಸ್ಯರು ತಮ್ಮ ಮನೆಗಳಲ್ಲಿ ಹೋಲಿಗೆಯ ಮೂಲಕ ಉತ್ತಮ ಆರ್ಥಿಕತೆಯನ್ನು ಹೊಂದುವ ಮೂಲಕ ನಿಮ್ಮ ಕುಟುಂಬವನ್ನು ಉತ್ತಮ ರೀತಿಯಲ್ಲಿ ನಡೆಸುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರಾದ ಬೀರಪ್ಪ, ವಾಲ್ಮೀಕಿ ಸಮುದಾಯ ಭವನದ ಕಮಿಟಿ ಸದಸ್ಯರಾದ ಹನುಮೇಶ್, ವಲಯದ ಮೇಲ್ವಿಚಾರಕರಾದ ರಾಘವೇಂದ್ರ , ಜ್ಞಾನ ವಿಕಾಸ ಸಮನ್ವಯಾಧಿಕಾರಿ ಜ್ಯೋತಿ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಗಳು ಒಕ್ಕೂಟದ ಅಧ್ಯಕ್ಷರು ತರಬೇತಿಯ ಶಿಕ್ಷಕರು ಕೇಂದ್ರದ ಸದಸ್ಯರು ಭಾಗವಹಿಸಿದರು.

