ಮಾನ್ವಿ:ಪಟ್ಟಣದ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಕರ್ನಾಟಕ ರಾಜ್ಯ ಹಮಾಲರ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಗಳ ಕಾರ್ಮಿಕರ ಒಕ್ಕೂಟ ಎ.ಐ.ಟಿ.ಯು.ಸಿ. ಸಂಯೋಜಿತ ವತಿಯಿಂದ ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ರವರಿಗೆ ರಾಜ್ಯ ಪ್ರ.ಕಾರ್ಯದರ್ಶಿ ಕಾ. ಬಾಷುಮಿಯಾ ಮನವಿ ಸಲ್ಲಿಸಿ ಮಾತನಾಡಿ ಸರ್ಕಾರದ ವ್ಯಾಪ್ತಿಯ ವೇರ್ ಹೌಸ್ ಗೋದಾಮು,ಆಹಾರ ನಿಗಮ,ಗ್ರಾಮಾಂತರ ಪ್ರದೇಶದ ಸಹಕಾರ ಸಂಘಗಳ ಗೋದಾಮು, ನಗರ ಪ್ರದೇಶದಲ್ಲಿನ ಕೃಷಿ ಪರಿಕರಗಳ ಮಾರಾಟ ಅಂಗಡಿಗಳಲ್ಲಿ,ಅಕ್ಕಿ ಗಿರಣಿಗಳಲ್ಲಿ, ಅಗತ್ಯ ವಸ್ತುಗಳ ಸಾಗಣಿಕೆ ಕೇಲಸಗಳನ್ನು ನಿರ್ವಹಿಸುತ್ತಿರುವ ಎಲ್ಲಾ ಅಸಂಘಟಿತ ಕಾರ್ಮಿಕರನ್ನು ಅಂಬೇಡ್ಕರ ಸಹಾಯಹಸ್ತ ಯೋಜನೆಯಡಿಯಲ್ಲಿ ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ತಂದು ಇಲಾಖೆಯಿಂದ ನೊಂದಾಯಿಸಿ ಲೈಸನ್ಸ್ ನೀಡಿ ಗುರುತಿನ ಚೀಟಿ ನೀಡಿ ಅಗತ್ಯ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಬೇಕು, ಹಮಾಲರನ್ನು ವಿಮಾಯೋಜನೆಗೆ ಒಳಪಡಿಸಿ ಸ್ವಾಭಾವಿಕ ಮರಣಕ್ಕೆ 5ಲಕ್ಷ , ಅಪಘಾತದಿಂದ ಸಂಬವಿಸಿದ ಮರಣಕ್ಕೆ 10ಲಕ್ಷ ಪರಿಹಾರ ವನ್ನು ಕುಟುಂಬದವರಿಗೆ ನೀಡಬೇಕು,ನಿವೇಶನ ಹಾಗೂ ವಸತಿ ಸೌಕರ್ಯ ಕಲ್ಪಿಸಬೇಕು. ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ಹಮಾಲಿ ಕಾರ್ಮಿಕರ ಮಕ್ಕಳಿಗೆ ಶಿಷ್ಯವೇತನ, 50 ಸಾವಿರ ವಿವಾಹ ಸಹಾಯಧನ, ಹೆರಿಗೆ ಭತ್ಯ,ಉಚಿತ ಚಿಕಿತ್ಸ ಸೌಲಭ್ಯ, ಎ.ಪಿ.ಎಂ.ಸಿ.ಗಳಲ್ಲಿ ಕಸಗೂಡಿಸುವ ಮಹಿಳೆಯರಿಗೆ ಕನಿಷ್ಟ ವೇತನ ಜಾರಿ ಮಾಡಬೇಕು, 60 ವರ್ಷ ಮೀರಿದ ಹಮಾಲರಿಗೆ ನಿವೃತ್ತಿ ವೇತನ ಜಾರಿ ಮಾಡಬೇಕು, ಹಮಾಲರಿಗೆ ತೂಕದ ಮಿತಿಯನ್ನು ಗರಿಷ್ಠ 55 ಕೆಜಿ ನಿಗದಿ ಪಡಿಸಬೇಕು ಎಂದು ಒತ್ತಾಯಿಸಿದರು.
ಶಾಸಕ ಹಂಪಯ್ಯನಾಯಕ ಇದ್ದರು.
ಶ್ರೀ ಉದ್ಬವ ಆಂಜನೇಯ ಹಮಾಲರ ಸಂಘ ಎ.ಐ.ಟಿ.ಯು.ಸಿ, ಸಂಯೋಜಿತ ಮಾನ್ವಿ ಅಧ್ಯಕ್ಷರಾದ ಹನುಮಂತ,ಕಾರ್ಯದರ್ಶಿ ಸಿದ್ದರಾಮಯ್ಯಸ್ವಾಮಿ, ತಾ.ಅಂಗನವಾಡಿ ಕಾರ್ಯಕರ್ತೆಯರ ಸಂಘದ ತಾ.ಅಧ್ಯಕ್ಷೆ.ಚನ್ನಮ್ಮ, ಸೇರಿದಂತೆ ಹಮಾಲಿ ಕಾರ್ಮಿಕರು ಇದ್ದರು.

