ಮಾನವಿ: ಪಟ್ಟಣದ ಸರ್ವೋದಯ ಡಿ.ಫಾರ್ಮಸಿ, ನರ್ಸಿಂಗ್, ಪ್ಯಾರಾ ಮೆಡಿಕಲ್ ಹಾಗೂ ಪಿಯುಸಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳ ದೀಪ ಬೆಳಗಿಸುವ ಮತ್ತು ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸರ್ಕಾರದ ಸಚಿವರಾದ ಎನ್.ಎಸ್. ಬೋಸರಾಜ್ ಅವರು ದೀಪ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಮಾ ಫ್ರೆಂಡ್ಸ್ ಮನವಿಯ ಮಕ್ಕಳು , ಸರ್ವೋದಯ ಶಿಕ್ಷಣ ಸಂಸ್ಥೆ ಮಾನವಿ ತಾಲೂಕಿನ ಶೈಕ್ಷಣಿಕ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ. ಮನೋಜ್ ಕುಮಾರ್, ಅನಿಲ್ ಕುಮಾರ್ ಹಾಗೂ ಆಂಜನೇಯ ಅವರು ಮೂರು ಗೆಳೆಯರು ಸೇರಿ ಇಂತಹ ದೊಡ್ಡ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಶ್ಲಾಘಿಸಿದರು.
ನಂತರ ಶಾಸಕ ಹಂಪಯ್ಯ ನಾಯಕ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನವೇ ಭವಿಷ್ಯದ ಬದುಕಿನ ಅಡಿಪಾಯ. ಶಿಸ್ತು, ಪರಿಶ್ರಮ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ಅಳವಡಿಸಿಕೊಂಡರೆ ಯಶಸ್ಸು ನಿಮ್ಮದಾಗುತ್ತದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸರ್ವೋದಯ ಶಿಕ್ಷಣ ಸಂಸ್ಥೆ ಶ್ಲಾಘನೀಯ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವೃತ್ತಿಪರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದ್ದು, ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳಿವೆ. ವಿದ್ಯಾರ್ಥಿಗಳು ಸಮಯದ ಸದುಪಯೋಗ ಮಾಡಿಕೊಂಡು ಜ್ಞಾನಾರ್ಜನೆಗೆ ಒತ್ತು ನೀಡಬೇಕು ಎಂದು ಅವರು ಸಲಹೆ ನೀಡಿದರು.
ಸರ್ವೋದಯ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಬೆಳೆಸುತ್ತಿರುವ ಮನೋಜ್ ಕುಮಾರ್, ಅನಿಲ್ ಕುಮಾರ್ ಹಾಗೂ ಆಂಜನೇಯ ಅವರ ಸೇವೆಯನ್ನು ಪ್ರಶಂಸಿಸಿದ ಶಾಸಕರು, ಇಂತಹ ಶಿಕ್ಷಣ ಸಂಸ್ಥೆಗಳು ಮಾನವಿ ತಾಲೂಕಿನ ಶೈಕ್ಷಣಿಕ ಬೆಳವಣಿಗೆಗೆ ಬಲ ನೀಡುತ್ತಿವೆ ಎಂದು ಹೇಳಿದರು.
ನಂತರ ಶಾಂತನಗೌಡ ಪಾಟೀಲ್ ಮಾತನಾಡಿ ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಯಾಗಿ ಭಾಗವಹಿಸಿದ ಶಾಂತಾನಗೌಡ ಪಾಟೀಲ್ ಅವರು ವಿದ್ಯಾರ್ಥಿಗಳಿಗೆ ಜೀವನಪಾಠ ನೀಡುವ ಮಾತುಗಳ ಮೂಲಕ ಮಾರ್ಗದರ್ಶನ ನೀಡಿದರು.
ಭಾಷಣದಲ್ಲಿ ಅವರು, “ಹರ ಮುನಿದರೆ ಗುರು ಕಾಯುವರು; ಗುರುಗಳ ಆಶೀರ್ವಾದ ಇದ್ದರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು” ಎಂದು ಹೇಳಿ, ವಿದ್ಯಾರ್ಥಿ ಜೀವನದಲ್ಲಿ ಗುರು-ಶಿಷ್ಯ ಪರಂಪರೆಯ ಮಹತ್ವವನ್ನು ವಿವರಿಸಿದರು. ಶಿಸ್ತು, ಶ್ರದ್ಧೆ ಹಾಗೂ ಪರಿಶ್ರಮದಿಂದ ಮಾತ್ರ ಉನ್ನತ ಗುರಿಗಳನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ವೇಳೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಸರ್ಕಾರದ ಸಚಿವರಾದ ಎನ್.ಎಸ್. ಬೋಸರಾಜ್ ಅವರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಶಾಂತಾನಗೌಡ ಪಾಟೀಲ್ ಅವರು, ಸಾಮಾನ್ಯ ಜನರ ಹಿತಕ್ಕಾಗಿ ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಸಚಿವರು ನಿರಂತರ ಶ್ರಮಿಸುತ್ತಿದ್ದಾರೆ. ಅವರ ಸಹಕಾರದಿಂದ ಗ್ರಾಮೀಣ ಭಾಗದಲ್ಲೂ ಉತ್ತಮ ಶಿಕ್ಷಣ ಸಂಸ್ಥೆಗಳು ಬೆಳೆಯುತ್ತಿವೆ ಎಂದು ಹೇಳಿದರು.
ಸರ್ವೋದಯ ಶಿಕ್ಷಣ ಸಂಸ್ಥೆ ಮಾನವಿ ತಾಲೂಕಿನ ಶೈಕ್ಷಣಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣದ ಅವಕಾಶ ಒದಗಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.
ನಂತರ ನರ್ಸಿಂಗ್ ವಿದ್ಯಾರ್ಥಿಗಳಿಗೆ ದೀಪ ಬೆಳಗಿಸುವ ಮೂಲಕ ಸೇವಾ ಮನೋಭಾವ ಹಾಗೂ ಮಾನವೀಯ ಮೌಲ್ಯಗಳ ಕುರಿತು ಪ್ರತಿಜ್ಞೆ ಬೋಧಿಸಲಾಯಿತು.
ನಂತರ ಅತಿಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಗಣ್ಯರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರಗಳನ್ನು ನೀಡಿ ಅಭಿನಂದಿಸಿದರು. ಈ ಸನ್ಮಾನವು ವಿದ್ಯಾರ್ಥಿಗಳಿಗೆ ಇನ್ನಷ್ಟು ಸಾಧನೆಗೆ ಪ್ರೇರಣೆಯಾಯಿತು.
ಜ 10 ರಂದು ನಡೆಯಲಿರುವ ಶಾಸಕ ಹಂಪಯ್ಯ ನಾಯಕ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸರ್ವೋದಯ ಶಿಕ್ಷಣ ಸಂಸ್ಥೆಯ ವತಿಯಿಂದ ಮುಂಗಡವಾಗಿ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸರ್ವೋದಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕೇಕ್ ಕಟ್ ಮಾಡುವುದರ ಮೂಲಕ ಶಾಸಕ ಹಂಪಯ್ಯ ನಾಯಕ್ ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವ ಎನ್ ಎಸ್ ಬೋಸರಾಜು ಹಾಗೂ ಎಲ್ಲಾ ಅತಿಥಿಗಳು ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಶಾಸಕರಿಗೆ ಶುಭಾಶಯಗಳನ್ನು ಸಲ್ಲಿಸಿದರು.
ಶಾಸಕ ಹಂಪಯ್ಯ ನಾಯಕ್ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಹಾಗೂ ಸರ್ವೋದಯ ಶಿಕ್ಷಣ ಸಂಸ್ಥೆಗೆ ನೀಡುತ್ತಿರುವ ಸಹಕಾರವನ್ನು ಈ ವೇಳೆ ಸ್ಮರಿಸಲಾಯಿತು. ಕಾರ್ಯಕ್ರಮವು ಆತ್ಮೀಯ ವಾತಾವರಣದಲ್ಲಿ ನಡೆಯಿತು.
ವಿದ್ಯಾರ್ಥಿಗಳು ಶಿಸ್ತಿನಿಂದ ಪ್ರತಿಜ್ಞಾ ವಿಧಿಯಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಂತರ ಕಲ್ಮಠ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಸರ್ವೋದಯ ಎಂದರೆ ಕೇವಲ ಒಂದು ಸಂಸ್ಥೆಯ ಹೆಸರು ಅಲ್ಲ – ಅದು ಎಲ್ಲರ ಉದಯ, ಎಲ್ಲರ ಕಲ್ಯಾಣ, ಮಾನವೀಯತೆ, ಶಿಸ್ತು ಮತ್ತು ಸೇವೆಯ ಮೌಲ್ಯಗಳ ಪ್ರತೀಕ. ಈ ಸಂಸ್ಥೆ ವಿದ್ಯಾಭ್ಯಾಸದ ಜೊತೆಗೆ ಸಮಾಜದ ಬಗ್ಗೆ ಕಾಳಜಿ, ನೈತಿಕತೆ ಮತ್ತು ನಾಯಕತ್ವವನ್ನು ಬೆಳೆಸುವ ಕಾರ್ಯವನ್ನು ವರ್ಷಗಳಿಂದ ಮಾಡುತ್ತಿದೆ, ಶಿಕ್ಷಣದ ಜೊತೆಗೆ ಸಂಸ್ಕಾರ ಅತ್ಯಂತ ಅಗತ್ಯ ಎಂದು ಒತ್ತಿ ಹೇಳಿದರು.
ವಿದ್ಯಾರ್ಥಿಗಳಿಗೆ ಕೇವಲ ಪಠ್ಯಜ್ಞಾನವಷ್ಟೇ ಸಾಲದು; ಜೀವನ ಮೌಲ್ಯಗಳು, ಶಿಸ್ತು, ಸಂಯಮ, ಸತ್ಯನಿಷ್ಠೆ ಹಾಗೂ ಮಾನವೀಯತೆಯನ್ನು ಅಳವಡಿಸಿಕೊಂಡಾಗ ಮಾತ್ರ ಅವರು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವೆಂದು ಹೇಳಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರಯುತ ಚಿಂತನೆ ಬೆಳೆಸುವುದು ಅತ್ಯಂತ ಮಹತ್ವದ ಸಂಗತಿ. ಸಂಸ್ಕಾರ ಹೊಂದಿದ ಶಿಕ್ಷಣವೇ ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುತ್ತದೆ; ಅಂತಹ ವಿದ್ಯಾರ್ಥಿಗಳು ತಮ್ಮ ಕುಟುಂಬಕ್ಕೂ, ಸಮಾಜಕ್ಕೂ ಹಾಗೂ ರಾಷ್ಟ್ರಕ್ಕೂ ಹೆಮ್ಮೆ ತರುವ ನಾಗರಿಕರಾಗುತ್ತಾರೆ ಎಂದು ಮಹಾಸ್ವಾಮಿಗಳು ತಿಳಿಸಿದರು.
ಚೀಕಲಪರ್ವಿ ಶ್ರೀ ರುದ್ರಮುನೀಶ್ವರ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವಚನ ನೀಡಿ ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ಪಠ್ಯಪುಸ್ತಕಗಳ ಜ್ಞಾನಕ್ಕಿಂತಲೂ ಹೆಚ್ಚಿನದನ್ನು ಕಲಿಯುತ್ತೀರಿ –
ಸಹಕಾರ, ಸಹಿಷ್ಣುತೆ, ಶಿಸ್ತು, ಸಮಯಪಾಲನೆ ಮತ್ತು ಸಮಾಜದ ಜವಾಬ್ದಾರಿಯನ್ನು ಬೆಳೆಸಿಕೊಳ್ಳುತ್ತೀರಿ ಎಂದು ಹೇಳಿದರು ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಶ್ರದ್ಧೆ, ಶಿಸ್ತು ಮತ್ತು ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಗುರುಗಳ ಮಾರ್ಗದರ್ಶನವನ್ನು ಗೌರವಿಸಿ, ಕಠಿಣ ಪರಿಶ್ರಮದ ಮೂಲಕ ಗುರಿ ಸಾಧಿಸಿದಾಗ ಮಾತ್ರ ಜೀವನದಲ್ಲಿ ಸಾರ್ಥಕತೆ ದೊರೆಯುತ್ತದೆ ಎಂದು ಅವರು ತಿಳಿಸಿದರು
ಈ ಕಾರ್ಯಕ್ರಮದಲ್ಲಿ
ಶ್ರೀ. ಎನ್. ಎಸ್. ಬೋಸರಾಜು ಸಚಿವರು , ಶ್ರೀ. ಹಂಪಯ್ಯ ನಾಯಕ
ಸಾಹುಕಾರ (ಶಾಸಕರು ಮಾನವಿ)
ಪೂಜ್ಯ ಶ್ರೀ ವಿರೂಪಾಕ್ಷ ಪಂಡಿತಾರಾದ್ಯ ಸ್ವಾಮಿಜಿ
, ಪೂಜ್ಯ ಶ್ರೀ ಸದಾನಂದ ಸ್ವಾಮಿಜಿ,
ಕ.ಸಾ.ಪ. ಜಿಲ್ಲಾ ಗೌ,ಕಾರ್ಯದರ್ಶಿ ತಾಯಪ್ಪ.ಬಿ.ಹೊಸೂರ, ಲಿಂಗಸೂಗೂರು ಸ್ವಾಮಿ ವಿವೇಕನಂದ ಆಯುರ್ವೇದ ವೈದ್ಯಕೀಯ ಕಾಲೇಜಿನ ಅಧ್ಯಕ್ಷರಾದ ಶಾಂತನಗೌಡ ಪಾಟೀಲ್ , ಸ್ವಾಮಿ ವಿವೇಕನಂದ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜಶೇಖರ, ಸಲ್ಲಾವುದಿನ್ ಪಕ್ಷಿ ಪ್ರೇಮಿ, ನ.ಯೋ.ಪ್ರ ಅಧ್ಯಕ್ಷರಾದ ಅಬ್ದುಲ್ ಗಫೂರಸಾಬ್, ಜಯಪ್ರಕಾಶ, ತಾ.ಖಾ.ಶಿ.ಸಂ,ಒಕ್ಕೂಟದ ಅಧ್ಯಕ್ಷರಾದ ರಾಜಾ ಸುಭಾಶ್ಚಂದ್ರನಾಯಕ, ಶರ್ಫುದಿನ್ನ್ ಪೋತ್ನಾಳ್ ತಾ.ಆರೋಗ್ಯಧಿಕಾರಿ ಡಾ.ಶರಣಬಸವರಾಜ, ಬಿ.ಇ.ಓ.ಚಂದ್ರಶೇಖರ .ಡಿ, ಜೆಸ್ಕಾಂ ಎ.ಇ.ಇ.ವೈದ್ಯನಾಥ್, ಲಿಂಗಸೂಗೂರು ಸ್ವಾಮಿ ವಿವೇಕನಂದ ಆಯುರ್ವೇದ ವೈದ್ಯಕೀಯ ಕಾಲೇಜಿನ ಅಧ್ಯಕ್ಷರಾದ ಶಾಂತನಗೌಡ, ಖಾಲೀದ್ ಖಾದ್ರಿ,ಡಾ.ಆಸಿಫ್, ಕೆ.ಬಸವಂತಪ್ಪ, ರಾಮಕೃಷ್ಣ, ಇರ್ಫಾನ್ ಕೆ ಅಧ್ಯಕ್ಷರು ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಸಿಂಧನೂರ, ಪ್ರವೀಣ್ ಕುಮಾರ, ಸರ್ವೋದಯ ಶಿಕ್ಷಣ ಸಂಸ್ಥೆಯ ದತಾತ್ರೇಯಮೇಟಿ, ಸರ್ವೋದಯ ಪಬ್ಲಿಕ್ ಸ್ಕೂಲ್‌ನ ಮುಖ್ಯಗುರು ರಂಗಪ್ಪ, ಸರ್ವೋದಯ ಸ್ಕೂಲ್ ಆಫ್ ನರ್ಸಿಂಗ್ ಮತ್ತು ಪ್ಯಾರ ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಶಿವಕುಮಾರ, ಸರ್ವೋದಯ ಫಾರ್ಮಸಿ ಕಾಲೇಜಿನ ಪ್ರಾಚಾರ್ಯರಾದ ನವೀನ್, ಸರ್ವೋದಯ ಪಿ.ಯು, ಕಾಲೇಜಿನ ಪ್ರಾಚಾರ್ಯರಾದ ರೇಣುಕಮ್ಮ ಸೇರಿದಂತೆ ಶಿಕ್ಷಣ ಸಂಸ್ಥೆಯಲ್ಲಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.



