ಲಿಂಗಸಗೂರು : ಜ 10
ಪತ್ರಕರ್ತ ,ನಿರೂಪಕ ಹಾಗೂ ಕಲಾವಿದ ಶಶಿಕುಮಾರ್ ಲಕ್ಷ್ಮಿ ಅವರು ರಾಷ್ಟ್ರಮಟ್ಟದ ಕಾಯಕ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಶನಿವಾರ ಜ 10 ರಂದು ಐ.ಎಂ.ಐ ಹಾಲ್ ಲಿಂಗಸಗೂರಿನಲ್ಲಿ ನಡೆಯುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಡಾ.ಮಲ್ಲಿಕಾರ್ಜುನ ಹಿರೇಮಠ ಅವರಿಗೆ ಅಭಿನಂದನಾ ಸಮಾರಂಭ ಮತ್ತು ಚಿಂತನೆಗಳ ಸಂಗ್ರಹ ಕೃತಿ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಶಿಕುಮಾರ್ ಲಕ್ಷ್ಮಿ ಅವರಿಗೆ ಅವರ ಸಮಾಜಮುಖಿ ಸೇವೆ ಹಾಗೂ ಪ್ರತಿಭೆಯನ್ನು ಗುರುತಿಸಿ ರಾಷ್ಟ್ರಮಟ್ಟದ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಎಂದು ಉಮಾದೇವಿ ಹಿರೇಮಠ ಸಂಸ್ಥಾಪಕ ಸ್ವಾಮಿ ಚಾರಿಟೇಬಲ್ ಟ್ರಸ್ಟ್, ಅಮರಯ್ಯಸ್ವಾಮಿ ಹರೇಟನೂರ ಅಧ್ಯಕ್ಷ ಕಾರುಣ್ಯ ನೆಲೆ ವೃದ್ಧಾಶ್ರಮ ಇವರು ತಿಳಿಸಿದ್ದಾರೆ.

