ರಾಯಚೂರು ಜನವರಿ 08 (ಕರ್ನಾಟಕ ವಾರ್ತೆ): ಇಲ್ಲಿನ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ-02ರ 11ಕೆವಿ ಹೆಚ್ಚುವರಿ ಪರಿವರ್ತಕಗಳ ಕಾಮಗಾರಿ ಕೈಗೊಂಡ ಪ್ರಯುಕ್ತ ಜನವರಿ 10ರ ಬೆಳಿಗ್ಗೆ 11ರಿಂದ ಸಂಜೆ 5ಗಂಟೆವರೆಗೆ ಶಿವಂ ಅಸ್ಪತ್ರೆ, ಮಾಂಗಲ್ಯ ಶಾಪಿಂಗ್ ಮಾಲ್, ಲೋಹಾರ ವಾಡಿ, ಗಾಂಧಿ ಚೌಕ್, ಬಂದಾರ ಗಾಲ್ಲಿ, ಎಂ.ಜಿ.ರಸ್ತೆ, ಹರಿಹರ ರಸ್ತೆ, ಮಕ್ತಲ್ ಪೇಟೆ, ಪಿಂಜರ ವಾಡಿ, ಶರಣಬಸವೇಶ್ವರ ಆಸ್ಪತ್ರೆ, ಬೆಟ್ಟದೂರ ಆಸ್ಪತ್ರೆ, ಪ್ಯಾರೇಸ್ ಗಾರ್ಡನ್, ಕುಂಬಾರ ಓಣಿ, ಮಡ್ಡಿ ಪೇಟೆ, ಬ್ರೆಸ್ತಾವಾರ ಪೇಟೆ, ಚಂದ್ರ ಮೌಳೇಶ್ವರ ಚೌಕ್ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ಗ್ರಾಹಕರ ನಿರಂತರ ಸೇವಾ ಕೇಂದ್ರದ ದೂರವಾಣಿ ಸಂಖ್ಯೆ: 08532-226386, 08532-231999, 9448395622ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ-02ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
