ಮಾನ್ವಿ: ಪಟ್ಟಣದ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಮೇಲೆ ಕರ್ನಾಟಕ ಲೋಕಯುಕ್ತ ತಂಡದಿAದ ದಾಳಿ ನಡೆಸಿ ದಾಖಲೆಗಳನ್ನು ಕರ್ನಾಟಕ ಲೋಕಯುಕ್ತ ಡಿವೈಎಸ್.ಪಿ. ಹೋಸಪೇಟೆ ಸಚೀನ್ ಛಲವಾದಿ ಪರಿಶೀಲಿಸಿದರು.
ಭೂದಾಖಲೆಗಳ ಸಹಾಯಕ ನಿರ್ದೇಶಕ ಮಹಮ್ಮದ್ ನೂರುದಿನ್ನ್ ರವರಿಂದ ಅಗತ್ಯ ದಾಖಲೆಗಳನ್ನು ಪಡೆದು ಪರಿಶೀಲಿಸಿ ರೈತರಿಂದ ಜಮೀನು ಆಳತೆ ಸೇರಿದಂತೆ ವಿವಿಧ ಖಾತೆಗಳಿಗೆ ಸಂಬAದಿಸಿದAತೆ ಬಂದಿರುವ ಅರ್ಜಿಗಳು ಬಾಕಿ ಇರುವ ಅರ್ಜಿಗಳು, ತಾಂತ್ರಿಕ ತೊಂದರೆಗಳು,ಭೂಮಾಪಕರ ಹಾಗೂ ಸಿಬ್ಬಂದಿಗಳ ಕೊರತೆ,ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಲೋಪಗಳು ಕಂಡು ಬಂದಲ್ಲಿ ನೋಟಿಸ್ ನೀಡಲಾಗುವುದು ಹಾಗೂ ಉನ್ನತ ಅಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ತಿಳಿಸಿದರು.

