ಸಿಂಧನೂರು : ನಗರದ ಮಿಲಾಪ ಶಾದಿ ಮಹಲ್ ನಲ್ಲಿ ಜ 07 ರಂದು ನಡೆದ ಪ್ರಗತಿಪರ ಚಿಂತಕರು ಹಾಗೂ ಸಮಾನ ವಯಸ್ಕರ ಸಂಘಟನೆಕಾರರ ಕ್ರಿಯಾ ಸಮಿತಿಯ ಸಭೆ ನಡೆಯಿತು .. ಈ ಸಭೆಯ ಅಧ್ಯಕ್ಷತೆಯನ್ನು ಮುಖಂಡರಾದ ಬಾಬರ್ ಪಾಷಾ ರವರು ವಹಿಸಿದ್ದರು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಗತಿಪರ ಸಂಘಟನೆಯ ಚಂದ್ರಶೇಖರ್ ಗೋರೆಬಾಳ್ ಇವರು ಕೇಂದ್ರ ಸರ್ಕಾರ ಜಾರಿಗೆ ತರುವುದಾಗಿ ಪ್ರಕಟಿಸಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ (Special Electoral Roll Revision – SIR) ಬಗ್ಗೆ ದೇಶದ ಜನರಿಗೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿದೆ. ಇದರ ಸಾದ್ಯ–ಸಾದ್ಯತೆಗಳು, ಅದರ ಮೂಲಕ ಉಂಟಾಗಬಹುದಾದ ಮಾರಕ ಪರಿಣಾಮಗಳು, ಮತ್ತು ಸಮುದಾಯಗಳ ಮೇಲೆ ಬೀರುವ ಪ್ರಭಾವವನ್ನು ಸಮಗ್ರವಾಗಿ ವಿಶ್ಲೇಷಿಸುವ ಅಗತ್ಯ ಹೆಚ್ಚುತ್ತಿದೆ. ಈ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ತಿಳಿಸಿದರು .ನಂತರ ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷರಾದ ಹುಸೇನ್ ಸಾಬ್ ಇವರು SIR ಕುರಿತು ಜಾಗೃತಿ ಮೂಡಿಸುವ
ಈ ಮಹತ್ವದ ವಿಷಯದ ಕುರಿತಂತೆ
ಸಿಂಧನೂರಿನ ಮುಸ್ಲಿಂ ಸಮುದಾಯ ಹಾಗೂ ವಿವಿಧ ಸಮಾನ ವಯಸ್ಕರ ಸಂಘಟನೆಗಳು ಪ್ರಗತಿಪರ ಶಕ್ತಿಗಳು ಜಂಟಿ ಕ್ರಿಯಾ ಸಮಿತಿ ಒಂದು ಸಂವಾದವನ್ನು ಏರ್ಪಡಿಸುವ ಕುರಿತು ತೀವ್ರ ಚಿಂತನೆ ನಡೆಸಿದೆ. ರಾಜ್ಯ–ರಾಷ್ಟ್ರ ಮಟ್ಟದಲ್ಲಿ ನಡೆಯುತ್ತಿರುವ ಚರ್ಚೆಗಳ ನಡುವೆಯೇ, ಸ್ಥಳೀಯವಾಗಿ ವಿಷಯದ ಅರಿವು ಮೂಡಿಸಲು, ಜನರಲ್ಲಿ ಜಾಗೃತಿ ತರಲು ಮತ್ತು ಸಮಾಜದ ಒಗ್ಗಟ್ಟಿನ ಧ್ವನಿ ರೂಪಿಸಲು ವಿವಿಧ ಸಮಾನ ಮನಸ್ಕ ಸಂಘಟನೆಗಳು, ಪ್ರಗತಿಪರ ಶಕ್ತಿಗಳು ಮತ್ತು ಹಿತಾಸಕ್ತರನ್ನು ಒಂದೇ ವೇದಿಕೆಯಡಿ ತರಬೇಕೆಂಬುದು ಜಂಟಿ ಸಮಿತಿಯ ಉದ್ದೇಶ. ಈ ಸರ್ವಾನುಮತದ ಆಧಾರದ ಮೇಲೆ ಈ ಸಮಿತಿಗೆ
“ಮತದಾರರ ಪಟ್ಟಿಯ ಪರಿಷ್ಕರಣ ಜಾಗೃತ ವೇದಿಕೆ”
ಎಂಬ ಹೆಸರನ್ನು ನೀಡಲಾಗಿದೆ.
ಜನವರಿ 11 ರ ರವಿವಾರ ಜಾಗೃತಿ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು , ಈ ಸಂವಾದದಲ್ಲಿ ಗಣ್ಯ ವಿಚಾರವಾದಿ, ಲೇಖಕ ಹಾಗೂ ಸಾಮಾಜಿಕ ಚಿಂತಕರಾದ
ಶ್ರೀ ಶಿವಸುಂದರ್
ಹಾಗೂ ಅನೇಕ ಸಕ್ರಿಯ ಸಾಮಾಜಿಕ ಮುಖಂಡರು ಭಾಗವಹಿಸಿ
SIR ನ ಕಾನೂನು, ಸಾಮಾಜಿಕ, ರಾಜಕೀಯ ಹಾಗೂ ಮಾನವೀಯ ಅಂಶಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಹಾಗೂ SIR ನ ಸಂವಾದ ಕಾರ್ಯಕ್ರಮ ಈ ಸಭೆಯು ಜನರ ಚಿಂತನೆಗೆ ಸ್ಪಂದಿಸುವಂತಹ ಮಹತ್ವದ ವೇದಿಕೆಯಾಗಿ ರೂಪುಗೊಳ್ಳಲಿದೆ. ಎಂದು ತಿಳಿಸಿದರು.
ಈ ಸಂವಾದ ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ
ಪೂರ್ವಭಾವಿ ಸಭೆ – ಆಹ್ವಾನ
ಮುಂದಿನ ಕ್ರಮಗಳ ರೂಪುರೇಷೆ ಸಿದ್ಧಪಡಿಸುವ ಸಲುವಾಗಿ,
ವೇದಿಕೆಯ ಪದಾಧಿಕಾರಿಗಳ ಆಯ್ಕೆ ಮತ್ತು ಸಂವಾದದ ಸಕಲ ವ್ಯವಸ್ಥೆಗಳ ಬಗ್ಗೆ ಚರ್ಚಿಸಲು
ದಿನಾಂಕ: ಜನವರಿ 08
ಸಮಯ: ಸಂಜೆ 4:00 ಗಂಟೆ,
ಸ್ಥಳ: ಮಿಲಾಪ್ ಶಾದಿ ಮಹಲ್, ಸಿಂಧನೂರು ಈ ಸಭೆಯಲ್ಲಿ
ಸಮಾನ ಮನಸ್ಕ ಸಂಘಟನೆಗಳ ಪ್ರತಿನಿಧಿಗಳು
ಸಾಮಾಜಿಕ ಸಂಘಟಕರು
ವಿವಿಧ ಸಮುದಾಯಗಳ ಮುಖಂಡರು, ಎಲ್ಲಾ ಸಂಘ ಸಂಸ್ಥೆಯ ಪದಾಧಿಕಾರಿಗಳು,
ಸಾಮಾಜಿಕ ಚಳವಳಿಗಳ ಕಾರ್ಯಕರ್ತರು,
ಬೌದ್ಧಿಕ ವಲಯದ ಸ್ನೇಹಿತರು
ಅವಶ್ಯವಾಗಿ ಹಾಜರಾಗುವಂತೆ ವಿನಂತಿ.
ಈ ಕಾರ್ಯಕ್ರಮದಲ್ಲಿ
ವೇದಿಕೆಯ ಆಶಯ–
ಸಾಮಾಜಿಕ SIR ಬಗ್ಗೆ ಜಾಗೃತಿ ಮೂಡಿಸುವದು
ಮತದಾರರ ಪಟ್ಟಿಯ ಸಂಶೋಧನೆಯಲ್ಲಿ ನ್ಯಾಯ, ಪಾರದರ್ಶಕತೆ ಮತ್ತು ಸಮಾನತೆಯನ್ನು ಒತ್ತಿ ಹೇಳುವುದು
ಜನರ ಹಕ್ಕು–ಸ್ವತಂತ್ರ್ಯಗಳ ರಕ್ಷಣೆಗೆ ಒಗ್ಗಟ್ಟಿನಿಂದ ಚಿಂತನೆ ಮಾಡುವುದು
ಶಾಂತಿ, ಸಹಿಷ್ಣುತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುವದು
ಎಲ್ಲರ ಸಹಕಾರ – ಸಮಾಜದ ಬಲ
ಎಲ್ಲರ ಭಾಗವಹಿಸುವುದು.
ಈ ಕಾರ್ಯಕ್ರಮದಲ್ಲಿ
ಬಾಬರ್ ಪಾಷಾ ಮುಖಂಡರು , ಪ್ರಗತಿಪರ ಸಂಘಟನೆಗಳ ಒಕ್ಕೂಟದ ಚಂದ್ರಶೇಖರ್ ಗೊರೆಬಾಳ್ , ಹುಸೇನ್ ಸಾಬ್ ಅಧ್ಯಕ್ಷರು ಜಮಾತೆ ಇಸ್ಲಾಮ್ ಹಿಂದ್ ಸಿಂಧನೂರು , ಸಿಪಿಐ(ಎಂ)ನ ಬಸವಂತರಾಯಗೌಡ ಕಲ್ಲೂರು, ಮನುಜಮತ ಬಳಗದ ಬಸವರಾಜ ಬಾದರ್ಲಿ,ಮುಖಂಡರು ಜಾಫರ್ ಜಹಾಗಿರ್ದಾರ್, ಕೃಷ್ಣಮೂರ್ತಿ ಧುಮತಿ, ಮನುಜಮತ ಬಳಗದ ಬಸವರಾಜ ಬಾದರ್ಲಿ,, ಮೊಹಸಿನ್ ಖಾದ್ರಿ , ಇರ್ಫಾನ್ ಕೆ ಅಧ್ಯಕ್ಷರು ಸನ್ ರೈಸ್ ಶಿಕ್ಷಣ ಸಂಸ್ಥೆ ಹಾಗೂ ಸಂಪಾದಕರು ನೈಜ್ಯ ದಸೆ ಕನ್ನಡ ದಿನಪತ್ರಿಕೆ , ಆಬುಲೈಸ್ ನಾಯ್ಕ್ solidarity ಯೂಥ್ ಮೂವ್ಮೆಂಟ್ ,ನಿಸಾರ್ ಖಾನ್ , ತನ್ವೀರ್, ಅಮ್ಜದ್, ಶಫಿ ಖಾನ್, ಶೋಹೇಲ್ ದೇಸಾಯಿ, ಮೊಹಮ್ಮದ್ , ಲಿಯಾಖತ್ , ಸರ್ಫರಾಜ್ ಖಾನ್, ಖಾಜಿ ಜಾವೇದ್, ಇನ್ನಿತರ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು

