ಬುದ್ದಿನ್ನಿ: ಪ್ರತಾಪ ತಂದೆ ಯಮನಪ್ಪ ಇವರು ರಾಯಚೂರು ಜಿಲ್ಲೆ ಮಸ್ಕಿ ತಾಲ್ಲೂಕು ಬುದ್ದಿನ್ನಿ(S) ಗ್ರಾಮದವರು.ಪ್ರಾಥಮಿಕ ಶಿಕ್ಷಣ ತಮ್ಮ ಊರಿನಲ್ಲಿ ಪಡೆದು ಪ್ರೌಢ ಶಿಕ್ಷಣ ವೀರೇಶ್ವರ ಪ್ರೌಢ ಶಾಲೆಯಲ್ಲಿ ಪಡೆದು ಪದವಿ ಪೂರ್ವ ಶಿಕ್ಷಣ ವೀರಮ್ಮ ವಸ್ತ್ರದ ಪದವಿ ಪೂರ್ವ ಕಾಲೇಜಿನಲ್ಲಿ ಪಡೆದು ಪದವಿ ಪ್ರೆಸಿಡೆನ್ಸಿ ಕಾಲೇಜು ಮಾಸ್ಕಿಯಲ್ಲಿ ಪಡೆದು.ಪ್ರತಾಪ್ ಎಂಬ ಯುವಕ ಶಾಲಾ ಕಾಲೇಜು ದಿನಗಳಲ್ಲಿ ಕೂಡಾ ನಿರಂತರವಾಗಿ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಯನ್ನು ನಡೆಸುತ್ತಿದ್ದರು. ಮತ್ತು ಇವರು KAS ಮತ್ತು ಹತ್ತು ಹಲವಾರು ಹುದ್ದೆಗಳಿಗೂ ಕೂಡಾ ಪ್ರಯತ್ನ ಮಾಡಿದರು ಆದರೆ ಪ್ರಯತ್ನ ವಿಫಲವಾಯಿತು ಆದರೂ ಪ್ರತಾಪ ಇವರು ಓದುವನ್ನು ಬಿಡಲಿಲ್ಲ ಓದಿನಲ್ಲಿ ಮುಂದುವರಿದರೂ. ನಿರಂತರ ಪ್ರಯತ್ನ,ಓದುವಿಕೆಯಿಂದ ಇಂದು ಕೆಕೆಆರ್ಟಿಸಿ ಸಹಾಯಕ ಲೆಕ್ಕಿಗ ಹುದ್ದೆಗೆ ಆಯ್ಕೆಯಾದ ಪ್ರತಾಪ್ ಇವರಿಗೆ ಆತ್ಮೀಯ ಗೆಳೆಯರಾದ ಬಸವರಾಜ ದೇವರಮನಿ,ಪ್ರಶಾಂತ್, ಅರುಣ್,ವಿನೋದ್, ಮೆಹಬೂಬ್,ಇಸಾಕ್ ಅತ್ತಾರ್ ಬಳಗಾನೂರ, ನಿಖಿಲ್ ಶೆಟ್ಟಿ,ಸಿದ್ದನಗೌಡ, ಹಂಪನಗೌಡ, ಉಮೇರ್ ಅತ್ತಾರ ಬಳಗಾನೂರ,ರಮೇಶ್ ಉಪ್ಪಲದೊಡ್ಡಿ, ಸಮೀರ್ ಬಳಗಾನೂರು,ಸಿದ್ದಣ್ಣ, ರಾಘವೇಂದ್ರ,ಧರೆಸಾಬ್. ನಿಂಗಣ್ಣ,ಇವರೆಲ್ಲರು ಅಭಿನಂದಿಸಿ ನಮ್ಮ ಗೆಳೆಯ ಚಿಕ್ಕ ವಯಸ್ಸಿನಲ್ಲಿ ಸರ್ಕಾರಿ ನೌಕರಿ ತೆಗೆದುಕೊಂಡಿರುವುದು ಖುಷಿಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ


